ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ನಟ ಚಂದನ್ ಪತ್ನಿ ಸಾವು
Recommended Video

ನಿರೂಪಕ ಚಂದನ್ ಪತ್ನಿ ಆಸ್ಪತ್ರೆಯಲ್ಲಿ ನಿಧನ | Oneindia Kannada
ಬೆಂಗಳೂರು, ಮೇ 31: ಇತ್ತೀಚೆಗೆ ತಾನೆ ಅಪಘಾತದಿಂದ ನಿಧನರಾಗಿದ್ದ ನಿರೂಪಕ ಚಂದನ್ ಅವರ ಪತ್ನಿ ಮೀನಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಪತಿಯ ಸಾವಿನಿಂದ ಮನನೊಂದು ಖಿನ್ನತೆಗೆ ಒಳಗಾಗಿದ್ದ ಮೀನಾ ಅವರು ಇಂದು ಬೆಳಿಗ್ಗೆ ತಮ್ಮ ಮಗ ತುಷಾರ್ ಕತ್ತು ಸೀಳಿ ಕೊಂದು, ತಾವೂ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಆನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:55 ಕ್ಕೆ ಮೃತಪಟ್ಟಿದ್ದಾರೆ.

ಮೀನಾ ಅವರ ಪತಿ ಚಂದನ್ ಅವರು ಇದೇ ತಿಂಗಳ 24ರಂದು ದಾವಣಗೆರೆ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದಾಗಿ ಮೀನಾ ಅವರು ಖಿನ್ನತೆಗೆ ಒಳಗಾಗಿದ್ದರು.












Click it and Unblock the Notifications