• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳ ತೆರವು

By Nayana
|

ಬೆಂಗಳೂರು, ಜು.2: ರಾಜಧಾನಿ ಬೆಂಗಳೂರಲ್ಲಿ ಫ್ಲೆಕ್ಸ್‌ಗಳ ಹಾವಳಿ ಮಿತಿ ಮೀರಿದೆ, ಅದರಲ್ಲೂ ಟ್ರಾಫಿಕ್‌ ಸೂಚನಾ ಫಲಕಗಳಿಗೆ ಅಡ್ಡವಾಗಿ ಫ್ಲೆಕ್ಸ್‌ ಅಳವಡಿಕೆಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದರು.

ಪ್ರಯಾಣಿಕರಿಂದ ಈ ಕುರಿತು ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್‌ ಈ ಫ್ಲೆಕ್ಸ್‌ಗಳ ತೆರವಿಗೆ ಮುಂದಾಗಿದ್ದಾರೆ. ಮೊದಲ ಹಂತವಾಗಿ ಕಬ್ಬನ್‌ ಪಾರ್ಕ್‌ ವ್ಯಾಪ್ತಿಯಲ್ಲಿ ಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಶಾಸಕ ಹ್ಯಾರಿಸ್ ಅವರೇ ನಿಮ್ಮ ಶುಭಾಶಯ ಬೇಕು ಆದರೆ ಹೀಗಲ್ಲ!

ಸೂಚನಾ ಫಲಕಗಳಿಗೆ ಅಡ್ಡವಾಗಿರುವ ಫ್ಲೆಕ್ಸ್‌ಗಳಿಂದ ಅಪಘಾತ ಪ್ರಮಾಣವೂ ಕೂಡ ಹಚ್ಚಾಗಿತ್ತು, ಇದೆಲ್ಲವನ್ನು ಅರಿತ ಸಂಚಾರ ಪೊಲೀಸರು ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ. ಈ ಹಿಂದೆ ಬಿಬಿಎಂಪಿಯು ಅನಧಿಕೃತ ಫ್ಲೆಕ್ಸ್‌ಗಳ ತೆರವಿಗೆ ಗಡುವುದು ನೀಡಿತ್ತು, ಆದರೆ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ, ಶಾಂತಿನಗರ ಶಾಸಕ ಎನ್‌ ಎ ಹ್ಯಾರಿಸ್‌ಗೆ ಶುಭಕೋರುವ ಫ್ಲೆಕ್ಸ್‌ ಒಂದು ಟ್ರಾಫಿಕ್ ಸಿಗ್ನ್‌ಲ್‌ಗೆ ಅಡ್ಡವಾಗಿ ಹಾಕಲಾಗಿತ್ತು.

Traffic police intensify drive against flexes

ಅದೇ ಕ್ಷೇತ್ರದ ಬಿಜೆಪಿಯ ಶ್ರೀಧರ್ ರೆಡ್ಡಿ ಅವರ ಫ್ಲೆಕ್ಸ್‌ಗಳು ಕೂಡ ಸಿಗಲ್‌ ಎದುರು ರಾರಾಜಿಸುತ್ತಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು.

Traffic police intensify drive against flexes

ಇದೀಗ ಸಂಚಾರ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸಂಚಾರ ಸೂಚನಾ ಫಲಕಗಳಿಗೆ ಅಡ್ಡಲಾಗಿ ಹಾಕಿರುವ ಫ್ಲೆಕ್ಸ್‌ಗಳ ತೆರವಿಗೆ ಮುಂದಾಗಿದ್ದಾರೆ, ಇದರಿಂದ ಪ್ರಯಾಣಿಕರು ಸುಗಮವಾಗಿ ಸಂಚರಿಸಬಹುದಾಗಿದೆ, ಇದರಿಂದ ಅಪಘಾತ ಪ್ರಮಾಣವೂ ಕೂಡ ತಗ್ಗಲಿದೆ ಎನ್ನುವುದು ಪೊಲೀಸರ ವಿಶ್ವಾಸವಾಗಿದೆ. ನಗರದ ಎಲ್ಲಾ ಭಾಗಗಳಲ್ಲೂ ಇಂತಹ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಅಗತ್ಯವಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For safe driving, ridding and for better visibility of traffic signage boards and signal lights were cleaned in shivajinagar limits follow traffic rules save life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more