Traffic Jam: ನಮ್ಮ ಮೆಟ್ರೋ ಕಾಮಗಾರಿಗಾಗಿ ಮೇಲ್ಸೇತುವೆ ಬಂದ್, ಭಾರೀ ಟ್ರಾಫಿಕ್ ಜಾಮ್!
ಬೆಂಗಳೂರು, ಫೆಬ್ರವರಿ 13: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಜಾಲ ವಿಸ್ತರಣೆ ಆಗುತ್ತಿದೆ. ಈ ಪೈಕಿ ನಮ್ಮ ಮೆಟ್ರೋ 2a ಮತ್ತು 2b ಯೋಜನೆ ಕಾರ್ಯ ಭರದಿಂದ ಸಾಗಿದೆ. ಸಿಲ್‌ಬೋರ್ಡ್‌ನಿಂದ ಎಚ್‌ಆರ್‌ಲೇಔಟ್ ಮಾರ್ಗವಾಗಿ ಕೆ.ಆರ್.ಪುರಂವರೆಗೆ ನೀಲಿ ಮಾರ್ಗದಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಪೊಲೀಸರು ಪ್ರಯಾಣಿಕರಿಗೆ ಸಂಚಾರ ಸಲಹೆ ನೀಡಿದ್ದಾರೆ.
ಹೌದು, ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಸಂಪರ್ಕ ಸಾಧಿಸಲು BMRCL ಈ ಮೆಟ್ರೋ ಬ್ಲೂ ಲೈನ್ ನಿರ್ಮಿಸುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, HSR ಬಡಾವಣೆಯ ಬಳಿಯ ಫ್ಲೈಓವರ್ ಅನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಈ ಮಾರ್ಗದಲ್ಲಿ ನಿತ್ಯ ಓಡಾಡುವ ಸಾವಿರಾರು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

ನಿತ್ಯವು ಈ ಎಚ್‌ಎಸ್ ಫೈಓವರ್ ಭಾಗದಲ್ಲಿ ಸಂಚಾರ ದಟ್ಟಣೆ ಅಧಿಕ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಇದನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ. ಫ್ಲೈಓವರ್ ಬಂದ್ ಆದರೆ ವಾಹನ ಸವಾರರು ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ರಸ್ತೆ ಮಾರ್ಗವಾಗಿ ಓಡಾಡಬೇಕಾಗುತ್ತದೆ. ಇದರಿಂದಲೂ ಈ ಭಾಗದಲ್ಲೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸರು, ಮೆಟ್ರೋ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
HSR ಲೇಔಟ್ 14ನೇ ಮುಖ್ಯರಸ್ತೆಯಲ್ಲಿ ಮೆಟ್ರೋ ಕೆಲಸ
ಬೆಂಗಳೂರು ಸಂಚಾರಿ ಪೊಲೀಸರು ಸಾಮಾಜಿ ಜಾಲತಾಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. HSR ಲೇಔಟ್ ನ 14 ನೇ ಮುಖ್ಯ ರಸ್ತೆಯಲ್ಲಿ ನಮ್ಮ ಮೆಟ್ರೋ ನೀಲಿ ಮಾರ್ಗವು ಹಾದು ಹೋಗುತ್ತದೆ. ಇಲ್ಲಿ ಕಾಮಗಾರಿಯ ಸ್ಲೈಡಿಂಗ್ ಗರ್ಡಲ್ ಓರೆಯಾಗಿರುವುದರಿಂದ, ಫ್ಲೈಓವರ್ ಸಂಚಾರಕ್ಕೆ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ವಾಹನ ಸವಾರರು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪರ್ಯಾಯ ಮಾರ್ಗಗಳನ್ನು ಬಳಸಿ ಓಡಾಡುವಂತೆ ಪೊಲೀಸರು ತಿಳಿಸಿದ್ಆರೆ. ಇಲ್ಲಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವವರು ಸಂಚಾರವನ್ನು 19 ನೇ ಮುಖ್ಯ ಮಾರ್ಗದ ಹಾದು ಹೋಗಬೇಕು. ಸಂಚಾರ ಅಡಚಣೆಗೆ ಸಹಕರಿಸುವಂತೆ ಕೋರಿದ್ದಾರೆ.
