ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲೂಗೆ ಬೇಲ್: ಟ್ವಿಟ್ಟರ್ ಲೋಕದ ತೀರ್ಪೇನು?

By Mahesh
|
Google Oneindia Kannada News

ಬೆಂಗಳೂರು, ಡಿ.13: ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸಿಯಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ,ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಬಾಯಿಗೆ ಲಡ್ಡು ಬಿದ್ದಿದೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಲಾಲೂ ಅವರಿಗೆ ಜಾಮೀನು ಮಂಜೂರಾಗಿದೆ.

ಆರ್ ಜೆಡಿ ಮುಖ್ಯಸ್ಥ ಲಾಲೂ ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು 5 ವರ್ಷ ಕಾಲ ಜೈಲುಶಿಕ್ಷೆ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಲಾಲೂ ಅವರಿಗೆ ಬೇಲ್ ಸಿಗುತ್ತಿದ್ದಂತೆ ಸಾಮಾಜಿಕ ಜಾಲ ತಾಣ/ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಲಾಲೂ ಬೇಲ್ ಕುರಿತ ಟ್ವಿಟ್ ಗಳು ಹರಿದಾಡುತ್ತಿವೆ. ಟಾಪ್ 10 ಟ್ವೀಟ್ ಟ್ರೆಂಡ್ ಗಳ ಪೈಕಿ #laluprasadyadav ಕೂಡಾ ಒಂದೆನಿಸಿದೆ.

ಸುಪ್ರೀಂಕೋರ್ಟಿನ ನ್ಯಾಯಪೀಠ ಲಾಲೂ ಅವರಿಗೆ ಶುಕ್ರವಾರ (ಡಿ.13) ಜಾಮೀನು ಮಂಜೂರಾದ ಮೇಲೆ ಆರ್ ಜೆ ಡಿ ಹಾಗೂ ಕಾಂಗ್ರೆಸ್ ನಾಯಕರು ಲಾಲೂ ಅವರಿಗೆ ಬೇಲ್ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ತುಂಬಾ ಸಂತಸದ ವಿಚಾರ ಎಂದಿದ್ದಾರೆ.

ಬಿರ್ಸಾ ಮುಂಡಾ ಜೈಲಿನಲ್ಲಿದ್ದ 65 ವರ್ಷದ ಲಾಲೂ ಅವರು ಸಂಸತ್ ಸ್ಥಾನವನ್ನು ಕಳೆದುಕೊಂಡಿದ್ದು, ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲು ಇನ್ನು 11 ವರ್ಷ ಸಂಸತ್ತಿನತ್ತ ಸುಳಿದಾಡುವಂತೆಯೂ ಇಲ್ಲ. ಜಾಮೀನು ಪಡೆದರು ಮತ್ತೆ ಚುನಾವಣೆ ಸ್ಪರ್ಧಿಸುವಂತಿಲ್ಲ. ಈ ವಿಷಯ ನಮಗೂ ಗೊತ್ತಿದೆ ಆದರೆ, ಅವರು ಚುನಾವಣಾ ಪ್ರಚಾರಕ್ಕೆ ಬಂದರೆ ಸಾಕು, ಪಕ್ಷಕ್ಕೆ ಗೆಲುವು ಸಿಗುತ್ತದೆ ಎಂದು ಪತ್ನಿ ರಾಬ್ಡಿದೇವಿ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಲೋಕದ ತೀರ್ಪು ಮುಂದೆ ಓದಿ


ಅಪರಾಧಿಗೆ ಜಾಮೀನು?

ಅಪರಾಧಿಯೊಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದೆಂದರೆ ಇದು ರಾಜಕೀಯ ತಂತ್ರ

ಮೂಕ ಪ್ರಾಣಿಗಳ ಪ್ರತಿಭಟನೆ

ಲಾಲೂಗೆ ಜಾಮೀನು ಸಿಕ್ಕಿದ್ದಕ್ಕೆ ರಾಸುಗಳ ಸಂಜೆ ಪ್ರತಿಭಟನೆ ನಡೆಸುತ್ತವೆ ಎಂಬ ಸುದ್ದಿ ಇದೆ!

ಅಸಾರಾಮ್ ಭಕ್ತರ ಟ್ವೀಟ್

ಲಾಲೂಗೆ ಬೇಲ್ ಸಿಗುತ್ತದೆ ಎಂದರೆ ಅಸಾರಾಮ್ ಗೆ ಏಕೆ ಸಿಗುತ್ತಿಲ್ಲ?

ಇಲ್ಲಿ ಎಲ್ಲರಿಗೂ ಬೇಲ್ ಇದೆ

ಸುರೇಶ್ ಕಲ್ಮಾಡಿ, ಎ. ರಾಜಾ, ಲಾಲೂ ಎಲ್ಲರಿಗೂ ಬೇಲ್ ಸಿಗುತ್ತದೆ

ಮತ್ತೊಂದು AAP ಜನನ

ಅರವಿಂದ್ ಕೇಜ್ರಿವಾಲ ಅವರ AAP ಇಂದ ಪ್ರೇರಣೆಗೊಂಡು ಮತ್ತೊಂದು AAP ಹುಟ್ಟಿಕೊಳ್ಳುತ್ತಿದೆಯಂತೆ

English summary
Former Bihar Chief Minister, Union Railway Minister Lalu Prasad Yadav granted bail by Supreme court today(Dec.13) in Fodder Scam here are the Tweeple reaction to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X