ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರ ಬಂಧನ
ಬೆಂಗಳೂರು, ಮಾರ್ಚ್ 13: ಕೆಲಸ ಕೊಡಿಸುವುದಾಗಿ ನಂಬಿಸಿ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರನ್ನು ತಲಘಟ್ಟಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ನಿವಾಸಿ ಪ್ರೇಮ್ , ಬಿಮ್ ಬಂಧಿತ ಆರೋಪಿಗಳು.ಸಂತ್ರಸ್ತ ಮಹಿಳೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಹೆಚ್ಚಿನ ಸಂಬಳದ ಕೆಲದ ಕೊಡಿಸುವುದಾಗಿ ನಂಬಿಸಿದ್ದರು. ಅಪಾರ್ಟ್‌ಮೆಂಟ್‌ನ ಕಾವಲು ಸಿಬ್ಬಂದಿಯ ಕೊಠಡಿಯಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿದ್ದರು. ಕೆಲ ಹೊತ್ತಿನ ನಂತರ ಪ್ರೇಮ್ ಸ್ಥಳದಿಂದ ತೆರಳಿದರೆ ಈತನ ಸ್ನೇಹಿತ ಬಿಮಲ್ ಕೂಡ ಬಂದು ಅತ್ಯಾಚಾರವೆಸಗಿದ್ದ.
ಅಲ್ಲದೆ ಎರಡು ದಿನಗಳವರೆಗೂ ಆಕೆಯನ್ನು ಅಲ್ಲೇ ಕೂಡಿಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ನಂತರ ಕೆಲಸ ಕೊಡಿಸದೆ ಅಲ್ಲಿಂದ ಕಳುಹಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಅಪಾರ್ಟ್‌ಮೆಂಟ್‌ನ ಕಾವಲು ಸಿಬ್ಬಂದಿ ರಾಮ್‌ಬಹದ್ದೂರ್ ನ್ನು ವಶಕ್ಕೆ ಪಡೆ ವಿಚಾರಣೆ ನಡೆಸಿದಾಗ ಪ್ರೇಮ್ ಬಗ್ಗೆ ಮಾಹಿತಿ ನೀಡಿದ್ದ ಅವನು ಕೊಟ್ಟ ಸುಳಿವನ್ನು ಹಿಡಿದು ಹೊರಟ ಪೊಲೀಸರು ಪ್ರೇಮ್‌ನನ್ನು ಬಂಧಿಸಿದ್ದಾರೆ.












Click it and Unblock the Notifications