ಹಠಾತ್ ಮೇಲ್ಸೇತುವೆ ಸ್ಥಗಿತ: ಜನಾಕ್ರೋಶ
ಮೇಲ್ಸೇತುವೆ ನಿರ್ಮಿವುದೇ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು. ಇದೀಗ ಮೇಲ್ಸೇತುವೆಯನ್ನು ಸ್ಥಗಿತಗೊಳಿಸಿದರೆ, ಸಾಮಾನ್ಯವಾಗಿ ಬೇರೆ ಬೇರೆ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ. ಎಚ್‌ಎಸ್‌ಆರ್ ಫ್ಲೈಓವರ್‌ನಿಂದ ಓಡಾಡುವ ಜನರು, ಇದೀಗ ಔಟರ್ ರಿಂಗ್ ರಸ್ತೆ ಅನುಸರಿಸುತ್ತಿದ್ದಾರೆ. ಇದರಿಂದ ಆ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಹಠಾತ್ ಫ್ಲೈಓವರ್ ಮುಚ್ಚಿದ್ದಕ್ಕೆ ಸಾರ್ವಜನಿಕರು, ವಾಹನ ಸವಾರರು ಹತಾಶೆ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನು ವಾರಾಂತ್ಯದಲ್ಲಿ ನಿರ್ವಹಿಸಬೇಕಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೈಬ್ರೀಡ್ ಸಿಸ್ಟಮ್ ವರ್ಕಿಂಗ್ ಮಾದರಿ ಇರುವ ಕಾರಣ ಬುಧವಾರ ORR ಮತ್ತು ITPL ಪ್ರದೇಶಗಳಲ್ಲಿನ ಕಚೇರಿಗಳಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಪ್ರಯಾಣಿಸುತ್ತಾರೆ. ಅವರೆಲ್ಲ ಈ ಮಾರ್ಗದಲ್ಲಿ ಓಡಾಡುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ನೀಲಿ ಮಾರ್ಗದ ಗರ್ಡರ್ ಕಾಮಗಾರಿ, ಮೇಲ್ಸೇತುವೆ ಬಂದ್ ಕಾರ್ಯವನ್ನು ವಾರಾಂತ್ಯಕ್ಕೆ ಇಲ್ಲವೇ ತಡರಾತ್ರಿಯ ಸಮಯಕ್ಕೆ ನಿಗದಿಪಡಿಸಿದ್ದರೆ ಈ ಅನಾನುಕೂಲ, ಹೆಚ್ಚಿನ ದಟ್ಟಣೆ ಆಗುತ್ತಿರಲಿಲ್ಲ. ಈ ಬಗ್ಗೆ ಅಧಿಕಾರಿಗಳು ಪೂರ್ವ ಯೋಜನೆ ಮಾಡಿಕೊಳ್ಳಬೇಕಿತ್ತು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಏರ್ ಶೋ 2025: ಯಲಹಂಕ ರಸ್ತೆಯಲ್ಲೂ ಟ್ರಾಪಿಕ್ ಜಾಮ್
ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2025 ಆರಂಭವಾಗಿದೆ. ಆ ಭಾಗದಲ್ಲೂ ಇನ್ನಿಲ್ಲದಂತೆ ವಾಹನ ದಟ್ಟಣೆ ಕಂಡು ಬಂದಿದೆ. ಮಹಾಕುಂಭ ಮೇಳದಿಂದಾಗಿ ಪ್ರಯಾಗ್‌ರಾಜ್ ರಸ್ತೆಗಳಲ್ಲಿ ಉಂಟಾಗಿದ್ದ ಟ್ರಾಪಿಕ್ ಜಾಮ್‌ಗೆ ಬೆಂಗಳೂರು ದಟ್ಟಣೆ ಸ್ಪರ್ಧೆ ಒಡ್ಡುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನಿಲ್ದಾಣದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಿಂದಾಗಿ ಬೆಂಗಳೂರಿನ ಉತ್ತರ ಭಾಗಗಳು ಸಹ ಭಾರೀ ದಟ್ಟಣೆಯನ್ನು ಅನುಭವಿಸುತ್ತಿವೆ. ಮುಂಬರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯು ಸಂದರ್ಶಕರ ಒಳಹರಿವನ್ನು ತರಲಿದೆ, ಒಟ್ಟಾರೆ ಸಂಚಾರ ಪರಿಸ್ಥಿತಿಗಳು ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಆದಾಗ್ಯೂ, ಸಂಚಾರ ಪೊಲೀಸರು ದಟ್ಟಣೆಯನ್ನು ನಿರ್ವಹಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.












Click it and Unblock the Notifications