ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಬೆಂಗಳೂರಿನಲ್ಲಿ ರೈಲ್ವೆ ಟಿಟಿಇ ಅಮಾನತು

ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಹೌರಾ-ಎಸ್‌ಎಂವಿಟಿ ಎಕ್ಸ್‌ಪ್ರೆಸ್ ಮತ್ತೊಂದು ಕ್ರಾಸಿಂಗ್‌ಗಾಗಿ ನಿಲ್ಲಿಸಿದ ನಂತರ ಈ ಘಟನೆ ನಡೆದಿತ್ತು.

ಬೆಂಗಳೂರು, ಮಾರ್ಚ್‌ 16: ಮದ್ಯದ ಅಮಲಿನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಟಿಕೆಟ್ ಪರೀಕ್ಷಕರನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಹೌರಾ-ಎಸ್‌ಎಂವಿಟಿ ಎಕ್ಸ್‌ಪ್ರೆಸ್ ಮತ್ತೊಂದು ಕ್ರಾಸಿಂಗ್‌ಗಾಗಿ ನಿಲ್ಲಿಸಿದ ನಂತರ ಈ ಘಟನೆ ನಡೆದಿತ್ತು. ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಶ್ಯಾಮ್ ಸಿಂಗ್ ಅವರು ಉಪ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಸಂತೋಷ್ ಅವರನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

TTE suspended for misbehaving with woman at Kantriveera Sangolli Rayanna railway station, bengaluru

ಅಸಭ್ಯ ನಡವಳಿಕೆಗಳ ವಿರುದ್ಧ ಬಲವಾದ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನಾವು ಹೊಂದಿದ್ದೇವೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮವನ್ನು ನಾವು ನಿರ್ಧರಿಸುತ್ತಿದ್ದೇವೆ ರೈಲ್ವೆ ಮ್ಯಾನೇಜರ್‌ ತಿಳಿಸಿದ್ದಾರೆ. ಮಂಗಳವಾರದಂದು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆ ಟಿಟಿಇಯೊಂದಿಗೆ ವಾಗ್ದಾದ ನಡೆಸಿದ್ದ ವೀಡಿಯೊಗಳನ್ನು ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ವೀಡಿಯೋಗಳಲ್ಲಿ ಮಹಿಳೆಯೊಬ್ಬರು ಟಿಟಿಇಗೆ ತನ್ನ ಟಿಕೆಟ್‌ಗಳನ್ನು ತೋರಿಸಿದ ನಂತರವೂ ಅವರನ್ನು ಪ್ರಶ್ನಿಸುವುದನ್ನು ಕಂಡು ಬರುತ್ತಿತ್ತು.

ಕುಡಿದ ಅಮಲಿನಲ್ಲಿದ್ದ ಟಿಟಿಇ ಮಹಿಳೆಯ ಮೇಲೆ ಕೂಗಾಡುತ್ತಿದ್ದಂತೆ, ಸಮೀಪದಲ್ಲಿ ನಿಂತು ಘಟನೆ ನಡೆಯುತ್ತಿದ್ದುದನ್ನು ನೋಡುತ್ತಿದ್ದ ಪುರುಷರ ಗುಂಪು ಆಕೆಯ ಸಹಾಯಕ್ಕೆ ಬಂದು ಸ್ಥಳದಿಂದ ಮುಂದಾಗಲು ಯತ್ನಿಸಿದಾಗ ಆತನನ್ನು ವಿಡಿಯೋ ಮಾಡಿದ್ದಾರೆ. ಕರ್ತವ್ಯದ ವೇಳೆ ಕುಡಿದು ಬಂದಿದ್ದರು ಎಂದು ಅವರು ಆರೋಪಿಸಿದ್ದರು. ಈ ಟ್ವೀಟ್ ವೈರಲ್ ಆಗಿದ್ದು, ಟಿಟಿಇ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ರೈಲ್ವೇ ಸಚಿವರನ್ನು ಕೋರಿದರು. ಘಟನೆಯ ಕುರಿತು ನಂತರ ವಿವರ ನೀಡುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೊವೊಂದರಲ್ಲಿ, ಮಹಿಳೆ ಟಿಕೆಟ್ ಇನ್ಸ್‌ಪೆಕ್ಟರ್‌ಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ, "ನೀವು ನನ್ನನ್ನು ಏಕೆ ಎಳೆಯುತ್ತಿದ್ದೀರಿ? ನನ್ನ ಬಳಿ ಟಿಕೆಟ್ ಇದೆ. " ಎಂದರೂ ಇನ್ಸ್‌ಪೆಕ್ಟರ್ ಆಕೆಯನ್ನು ಹಿಂದಿಯಲ್ಲಿ ನಿಂದಿಸುತ್ತಿರುವುದು ಕೂಡ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಮಹಿಳಾ ಪ್ರಯಾಣಿಕರು ದೂರು ದಾಖಲಿಸಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

TTE suspended for misbehaving with woman at Kantriveera Sangolli Rayanna railway station, bengaluru

ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಶ್ಯಾಮ್ ಸಿಂಗ್ ಮಾತನಾಡಿ, ಟಿಕೆಟ್ ನಿರೀಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ಬುಧವಾರ ಆದೇಶ ಹೊರಡಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನಾವು ಹೊಂದಿದ್ದೇವೆ ಮತ್ತು ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಹೌರಾ-ಎಸ್‌ಎಂವಿಟಿ ಎಕ್ಸ್‌ಪ್ರೆಸ್ ಕೆಆರ್ ಪುರಂ ರೈಲು ನಿಲ್ದಾಣಕ್ಕೆ ಆಗಮಿಸಿದ ನಂತರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆ ವೇಳೆ ಆರೋಪಿ ಉಪಮುಖ್ಯ ಚೀಟಿ ನಿರೀಕ್ಷಕ ವಿ.ಸಂತೋಷ್ ಪಾನಮತ್ತನಾಗಿದ್ದ ಎನ್ನಲಾಗಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ರೈಲ್ವೇ ಅವರ ವಿರುದ್ಧ ಕ್ರಮಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+