ನಟಿ ರಾಗಿಣಿ ಆಪ್ತ ಬಿ. ಕೆ. ರವಿಶಂಕರ್ ಅಮಾನತು

ಬೆಂಗಳೂರು, ಸೆಪ್ಟೆಂಬರ್ 04: ನಟಿ ರಾಗಿಣಿ ದ್ವಿವೇದಿ ಆಪ್ತ ಮತ್ತು ಸಿಸಿಬಿ ಪೊಲೀಸರ ವಶದಲ್ಲಿರುವ ಬಿ. ಕೆ. ರವಿಶಂಕರ್ ಅಮಾನತು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

Recommended Video

      ಕನ್ನಡಿಗರು ಇಷ್ಟೊಂದು ಪ್ರೀತಿ ಕೊಟ್ಟಿರೋವಾಗ ನಾನು RCB ಬಿಟ್ಟು ಹೋಗೋಕೆ ಸಾಧ್ಯನಾ ಎಂದ ಕೊಹ್ಲಿ | Oneindia Kannada

      ಬೆಂಗಳೂರು ನಗರದಲ್ಲಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಿ. ಕೆ. ರವಿಶಂಕರ್ ಮತ್ತು ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿದ್ದಾರೆ.

      ರವಿಶಂಕರ್ ಬೆಂಗಳೂರಿನ ಜಯನಗರ ಆರ್‌ಟಿಓ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸಾರಿಗೆ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಿಗಳಾದ ಎನ್. ಶಿವಕುಮಾರ್ ರವಿಶಂಕರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

      Transport Department Suspended Ravi Shankar

      ಸೆಪ್ಟೆಂಬರ್ 3ರಿಂದ ರವಿಶಂಕರ್ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎಂದು ಅಮಾನತು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ಸರ್ಕಾರಿ ನೌಕರನಾಗಿ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಇಲಾಖೆಯ ಘನತೆಗೆ ಕಳಂಕ ತಂದಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

      ರವಿಶಂಕರ್ ಅವರ ಇಲಾಖಾ ವಿಚಾರಣೆ ಬಾಕಿ ಉಳಿಸಿ ಕರ್ನಾಟಕ ನಾಗರೀಕ ಸೇವೆ ನಿಯಮ 1966ರ ಅನ್ವಯ ಅಮಾನತು ಮಾಡಲಾಗಿದೆ. ಡ್ರಗ್ಸ್‌ ಮಾಫಿಯಾ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮೊದಲು ಬಂಧಿಸಿದ ಆರೋಪಿಯೇ ರವಿಶಂಕರ್.

      ಗುರುವಾರ ಮುಂಜಾನೆಯಿಂದ ರವಿಶಂಕರ್ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಅವರನ್ನು ಬಂಧಿಸಲಾಗಿದ್ದು, 5 ದಿನಗಳ ಕಾಲ ವಶಕ್ಕೆ ಪಡೆದುಕೊಳ್ಳಲಾಗಿದೆ. ನಟಿ ರಾಗಿಣಿ ದ್ವಿವೇದಿ ಜೊತೆ ರವಿಶಂಕರ್ ಲಿವಿಂಗ್ ಟುಗೆದರ್‌ನಲ್ಲಿದ್ದರು ಎಂಬ ಮಾಹಿತಿಯೂ ಇದೆ.

      ರವಿಶಂಕರ್ ವಿಚಾರಣೆ ವೇಳೆ ನೀಡಿದ ಮಾಹಿತಿ ಅನ್ವಯ ನಟಿ ರಾಗಿಣಿ ದ್ವಿವೇದಿ ನಿವಾಸದ ಮೇಲೆ ಶುಕ್ರವಾರ ಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದರು. ಸಂಜೆ ಅವರನ್ನು ಸಹ ಬಂಧಿಸಲಾಗಿದ್ದು, 3 ದಿನಗಳ ಕಾಲ ಸಿಸಿಬಿ ವಶಕ್ಕೆ ಪಡೆಯಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+