ರಥಸಪ್ತಮಿ ನಿಮಿತ್ತ ಬದಲಿ ಮಾರ್ಗಸೂಚಿ ನೋಡಿ
ಬೆಂಗಳೂರು, ಫೆ.5: ರಥಸಪ್ತಮಿ ದಿನದಂದು ಸೂರ್ಯ ತನ್ನ ಹೊಸ ಪಥ ಹಿಡಿದು ರಥವೇರಿ ಸಂಚಾರಕ್ಕೆ ಹೊರಡುತ್ತಿದ್ದಂತೆ ಟ್ರಾಫಿಕ್ ಜಾಮ್ ಜಂಜಾಟಕ್ಕೆ ಸಿಲುಕುವ ಬೆಂಗಳೂರು ನಗರದಲ್ಲಿ 'ಬದಲಿ ಮಾರ್ಗ ಅನುಸರಿಸಿ' ನೋಡುವುದು ಅನಿವಾರ್ಯವಾಗಲಿದೆ. ರಥಸಪ್ತಮಿ ನಿಮಿತ್ತ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು-ಲಷ್ಕರ್ ರಸ್ತೆಯಲ್ಲಿ ವಾಹನ ಸಂಚಾರ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.
ಫೆ.6ರ ಸಂಜೆ 8 ಗಂಟೆಯಿಂದ ಫೆ..7ರ ಬೆಳಗ್ಗೆ 9 ಗಂಟೆಯವರೆಗೆ ರಥಸಪ್ತಮಿ ಹಬ್ಬದ ಪ್ರಯುಕ್ತ ಮುತ್ತಿನ ಪಲ್ಲಕ್ಕಿ ಹಾಗೂ 31 ದೇವರುಗಳ ಮೆರವಣಿಗೆ ನಡೆಯಲಿದ್ದು, ಸಂಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.
ಮಡಿವಾಳ ಮಾರ್ಗವಾಗಿ ಆಡುಗೋಡಿ ಕಡೆಗೆ ಬರುವ ವಾಹನ ಸಂಚಾರವನ್ನು ಮಡಿವಾಳ ಚೆಕ್ ಪೋಸ್ಟ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಬದಲಿ ಸಂಚಾರ ಮಾರ್ಗವಾಗಿ ಸರ್ಜಾಪುರ ರಸ್ತೆಯ ಮಾರ್ಗವಾಗಿ ಕೋರಮಂಗಲ ವಾಟರ್ ಟ್ಯಾಂಕ್ ವೃತ್ತದ ಮೂಲಕ ಕೋರಮಂಗಲ 100 ಅಡಿ ರಸ್ತೆಯ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಕೋರಮಂಗಲ 80 ಅಡಿ ರಸ್ತೆಯ ಕಡೆಯಿಂದ ಆಡುಗೋಡಿ ಕಡೆಗೆ ಸಂಚರಿಸುವ ಸಂಚಾರವನ್ನು ಯುಕೋಬ್ಯಾಂಕ್ ವೃತ್ತದಲ್ಲಿ ಬಲತಿರುವು ಪಡೆಯುವುದನ್ನು ನಿರ್ಬಂಸಲಾಗಿದ್ದು, ಮಡಿವಾಳ ಉಕ್ಕಡದಕಡೆಗೆ ಸಂಚರಿಸಿ ಡಾ.ಮರಿಗೌಡ ರಸ್ತೆಯಲ್ಲಿ ಸಂಚರಿಸಿ ಬೆಂಗಳೂರು ಡೈರಿ ವೃತ್ತವನ್ನು ಸೇರಿ ಸಂಚರಿಸಬಹುದು.
ಲಾಂಗ್ ಫೋರ್ಡ್ ರಸ್ತೆಯ ಕಡೆಯಿಂದ ಆಡುಗೋಡಿ ಮುಖ್ಯರಸ್ತೆಗಳ ಕಡೆಗೆ ಸಂಚರಿಸುತ್ತಿದ್ದ ಸಂಚಾರವನ್ನು ಆನೇಪಾಳ್ಯ ವೃತ್ತದಲ್ಲಿ ನಿರ್ಬಂಧಿಸಿದ್ದು, ನಿರ್ಬಂಧಿಸಿದ ಸಂಚಾರವನ್ನು ಬನ್ನೇರುಘಟ್ಟ ರಸ್ತೆಯ ಮಾರ್ಗವಾಗಿ ಸಂಚರಿಸಿ ಬೆಂಗಳೂರು ಡೈರಿ ವೃತ್ತವನ್ನು ಸೇರಿ ಸಂಚರಿಸಬಹುದು.
ವಿಲ್ಸನ್ ಗಾರ್ಡನ್ ಕಡೆಯಿಂದ ಮೈಕೋ ಲಿಂಕ್ ರಸ್ತೆಯ ಮಾರ್ಗವಾಗಿ ಆಡುಗೋಡಿ ವೃತ್ತದ ಕಡೆಗೆ ಸಂಚರಿಸುತ್ತಿದ್ದ ಸಂಚಾರವನ್ನು ಮೈಕೋಬಂಡೇ ವೃತ್ತದಲ್ಲಿ ನಿರ್ಬಂಧಿಸಿದ್ದು, ನಿರ್ಬಂಧಿಸಿದ ಸಂಚಾರವನ್ನು ಬನ್ನೇರುಘಟ್ಟ ರಸ್ತೆಯ ಮಾರ್ಗವಾಗಿ ಬೆಂಗಳೂರು ಡೈರಿ ವೃತ್ತದ ಕಡೆಗೆ ಸಂಚರಿಸಬಹುದಾಗಿರುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಟ್ರಾಫಿಕ್ ಅಲರ್ಟ್ ಪಡೆಯಲು 09219592195 ಗೆ JOIN BTP ಎಂದು ಸಂದೇಶ ಕಳಿಸಿ.. ಒಮ್ಮೆ ನಿಮ್ಮ ಮೊಬೈಲ್ ಸಂಖ್ಯೆ ಟ್ರಾಫಿಕ್ ಪೊಲೀಸರ ಕಡತದಲ್ಲಿ ದಾಖಲಾದರೆ ನಿಮಗೆ ಕಾಲ ಕಾಲಕ್ಕೆ ಟ್ರಾಫಿಕ್ ಅಲರ್ಟ್ ಸಂದೇಶ ಬರುತ್ತದೆ.












Click it and Unblock the Notifications