ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗೀಗುಡ್ಡ ಹನುಮಜ್ಜಯಂತಿ ಉತ್ಸವಕ್ಕೆ ಭಕ್ತಿ, ಸಂಭ್ರಮದ ಚಾಲನೆ

|
Google Oneindia Kannada News

ಬೆಂಗಳೂರು, ನ 30: ಪ್ರತೀ ವರ್ಷ ಮಾರ್ಗಶಿರ ಶುಕ್ಲ ಪಕ್ಷದಲ್ಲಿ ನಗರದ ರಾಗೀಗುಡ್ಡ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆಯುವ ಹನುಮಜ್ಜಯಂತಿ ಉತ್ಸವಕ್ಕೆ ಬುಧವಾರ ಚಾಲನೆ ದೊರಕಿದೆ.

ಶ್ರೀಕ್ಷೇತ್ರ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀಸುಭುದೇಂದ್ರ ತೀರ್ಥರು 54ನೇ ಉತ್ಸವಕ್ಕೆ ದಿವ್ಯ ಆಶೀರ್ವಚನ ನೀಡುವ ಮೂಲಕ ಹನ್ನೆರಡು ದಿನಗಳ ಧಾರ್ಮಿಕ ಉತ್ಸವ ಆರಂಭಗೊಂಡಿದೆ. ಶ್ರೀಗಳನ್ನು ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರು ಪೂರ್ಣಕುಂಭದ ಮೂಲಕ ಸ್ವಾಗತವನ್ನು ನೀಡಿದರು.

"ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯೆಂದರೆ ಅದು ರಾಗೀಗುಡ್ಡದ ದೇವಾಲಯ, ಇದೊಂದು ಪವಿತ್ರವಾದ ಸನ್ನಿಧಾನ. ಎಂತದ್ದೇ ಒತ್ತಡಗಳಿದ್ದರೂ ರಾಗೀಗುಡ್ಡ ದೇವಾಲಯ ನಡೆಸುತ್ತಿರುವ ಪವಿತ್ರ ಕೆಲಸಕ್ಕೆ ಸಹಯೋಗ ನೀಡುವುದು ನಮ್ಮ ಕರ್ತವ್ಯ ಎಂದು ನಾವು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ" ಎಂದು ಮಂತ್ರಾಲಯ ಪೀಠಾಧಿಪತಿಗಳು ಆಶೀರ್ವಚನವನ್ನು ನೀಡಿದರು.

ಡಿಕೆಶಿ ಅರ್ಪಿಸಲು ಮುಂದಾದ ಬೆಳ್ಳಿ ಖಡ್ಗ ತಿರಸ್ಕರಿಸಿದ ಮಂತ್ರಾಲಯ ಸ್ವಾಮೀಜಿ ಡಿಕೆಶಿ ಅರ್ಪಿಸಲು ಮುಂದಾದ ಬೆಳ್ಳಿ ಖಡ್ಗ ತಿರಸ್ಕರಿಸಿದ ಮಂತ್ರಾಲಯ ಸ್ವಾಮೀಜಿ

ನವೆಂಬರ್ ಮೂವತ್ತರಂದು ಆರಂಭವಾಗಿರುವ ಹನುಮಜ್ಜಯಂತಿ ಉತ್ಸವ, ಡಿಸೆಂಬರ್ ಹನ್ನೊಂದರಂದು ಪ್ರಸನ್ನ ಆಂಜನೇಯಸ್ವಾಮಿಗೆ ಶತರುದ್ರ ಕ್ಷೀರಾಭಿಷೇಕದ ಮೂಲಕ ಸಂಪನ್ನಗೊಳ್ಳಲಿದೆ. ಪ್ರತೀ ದಿನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

12 Days 54th Hanuma Jayanti Festival Started In Ragigudda Temple In Bengaluru

ಹನ್ನೆರಡು ದಿನಗಳ ಉತ್ಸವದ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ಇಂತಿದೆ:

ಗುರುವಾರ (ಡಿ 1) - ಶ್ರೀ ಚಂಡಿಕಾ ಹೋಮ
ಶುಕ್ರವಾರ (ಡಿ 2) - ಶ್ರೀ ಪುರುಷಸೂಕ್ತ ಹೋಮ, ಸಾಯಂಕಾಲ ಅಷ್ಟಲಕ್ಷ್ಮೀ ಪೂಜೆ
ಸೋಮವಾರ (ಡಿ 5) - ಹನುಮಜ್ಜಯಂತಿ ಪ್ರಯುಕ್ತ ಲಕ್ಷಾರ್ಚನೆ, ಪವಮಾನ ಹೋಮ
ಶನಿವಾರ (ಡಿ 10) - ಮಹಾಮೃತ್ಯುಂಜಯ ಹೋಮ

ಇದಲ್ಲದೇ ಪ್ರತೀದಿನ ಸಾಯಂಕಾಲ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಪ್ರಮುಖವಾಗಿ ಡಿಸೆಂಬರ್ ಒಂದರಂದು ದಿ. ಗುರುರಾಜಲು ನಾಯ್ಡು ಅವರ ಪುತ್ರಿ ಶೀಲಾ ನಾಯ್ಡು ಅವರಿಂದ ಹರಿಕಥೆ, ಡಿಸೆಂಬರ್ ಹತ್ತರಂದು ಯಕ್ಷಸಿಂಚನ ಟ್ರಸ್ಟ್ ನಿಂದ 'ರಾವಣ ವಧೆ' ಯಕ್ಷಗಾನ ಕಾರ್ಯಕ್ರಮವಿರಲಿದೆ.

12 Days 54th Hanuma Jayanti Festival Started In Ragigudda Temple In Bengaluru

ಎರಡು ವರ್ಷಗಳ ಕೋವಿಡ್ ನಿರ್ಬಂಧದ ನಂತರ ಹನುಮಜ್ಜಯಂತಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಹನ್ನೆರಡು ದಿನಗಳ ಈ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಆಡಳಿತ ಮಂಡಳಿ, ಭಕ್ತವೃಂದ ಮತ್ತು ಕಾರ್ಯಕರ್ತರು ಟೊಂಕ ಕಟ್ಟಿ ಸಜ್ಜಾಗಿದ್ದಾರೆ.

English summary
12 Days 54th Hanuma Jayanti Festival Started In Ragigudda Temple In Bengaluru. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X