ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿ
ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ವೈರಸ್‌ನಿಂದ ಇಬ್ಬರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ರಾಜಧಾನಿಯಲ್ಲಿ ಕೊರೊನಾದಿಂದ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಬೆಂಗಳೂರಿನ ಅಗ್ರಹಾರ ದಾಸರಹಳ್ಳಿ ಸೋಂಕಿತ ವೃದ್ಧೆ (61) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ವೃದ್ಧೆಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆ ಸಿಬ್ಬಂದಿ ಕೊವಿಡ್-19 ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರೋದು ಪತ್ತೆಯಾಗಿತ್ತು. ವೃದ್ಧೆಯ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಂಕು ತಗುಲಿದೆ. ಸೋಂಕು ಪತ್ತೆಯಾದ 8 ದಿನಗಳ ಬಳಿಕ ಚಿಕಿತ್ಸ ಫಲಕಾರಿಯಾಗದೇ ವೃದ್ಧೆ ಸಾವನ್ನಪ್ಪಿದ್ದಾರೆ.
ಮಹಾಲಕ್ಷ್ಮಿ ಲೇಔಟ್ಟ್‌ನಲ್ಲಿ ಮೃತ ವೃದ್ಧ(65)ನ ರಿಪೋರ್ಟ್ ಇಂದು ಬಂದಿದ್ದು, ಸೋಂಕು ತಗುಲಿರೋದು ದೃಢಪಟ್ಟಿದೆ. ವರದಿ ಬರುವ ಮೊದಲೇ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಅಂತ್ಯ ಸಂಸ್ಕಾರದಲ್ಲಿ ಯಾರು ಭಾಗವಹಿಸಿದ್ದರು ಎಂಬ ಮಾಹಿತಿಯನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ಬೆಂಗಳೂರಿನ 70 ವಾರ್ಡ್‌ಗಳಿಗೆ ವ್ಯಾಪಿಸಿದ ಕೊರೊನಾ
ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮಹಾಮಾರಿ 70 ವಾರ್ಡ್‍ಗಳಿಗೆ ವ್ಯಾಪಿಸಿದೆ. ಈಗಾಗಲೇ 40 ಕಂಟೈನ್ಮೆಂಟ್ ಝೋನ್‍ಗಳನ್ನು ಸ್ಥಾಪಿಸಿದ್ದರೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಹೊಸ ವಾರ್ಡ್‍ಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಎಲ್ಲೆಲ್ಲಿ ಕೊರೊನಾ ಸೋಂಕಿತರಿದ್ದಾರೆ
ಬೊಮ್ಮನಹಳ್ಳಿ ವಲಯದ 6, ಮಹದೇವಪುರದ 7, ಪೂರ್ವ ವಲಯದ 16, ದಕ್ಷಿಣದಲ್ಲಿ 16, ಪಶ್ಚಿಮದಲ್ಲಿ 17, ಯಲಹಂಕದಲ್ಲಿ 3, ಆರ್‍ಆರ್ ನಗರದಲ್ಲಿ 4 ಹಾಗೂ ದಾಸರಹಳ್ಳಿಯ 1 ವಾರ್ಡ್‍ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕೊರೊನಾ ಸೋಂಕಿತರ ಜತೆ ಸಂಪರ್ಕ ಹೊಂದಿರುವವರನ್ನು ಪತ್ತೆಹಚ್ಚಲು ಸಾಧ್ಯವಾಗದೆ ಇರುವುದರಿಂದ ಸೋಂಕು ಹಸಿರು ವಲಯಗಳಿಗೂ ಕಾಲಿಡುತ್ತಿದೆ. ಹೊಸ ವಾರ್ಡ್‍ಗಳಲ್ಲಿ ಹೆಚ್ಚುತ್ತಿರುವ ಎ ಸಿಂಪ್ಟಮ್ಯಾಟಿಕ್ ಕೇಸ್‍ಗಳು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸುತ್ತಿವೆ. 198 ವಾರ್ಡ್‍ಗಳ ಪೈಕಿ 70 ವಾರ್ಡ್‍ಗಳಿಗೆ ಕೊರೊನಾ ಕಾಲಿಟ್ಟಿರುವುದರಿಂದ ಉಳಿದ ವಾರ್ಡ್‍ಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಬೆಂಗಳೂರು ಹೊರವಲಯಕ್ಕೂ ಹಬ್ಬಿದ ಕೊರೊನಾ
ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ. ಪ್ರತಿಷ್ಠಿತ ಟವರ್ ನೆಟ್‍ವರ್ಕ್ ಕಂಪೆನಿಯೊಂದರಲ್ಲಿ ಲೋಡಿಂಗ್, ಅನ್‍ಲೋಡಿಂಗ್ ಕೆಲಸ ಮಾಡುತ್ತಿರುವ ಒರಿಸ್ಸಾ ಮೂಲದ ಮೂವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.

ವಾಹನಗಳ ಚಾಲಕರಿಂದ ಕೊರೊನಾ ಸೋಂಕು
ನೆಟ್‍ವರ್ಕ್ ಸಂಸ್ಥೆಗೆ ಬರುವ ಮಹಾರಾಷ್ಟ್ರ ಮತ್ತು ತಮಿಳುನಾಡಿನ ವಾಹನಗಳ ಚಾಲಕರು ಮತ್ತು ಕ್ಲೀನರ್‍ಗಳಿಂದ ಈ ಮೂವರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಮೂವರು ಒಂದೇ ಕೊಠಡಿಯಲ್ಲಿ ವಾಸಿಸುತ್ತಿರುವುದರಿಂದ ಎಲ್ಲರಿಗೂ ಕೊರೊನಾ ಸೋಂಕು ಹಬ್ಬಿರುವ ಲಕ್ಷಣಗಳಿವೆ.
ತ್ತೀಚೆಗೆ ಮೂವರಲ್ಲಿ ಒಬ್ಬನಿಗೆ ಜ್ವರ ಕಾಣಿಸಿಕೊಂಡು ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ತಪಾಸಣೆಗೊಳಪಟ್ಟಿದ್ದ. ಆ ಸಂದರ್ಭದಲ್ಲಿ ವೈದ್ಯರು ಏನೂ ತೊಂದರೆ ಇಲ್ಲ ಎಂದು ತಿಳಿಸಿದ್ದರು.












Click it and Unblock the Notifications