ಬೆಂಗಳೂರಿನಲ್ಲಿ ನೀರು ತುಂಬಿದ್ದ ನೆಲಮಾಳಿಗೆಯಲ್ಲಿ ಮುಳುಗಿ ಇಬ್ಬರು ಅಪ್ರಾಪ್ತ ಬಾಲಕರು ಸಾವು!
ಬೆಂಗಳೂರು ಅಕ್ಟೋಬರ್ 30: ನಗರದ ಸುದ್ದಗುಂಟೆಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡದ ನೆಲಮಾಳಿಗೆಯಲ್ಲಿ ತುಂಬಿದ ನೀರಿನಲ್ಲಿ ಮುಳುಗಿ ಇಬ್ಬರು ಅಪ್ರಾಪ್ತ ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಸಂತ್ರಸ್ತರನ್ನು ಅರ್ಷಲ್ ಖಾನ್ (9) ಮತ್ತು ಅಮೀನ್ ಖಾನ್ (7) ಎಂದು ಗುರುತಿಸಲಾಗಿದ್ದು ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಅವರನ್ನು ಹುಡುಕಿದ ಬಳಿಕ ಸುದ್ದಗುಂಟೆಪಾಳ್ಯದ ಡೈರಿ ಸರ್ಕಲ್ ಬಳಿಯ ಕಟ್ಟಡದಲ್ಲಿ ಶವ ಪತ್ತೆಯಾಗಿದೆ.

ಶುಕ್ರವಾರ ರಾತ್ರಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಭಾನುವಾರ ಸಂಜೆ ಪೊಲೀಸರಿಗೆ ಎರಡು ಶವಗಳ ಬಗ್ಗೆ ಮಾಹಿತಿ ಲಭಿಸಿದೆ. ಅವರನ್ನು ಅರ್ಷಲ್ ಮತ್ತು ಅಮೀನ್ ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ಕಟ್ಟಡದ ಬಳಿ ಆಟವಾಡಲು ಹೋಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications