• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿ ದೋಚಿ ಪರಾರಿಯಾಗುತ್ತಿದ್ದವನ್ನು ಹಿಡಿದ ಪೊಲೀಸರು

By Vanitha
|

ಬೆಂಗಳೂರು, ಅಕ್ಟೋಬರ್, 17: ದೊಡ್ಡಬಳ್ಳಾಪುರದ ಎಸ್ ಐ ಜಗದೀಶ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು ಪೊಲೀಸ್ ಇಲಾಖೆಯನ್ನೇ ಬೆಚ್ಚಿಬಿಳಿಸಿದೆ. ಆದರೆ ಬೆಂಗಳೂರಿನ ಪೇದೆಗಳಿಬ್ಬರು ಪ್ಲಾಟ್ ಗೆ ನುಗ್ಗಿ ಯುವತಿಯನ್ನು ದೋಚಿದ್ದ ಕಳ್ಳರಲ್ಲಿ ಒಬ್ಬನನ್ನು ಬೆನ್ನಟ್ಟಿ ಹಿಡಿದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿವೇಕ ನಗರದ ಗಸ್ತು ಪೇದೆಗಳಾದ ಈರಯ್ಯ ಹಿರೇಮಠ ಹಾಗೂ ರಾಮಚಂದ್ರ ಪ್ರಶಂಸೆಗೆ ಒಳಗಾದ ಇಬ್ಬರು ಪೇದೆಗಳು. ಫ್ಲ್ಯಾಟ್ ಮಾಲಿಕರು ಹಾಗೂ ಯುವತಿ ದೂರು ದಾಖಲಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಪೋಲಿಸರು ಕಂಟ್ರೋಲ್ ರೂಂ ಮೂಲಕ ಎಲ್ಲೆಡೆ ಮಾಹಿತಿ ರವಾನೆ ಮಾಡಿದ್ದಾರೆ. ಪ್ರಕರಣ ತಿಳಿದ ಇಬ್ಬರು ಪೇದೆಗಳು ಶುಕ್ರವಾರ ಮುಂಜಾನೆ 4.30ರಲ್ಲಿ ವೇಗವಾಗಿ ಬರುತ್ತಿದ್ದ ಆಟೋವನ್ನು ಅನುಮಾನದಿಂದ ತಡೆದಿದ್ದಾರೆ.

ಆಗ ಪೊಲೀಸರನ್ನು ಕಂಡು ಭಯಭೀತರಾದ ಇಬ್ಬರು ಕಳ್ಳರು ಆಟೋ ನಿಲ್ಲಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಇವರಿಬ್ಬರನ್ನು ಬೆನ್ನಟ್ಟಿದ ಪೇದೆಗಳು ಶರವಣನನ್ನು ಬಂಧಿಸಿದ್ದು, ಆಕಾಶ್ ನ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ. ಬಂಧಿತನಿಂದ 2,000 ರೂ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.[ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

ಏನಿದು ಘಟನೆ ?

ಉತ್ತರ ಪ್ರದೇಶ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆ ವಿವೇಕ ನಗರದ ಈಜಿಪುರ ಫ್ಲ್ಯಾಟ್ ನಲ್ಲಿ ತನ್ನ ಸ್ನೇಹಿತೆ ಜೊತೆ ನೆಲೆಸಿದ್ದಳು. ಸ್ನೇಹಿತೆ ಗುರುವಾರ ಊರಿಗೆ ಹೋದ ಕಾರಣ ಅವಳು ಫ್ಲ್ಯಾಟ್ ನಲ್ಲಿ ಒಬ್ಬಂಟಿಯಾಗಿದ್ದಳು.

ಯುವತಿ ಏಕಾಂಗಿಯಾಗಿ ಇರುವುದನ್ನು ಗಮನಿಸಿದ ತಮಿಳುನಾಡು ಮೂಲದ ಶರವಣ ಮತ್ತು ಆಕಾಶ್ ಗುರುವಾರ ತಡರಾತ್ರಿ 2.30 ರ ಸುಮಾರಿನಲ್ಲಿ ಆಟೋದಲ್ಲಿ ಫ್ಲ್ಯಾಟ್ ಬಳಿ ಬಂದಿದ್ದಾರೆ. ನಂತರ ಬಾಲ್ಕನಿ ಮೂಲಕ ಅಪಾರ್ಟ್ ಒಳಗೆ ಪ್ರವೇಶಿಸಿದ ಇಬ್ಬರಲ್ಲಿ ಆಕಾಶ ಎಂಬಾತ ಹಣ ಮತ್ತು ಆಭರಣಕ್ಕಾಗಿ ಆಕೆಯ ಕಬಾರ್ಡ್ ನಲ್ಲಿ ತಡಕಾಡುತ್ತಿದ್ದನು.[ಕರ್ತವ್ಯ ಮೆರೆದ ಸಂಚಾರಿ ಪೊಲೀಸರಿಗೆ ಶಭಾಶ್ ಗಿರಿ]

ಆತನ ತಡಕಾಟಕ್ಕೆ ಎಚ್ಚರಗೊಂಡ ಯುವತಿ ಗಾಬರಿಯಿಂದ ಕಿರುಚಿದ್ದಾಳೆ, ಆಗ ಆಕೆಗೆ ಚಾಕು ತೋರಿಸಿ ಹಣ ಮತ್ತು ಆಭರಣ ಕೊಡಲು ಆಕಾಶ್ ಕೇಳಿದ್ದಾನೆ. ಬಳಿಕ ಗಾಬರಿಯಿಂದ ತನ್ನ ಬಳಿ ಇದ್ದ 2,000 ಹಣ ಮತ್ತು ಮೊಬೈಲ್ ನೀಡಿದ್ದಾಳೆ. ಮತ್ತಷ್ಟು ಹಣ ಕೊಡುವಂತೆ ಆಕೆ ಮೇಲೆ ಒತ್ತಡ ಹೇರಿದ್ದಾನೆ. ಹಣ ನೀಡಲು ಪ್ರತಿರೋದ ವ್ಯಕ್ತಪಡಿಸಿದ ಕಾರಣ ಕಳ್ಳರು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ.

ಕಳ್ಳರ ವರ್ತನೆಯಿಂದ ಬೆದರಿದ ಯುವತಿ ಅವರಿಂದ ತಪ್ಪಿಸಿಕೊಂಡು ಮಾಲೀಕರ ಮನೆಗೆ ಹೋಗಿ ನಡೆದ ಘಟನೆ ವಿವರಿಸಿದ್ದಾಳೆ. ಬಳಿಕ ಮಾಲೀಕರು ಮತ್ತು ಯುವತಿ ಸಮೀಪದ ವಿವೇಕ ನಗರ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ.

ಕಳ್ಳನನ್ನು ಹಿಡಿದ ಪೊಲೀಸರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Two thieves are theft mobile and money in Vivekanagara apartment, Bengaluru, on, Friday, October 16th. But one person is already arrested.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more