Drunk driving cases: ಕಿಕ್ ಇಳಿಸ್ತಿದ್ದಾರೆ ಟ್ರಾಫಿಕ್ ಪೊಲೀಸ್, ಕುಡುಕಿಯರನ್ನೂ ಬಿಡಲ್ಲ!
ಟ್ರಾಫಿಕ್ ಪೊಲೀಸರು ಈ ಬಾರಿ ಭರ್ಜರಿ ಪ್ಲಾನ್‌ನೊಂದಿಗೇ ಫೀಲ್ಡ್‌ಗೆ ಇಳಿದಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಮದ್ಯಪ್ರಿಯರ ಕಿಕ್ ಇಳಿಸುತ್ತಿದ್ದಾರೆ ನಗರದಲ್ಲಿ ಈಗಾಗಲೇ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದು, ಮದ್ಯಪ್ರಿಯ ವಾಹನ (ಕುಡುಕರು) ಸವಾರರನ್ನು ಹುಡುಕಿ ಹುಡುಕಿ ಹಿಡಿಯುತ್ತಿದ್ದಾರೆ. ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ.
ಕುಡಿದು ವಾಹನ ಚಲಾಯಿಸುವ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಟ್ರಾಫಿಕ್ ಪೊಲೀಸರು ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಮದ್ಯಪ್ರಿಯರಿಗೆ ಬಿಸಿ ಮುಟ್ಟಿಸದೆ ಬಹಳಷ್ಟು ದಿನಗಳೇ ಆಗಿದ್ದವು. ಇದೀಗ ಟ್ರಾಫಿಕ್ ಪೊಲೀಸರು ಮತ್ತೆ ರಸ್ತೆಗಿಳಿದು ಬನ್ನ್ರಿ ಗಾಡಿ ಸೈಡ್‌ಗಾಕಿ ಊದ್ರಿ ನೋಡೋಣ ಅಂತಿದ್ದಾರೆ. ಗಾಡಿಸೈಡ್‌ಗಾಕಿ ಮದ್ಯ ಸೇವನೆ ಪರಿಶೀಲನೆ ಮಾಡಿದಾಗ ಕುಡುಕರು ಸಿಕ್ಕಿ ಬೀಳುತ್ತಿದ್ದಾರೆ.

