ರಾಷ್ಟ್ರಪತಿ ಸಂಚಾರ ಹಿನ್ನೆಲೆ, ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು, ಜೂನ್ 14: ಬೆಂಗಳೂರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿರುವ ನಗರದಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಇದರಿಂದಾಗಿ ಸಂಚಾರಿ ಪೊಲೀಸರು ಸಂಚಾರ ಮಾರ್ಗಗಳನ್ನು ಬದಲಾಯಿಸಿದ್ದಾರೆ.
ರಾಷ್ಟ್ರಪತಿಗಳು ಬೆಂಗಳೂರಿಗೆ ಇಸ್ಕಾನ್ ದೇವಾಲಯದ ಉದ್ಘಾಟನೆಗೆ ಆಗಮಿಸಿದ್ದಾರೆ. ಇದರಿಂದಾಗಿ ಕನಕಪುರ ರಸ್ತೆಯ ಅಂಗಡಿ ಮುಗ್ಗಟ್ಟುಗಳು ಕ್ಲೋಸ್ ಮಾಡುವಂತೆ ಸೂಚಿಸಲಾಗಿದೆ. ಬೆಳಿಗೆ 10.30 ರಿಂದ ಮಧ್ಯಾಹ್ನ 1:30 ರವರೆಗೂ ಅಂಗಡಿಗಳು ಮುಚ್ಚುವಂತೆ ಪೊಲೀಸರಿಂದ ತಿಳಿಸಿದ್ದಾರೆ. 10:15 ರಿಂದ 11 ಗಂಟೆ ವರೆಗೂ ರಾಷ್ಟ್ರಪತಿ ಗಳ ಸಂಚಾರಕ್ಕೆ ರೂಟ್ ಮ್ಯಾಪ್ ಪಿಕ್ಸ್ ಆಗಿದೆ. ರಾಜಭವನದಿಂದ ದೊಡ್ಡ ಕಲ್ಲಸಂದ್ರಕ್ಕೆ ಸಂಚಾರ ಮಾಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ ಭವನದಿಂದ ವಿಠ್ಠಲ್ ಮಲ್ಯ ರೋಡ್, RRMR ರೋಡ್, NR ಸರ್ಕಲ್, ದೇವಾಂಗ ರಸ್ತೆ, ಲಾಲ್ ಬಾಗ್ ರಸ್ತೆ, ಕ್ರುಂಬಿಗಲ್ ರೋಡ್, ಸೌತ್ ಎಂಡ್ ರಸ್ತೆ, ಬನಶಂಕರಿ, ಸಾರಕ್ಕಿ, ಕೋಣನ ಕುಂಟೆ ಕ್ರಾಸ್, ದೊಡ್ಡಕಲ್ಲ ಸಂದ್ರಕ್ಕೆ ರಸ್ತೆ ಮೂಲಕ ಸಂಚಾರ ಮಾಡಲಿದ್ದಾರೆ.

ಇಸ್ಕಾನ್ ದೇವಾಲಯದ ಉದ್ಘಾಟನೆ ಕಾರ್ಯಕ್ರಮ ಮುಗಿದ ಬಳಿಕ 11:45 ರಿಂದ 12:45 ರವರೆಗೂ ಕನಕಪುರ ರಸ್ತೆ ಮೂಲಕ ಓಲ್ಡ್ ಏರ್ ಪೋಟ್೯ ತಲುಪಲಿರುವ ರಾಷ್ಟ್ರಪತಿಗಳು ಕನಕಪುರ ರಸ್ತೆ, ಮೂಲಕ ಸೌತ್ ಎಂಡ್ ಸರ್ಕಲ್, ಜೆಸಿ ರಸ್ತೆ, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಕಸ್ತೂರಿ ಬಾ ರಸ್ತೆ, ಅನಿಲ್ ಕುಂಬ್ಲೆ ಸರ್ಕಲ್, ಬ್ರಿಗೇಡ್ ರೋಡ್ ಮೂಲಕ ಓಲ್ಡ್ ಏರ್ಪೋರ್ಟ್ ತಲುಪಲಿರುವ ರಾಷ್ಟ್ರಪತಿಗಳು ಆ ಬಳಿಕ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಇದರಿಂದಾಗಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದಕ್ಕಿಂತ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವುದು ಉತ್ತಮ.
(ಒನ್ಇಂಡಿಯಾ ಸುದ್ದಿ)












Click it and Unblock the Notifications