ಓಲಾ ನಿಷೇಧ ಹಿಂಪಡೆಯುವ ಹಿಂದಿದ್ದ ಕಾರಣಗಳು, ಷರತ್ತುಗಳೇನು?
ಬೆಂಗಳೂರು, ಮಾರ್ಚ್ 26: ಓಲಾ ನಿಷೇಧವನ್ನು ಸಾರಿಗೆ ಇಲಾಖೆ ಹಿಂಪಡೆಯಲು ಕೆಲವು ಕಾರಣಗಳಿವೆ.
ಕರ್ನಾಟಕಾದ್ಯಂತ ಅದರಲ್ಲೂ ಬೆಂಗಳೂರಲ್ಲಿ ಓಲಾವನ್ನೇ ನಂಬಿಕೊಂಡವರು ಸಾಕಷ್ಟು ಸಾವಿರ ಮಂದಿ ಇದ್ದಾರೆ. ಏಕಾಏಕಿ ಓಲಾ ಇಲ್ಲ ಎಂದಾಕ್ಷಣ ಸಾರ್ವಜನಿಕ ವಲಯದಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು.
ಹಾಗಾದರೆ ಜನರ ಒತ್ತಾಯಕ್ಕೆ ಮಣಿದು ನಿಷೇಧವನ್ನು ಹಿಂಪಡೆಯಲಾಯಿತೇ ಖಂಡಿತ ಇಲ್ಲ.ಓಲಾ ಕಂಪನಿ ಮೇಲೆ ಮೃದು ಧೋರಣೆ ತೋರಿರುವ ಸಾರಿಗೆ ಇಲಾಖೆ, ನಿಯಮ ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಆರಂಭಿಸಿರುವುದಕ್ಕೆ 15 ಲಕ್ಷ ರೂ ದಂಡ ವಿಧಿಸಿದೆ.

ಅಗ್ರಿಗೇಟರ್ಸ್ ಪರವಾನಗಿ ಅಮಾನತು ಆದೇಶವನ್ನು ಹಿಂಪಡೆದಿದೆ. ಓಲಾ ಮುಂದೆಂದೂ ನಿಯಮ ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದೆ.. ಪ್ರಾಧಿಕಾರ ವಿಧಿಸುವ ದಂಡ ಅಥವಾ ಕ್ರಮಕ್ಕೆ ಬದ್ಧ ಎಂದು ತಿಳಿಸಿರುವ ಕಂಪನಿ ಅಮಾನತು ಆದೇಶ ಹಿಂಪಡೆಯಲು ಕೋರಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನೋಟಿಸ್ ನೀಡಿದ ನಂತರ ಬೈಕ್ ಟ್ಯಾಕ್ಸಿ ಸ್ಥಗಿತ: ಆರು ತಿಂಗಳು ಪರವಾನಗಿ ಅಮಾನತು ಆದೇಶ ನೀಡಿದ ಬೆನ್ನಲ್ಲೇ ಓಲಾ ಕಂಪನಿ ಸಾರಿಗೆ ಇಲಾಖೆಗೆ ವಿವರಣೆ ಸಲ್ಲಿಸಿದೆ. ಪ್ರಾಯೋಗಿಕವಾಗಿ ಬೈಕ್ ಟ್ಯಾಕ್ಸಿ ಪ್ರಾರಂಭಿಸಿದ್ದೆವು. ನೋಟಿಸ್ ನೀಡಿದ ಬೆನ್ನಲ್ಲೇ ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಓಲಾಗೆ 2021ರವರೆಗೆ ಟ್ಯಾಕ್ಸಿ ಕಾರ್ಯಾಚರಣೆ ಪರವನಾಗಿ ನೀಡಲಾಗಿತ್ತು. ಆದರೆ ಅದನ್ನು ಉಲ್ಲಂಘಿಸಿ ಓಲಾ ಕಂಪನಿ ಸಮಂಜಸ ಉತ್ತರ ನೀಡಿರಲಿಲ್ಲ. ಜೊತೆಗೆ ಓಲಾ ಹೈಕೋರ್ಟ್ ಆದೇಶದ ಅನ್ವಯ ಕಾರುಗಳಿದ್ದ ಚೈಲ್ಡ್‌ಲಾಕ್ ಕೂಡ ತೆಗೆದಿರಲಿಲ್ಲ ಎಂದು ಸಾರಿಗೆ ಆಯುಕ್ತ ವಿಪಿ ಇಕ್ಕೇರಿ ತಿಳಿಸಿದ್ದಾರೆ.











Click it and Unblock the Notifications