Get Updates
Get notified of breaking news, exclusive insights, and must-see stories!

ಹಾಲಿವುಡ್‌ನಲ್ಲಿ ಮಿಂಚಿದ ಕನ್ನಡ ಬರಹ & ಬೆಂಗಳೂರು ಪೋಸ್ಟ್‌ ಸಖತ್ ವೈರಲ್!

ವಿಶ್ವ ಲಿಪಿಗಳ ರಾಣಿ ಕನ್ನಡ ಹಾಗೂ ವಿಶ್ವದ ಸಿಲಿಕಾನ್ ಸಿಟಿಗಳ ರಾಜ ಬೆಂಗಳೂರು.. ಈಗ ಹಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಹೌದು ಹಾಲಿವುಡ್‌ನಲ್ಲಿ ಕನ್ನಡ ರಾರಾಜಿಸುತ್ತಿದೆ. ಉತ್ತರ ಭಾರತೀಯ ಕೆಲವರು ಕನ್ನಡದ ಬಗ್ಗೆ ಹಿಂದಿಯಷ್ಟು ಸ್ಕೋಪ್ ಇಲ್ಲ ಅಂತ ಮಾತನಾಡುತ್ತಿರುವಾಗಲೇ ಹಿಂದಿಯನ್ನು ದಾಟಿ ಹಾಲಿವುಡ್‌ನಲ್ಲಿ ಕನ್ನಡದ ಪದಗಳು ರಾರಾಜಿಸುತ್ತಿವೆ. ಇದೀಗ ಕನ್ನಡದ ಪದಗಳು ಹಾಗೂ ಬೆಂಗಳೂರಿನ ಬಗ್ಗೆ ಹಾಲಿವುಡ್‌ನಲ್ಲೂ ಪ್ರಾಮುಖ್ಯತೆ ಸಿಕ್ಕಿದೆ. ಏನಿದು ವೈರಲ್ ನ್ಯೂಸ್ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಯಾರು ಏನಾದರೂ ಮಾತನಾಡಲಿ ಕನ್ನಡದ ಗತ್ತು ಕಡಿಮೆಯಾಗಿಲ್ಲ. ಮೇಲಾಗಿ ಕನ್ನಡ ಹಿರಿಮೆ ವಿಶ್ವದಾದ್ಯಂತ ಪಸರಿಸುತ್ತಿದೆ. ಅದಕ್ಕೆ ಇತ್ತೀಚಿಗಿನ ಬೂಕರ್ ಪ್ರಶಸ್ತಿಯೊಂದು ಅತ್ಯುತ್ತಮ ಉದಾಹರಣೆ. ಇದರೊಂದಿಗೆ ಕನ್ನಡವು ಈಗ ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದು. ಕನ್ನಡಿಗರ ಸಂತೋಷವನ್ನು ಹೆಚ್ಚಿಸಿದೆ. ಕನ್ನಡಿಗರು ಈ ವಿಷಯವನ್ನು ಹೆಮ್ಮೆಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.

Tom Cruise and Mission Impossible Team Shining in Hollywood Kannada writing and Bengaluru post viral

ವರುಣ್ ಕೆ.ಎಸ್ ಅವರು, ಈ ಸಂತೋಷದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ವರುಣ್ ಅವರು, ಇದು ಯಾವುದೋ ಕನ್ನಡದ ಸಿನಿಮಾ ಅಲ್ಲ. ಹಾಲಿವುಡ್‌ನ ವಿಶ್ವ ಪ್ರಸಿದ್ಧ Mission Impossible ಮೂವಿ ಸರಣಿಯ ನಾಲ್ಕನೇ ಭಾಗದ್ದು (Mission Impossible - Ghost Protocol 2011). ಮೇಲೆ ಚಿತ್ರದಲ್ಲಿರುವ ಕನ್ನಡ ನೋಡಿ ಬೆಂಗಳೂರಿನಲ್ಲಿ ಶೂಟಿಂಗ್ ಆಗಿದೆ ಅಂದುಕೊಳ್ಳಬೇಡಿ, ಏಕೆಂದರೆ ಈ ಚಿತ್ರೀಕರಣ ನಡೆದಿರೋದು ಕೆನಡಾದ vancouver ನಗರದಲ್ಲಿ. ಶೂಟಿಂಗ್‌ಗಾಗಿ ಆ ಜಾಗವನ್ನು ಸಂಪೂರ್ಣ ಕನ್ನಡಮಯವನ್ನಾಗಿಸಿದೆ ಚಿತ್ರತಂಡ ಎಂದು ಬರೆದುಕೊಂಡಿದ್ದು ಕನ್ನಡ ಬರಹ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಹೀರೋ ಮತ್ತು ತಂಡ ಒಂದು ಮಿಷನ್‌ಗಾಗಿ ಬೆಂಗಳೂರಿಗೆ ಬರುತ್ತಾರೆ ಅನ್ನೋ ಸನ್ನಿವೇಶ ಇದೆ. ಅವರು ಬೆಂಗಳೂರಿನಲ್ಲಿ ಇರುವ ಅಷ್ಟೂ ಸಮಯ ಗೋಡೆಗಳ ಮೇಲೆ ಕನ್ನಡ ಪೇಂಟಿಂಗ್, ಎಲ್ಲಾ ಕಡೆ ಕನ್ನಡ signboard ಗಳು, KA ರಿಜಿಸ್ಟ್ರೇಷನ್ ಗಾಡಿಗಳು ಮಾತ್ರ ಕಾಣಿಸುತ್ತವೆ. ಇಂಡಿಯಾ ಅಂತ ಅವರು ಹಿಂದಿ ಬಳಸಿಲ್ಲ. ಕರ್ನಾಟಕ ಅಂದರೆ ಕನ್ನಡ ಭಾಷಿಕರ ಊರು ಎಂದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ ನಮ್ಮದೇ ಒಕ್ಕೂಟದಲ್ಲಿರುವ ರಾಷ್ಟ್ರೀಯ ಪಕ್ಷಗಳು ಮಾತ್ರ ಕಾಲದಿಂದಲೂ ಅನ್ಯಾಯ ಮಾಡಿಕೊಂಡು ನಮ್ಮನ್ನು ಕೀಳಾಗಿ ನೋಡಿಕೊಂಡು ಬಂದಿವೆ.
Thank you Tom Cruise and Mission: Impossible Team ❤️ ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಈ ಬರಹ ಕನ್ನಡಿಗರ ಗಮನ ಸೆಳೆದಿದ್ದು ಭಾರೀ ವೈರಲ್ ಆಗುತ್ತಿದೆ.

ಸಣ್ಣ ಸಣ್ಣ ವಿಷಯಗಳಿಗೂ ಶ್ರಮ: ಭಾರೀ ಮೆಚ್ಚುಗೆ: ಇನ್ನು ಹಾಲಿವುಡ್‌ Tom Cruise and Mission: Impossible Team ತಂಡವು ಸಣ್ಣ ಸಣ್ಣ ವಿಷಯಗಳನ್ನು ಅತ್ಯಂತ ಜಾಣ್ಮೆಯಿಂದ ಚಿತ್ರೀಕರಣ ಮಾಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ನಮ್ಮ ದೇಶದವರೇ ಬಳಸುವುದಿಲ್ಲ ವಿದೇಶಿಯರಿಗೆ ಇರುವ ತಿಳಿವಳಿಕೆ ನಮ್ಮವರಿಗೆ ಯಾಕಿಲ್ಲ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+