ಬೆಂಗಳೂರು : ರಾಜಾಕಾಲುವೆ ಮಣ್ಣು ಕುಸಿದು, ಇಬ್ಬರ ಸಾವು
ಬೆಂಗಳೂರು, ಏಪ್ರಿಲ್ 14 : ರಾಜಾಕಾಲುವೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಲ್ವರು ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುಲಿಕೇಶಿ ನಗರ ಮುಖ್ಯ ರಸ್ತೆಯ ಬಿಜಿ ಗಾರ್ಡನ್ ಸಮೀಪ ಶನಿವಾರ ಸಂಜೆ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ಸುದರ್ಶನ್ ಮತ್ತು ಶಫೀಕ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಜಾರ್ಖಂಡ್ ಮೂಲದವರು.
ಒಟ್ಟು 8 ಕಾರ್ಮಿಕರು ರಾಜಾಕಾಲುವೆಯ ಮಣ್ಣನ್ನು ತೆಗೆಯುವ ಕೆಲಸ ಮಾಡುತ್ತಿದ್ದರು. ಆಗ ಮಣ್ಣು ಕುಸಿದು ಬಿದ್ದಿದೆ. ಸುದರ್ಶನ್ ಮತ್ತು ಶಫೀಕ್ ಮಣ್ಣಿನಡಿ ಸಿಲುಕಿದ್ದರು. ತಕ್ಷಣ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸುದರ್ಶನ್ ಮತ್ತು ಶಫೀಕ್ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.












Click it and Unblock the Notifications