ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಜಿಂಕೆ ಚರ್ಮ ಮಾರಾಟ, ಇಬ್ಬರ ಬಂಧನ

By Ashwath
|
Google Oneindia Kannada News

ಬೆಂಗಳೂರು, ಜೂ.11: ಚೀಲವೊಂದರಲ್ಲಿ ಜಿಂಕೆ ಚರ್ಮ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ನಾಲ್ಕು ಜಿಂಕೆ ಚರ್ಮಗಳನ್ನು ವಶಪಡಿಸಿಕೊಂಡಿದ್ದಾರೆ. ಕಿರಣ್(38)ಮತ್ತು ಕೃಷ್ಣಂರಾಜು(31)ಬಂಧಿತ ಆರೋಪಿಗಳು.

ಆರೋಪಿಗಳು ಚೀಲದಲ್ಲಿ ಜಿಂಕೆ ಚರ್ಮ ಇಟ್ಟುಕೊಂಡು ಮಾರಾಟ ಮಾಡಲು ಚಾಮರಾಜಪೇಟೆಯಿಂದ ಜಿಂಕೆ ಪಾರ್ಕ್ ರಸ್ತೆಯ ಕಡೆಗೆ ಬರುತ್ತಿದ್ದಾರೆ ಎಂಬ ಅಧಿಕೃತ ಸುಳಿವನ್ನು ಪಡೆದ ಕೆಂಪೇಗೌಡನಗರ ಪೊಲೀಸ್‌ ಇನ್ಸ್‍ಪೆಕ್ಟರ್ ಸಿ.ಡಿ.ನಾಗರಾಜು ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

deer skin

ಹುಲಿ ಚರ್ಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ: ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ರಾಮನಗರದ ನಿವಾಸಿಯೊಬ್ಬನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.[ಶೂಟರ್‌ಗಳಾಗಲು ಗನ್‌ ಕದ್ದ ಎನ್‌ಸಿಸಿ ವಿದ್ಯಾರ್ಥಿಗಳು]

ಇದಾಯತ್‌ವುಲ್ಲಾ(28)ಬಂಧಿತ ಆರೋಪಿ. ಕತ್ರಿಗುಪ್ಪೆ ರಿಂಗ್‌ ರೋಡ್‌ ಬಸ್‌ ನಿಲ್ದಾಣದ ಸಮೀಪ ಪ್ಲಾಸ್ಟಿಕ್ ಚೀಲದಲ್ಲಿ ಹುಲಿ ಚರ್ಮವನ್ನು ಮಾರಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಒಂದು ಹುಲಿ ಚರ್ಮ‌ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
Bangalore Kempegowda Nagar police arrested two persons for their alleged involvement in trade in deer skin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X