ಸ್ಪೆಷಲ್ ಕಾರ್ಯಾಚರಣೆ
ಬೆಂಗಳೂರು ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್‌ಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಆಗಸ್ಟ್ ಮಾಸಾಂತ್ಯದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ನಡೆಸಿದ ಕಾರ್ಯಚಾರಣೆಯಲ್ಲಿ ಬರೋಬ್ಬರಿ 1,707 ಜನ ವಾಹನ ಸವಾರರು ಕಿಕ್ ಆಗಿ ಜಾಲಿಯಾಗಿ ಗಾಡಿ ಓಡಿಸುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾರೆ. ಈ ರೀತಿ ವಿಶೇಷ ಕಾರ್ಯಾಚರಣೆ ನಡೆಸುವ ಬಗ್ಗೆ ಟ್ರಾಫೀಕ್ ಪೊಲೀಸರು ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಹೀಗಾಗಿ ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಜನ ಕುಡುಕರು ಪೊಲೀಸರ ವಿಶೇಷ ಕಾರ್ಯಾಚರಣೆಯ ಬಲೆಗೆ ಬಿದ್ದಿದ್ದಾರೆ. ಒಟ್ಟಾರೆ ಆಗಸ್ಟ್ ತಿಂಗಳೊಂದರಲ್ಲೇ ಕುಡಿದು ವಾಹನ ಚಲಾಯಿಸುತ್ತಿದ್ದ 2030 ವಾಹನ ಸವಾರರನ್ನು ಹಿಡಿಯಲಾಗಿದೆ.
ಕುಡುಕಿಯರನ್ನೂ ಬಿಡಲ್ಲ
ಟ್ರಾಫಿಕ್ ಪೊಲೀಸರು ಈ ಬಾರಿ ಭರ್ಜರಿ ಪ್ಲಾನ್‌ನೊಂದಿಗೇ ಫೀಲ್ಡ್‌ಗೆ ಇಳಿದಿದ್ದಾರೆ. ಪುರುಷ ಮದ್ಯಪ್ರಿಯರಿಗಷ್ಟೇ ಅಲ್ಲ, ಮಹಿಳಾ ಮದ್ಯ ಪ್ರಿಯರಿಗೂ ಬಿಸಿ ಮುಟ್ಟಿಸಲಿದ್ದಾರೆ. ಕುಡುಕಿಯರನ್ನೂ ಬಲೆಗೆ ಬೀಳಿಸಲು ಭರ್ಜರಿ ಪ್ಲಾನ್ ರೆಡಿಯಾಗಿದೆ. ಒಬ್ಬರು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಒಬ್ಬ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಅವರನ್ನು ಫೀಲ್ಡ್‌ಗೆ ಇಳಿಸಲಾಗುತ್ತಿದೆ. ಈ ಮೂಲಕ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವ ಮಹಿಳೆಯರನ್ನೂ ಸಹ ಪತ್ತೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸಂಚಾರ ಪೊಲೀಸ್ ಠಾಣೆಯ ಸಂಚಾರ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನಿರ್ದೇಶನ ನೀಡಲಾಗಿದೆ. ಮಹಿಳಾ ಪೊಲೀಸರು ಮಹಿಳಾ ವಾಹನ ಸವಾರರನ್ನು ಪರಿಶೀಲಿಸಲಿದ್ದಾರೆ (ಕುಡಿದಿದ್ದಾರೆಯೇ ಇಲ್ಲವೇ ಎಂದು) ನೋಡಲಿದ್ದಾರೆ. ಕುಡುಕುರಿಗಷ್ಟೇ ಅಲ್ಲ, ಕುಡುಕಿಯರಿಗೂ ಇದು ಸಮಸ್ಯೆ ಆಗಲಿದೆ. ಹೀಗಾಗಿ, ಕುಡಿದು ವಾಹನ ಚಲಾಯಿಸುವ ಮುನ್ನ ನೂರು ಬಾರಿ ಯೋಚಿಸಿ.

50 ಸಂಚಾರ ಪೊಲೀಸ್ ಠಾಣೆಗಳಿಗೆ ಸೂಚನೆ
ಈಚೆಗೆ ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಎಂ.ಎನ್.ಅನುಚೇತ್ ಅವರು, ಬೆಂಗಳೂರು ವ್ಯಾಪ್ತಿಯ 50 ಸಂಚಾರ ಪೊಲೀಸ್ ಠಾಣೆಗಳಿಗೆ ಡ್ರಿಂಕ್ ಆ್ಯಂಡ್ ಡ್ರೈವ್ ಬಗ್ಗೆ ಎಚ್ಚರ ವಹಿಸುವಂತೆ ಹೇಳಿದ್ದರು. ಅಲ್ಲದೇ ಕುಡಿದು ವಾಹನ ಚಲಾಯಿಸುವವರನ್ನ ಪತ್ತೆ ಮಾಡಿ, ದಂಡ ವಿಧಿಸುವಂತೆ ಸೂಚನೆ ನೀಡಿದ್ದರು. ಆಗಸ್ಟ್ ತಿಂಗಳ ಕೊನೆಯವಾರದಲ್ಲಿ ನೀಡಿದ್ದ ಈ ಸೂಚನೆಯಿಂದಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿ ಫೀಲ್ಡ್‌ಗೆ ಇಳಿದಿದ್ದರು.
ಇದರ ಪರಿಣಾಮ ರಾಜಾ ರೋಷವಾಗಿ ವಾಹನ ಚಾಲಿಯಿಸುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲೂ ಬೆಂಗಳೂರಿನ ಎಲ್ಲಾ ಭಾಗದಲ್ಲೂ ಅಲರ್ಟ್ ಆಗಿ ಡ್ರಿಂಕ್ ಆ್ಯಂಡ್ ಡ್ರೈವ್ ಪರಿಶೀಲನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕುಡಿದು ವಾಹನ ಚಲಾಯಿಸುವವರಿಗೆ ದಂಡ ಮಾತ್ರವಲ್ಲದೇ ಲೈಸನ್ಸ್ ರದ್ದಾಗುವ ಸಾಧ್ಯತೆಯೂ ಇದೆ.












Click it and Unblock the Notifications