ನಂದನ್ ನಿಲೇಕಣಿ ಪ್ರಚಾರಕ್ಕೆ ತಾರಾ ಮೆರಗು
ಬೆಂಗಳೂರು,ಏ.3: ನಂದನ್ ನಿಲೇಕಣಿ ಪ್ರಚಾರಕ್ಕೆ ತಾರಾಮೆರಗು ಬಂದಿದೆ. ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರದ ದಿಗ್ಗಜರೆಲ್ಲ ನಂದನ್ ನಿಲೇಕಣಿ ಪರವಾಗಿ ಪ್ರಚಾರ ಮಾಡಲು ಮುಂದೆ ಬಂದಿದ್ದಾರೆ. ಪ್ರತಿದಿನ ಪ್ರಚಾರಕ್ಕೆ ರಂಗೇರುತ್ತಿದ್ದು, ಪ್ರಸಿದ್ಧ ನಟಿಯರಾದ ಜಯಮಾಲಾ ಮತ್ತು ಭವ್ಯ ಕೂಡ ಪ್ರಚಾರಕ್ಕೆ ಇಳಿದಿದ್ದು, ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ, ನಿರ್ದೇಶಕ, ಗಿರೀಶ್ ಕಾರ್ನಾಡ್, ಪ್ರಸಿದ್ಧ ಚಿಂತಕ, ಬರಹಗಾರ ಪ್ರೊ. ಜಿ. ಕೆ. ಗೋವಿಂದರಾವ್, ಕೂಡ ಸೇರಿಕೊಂಡಿದ್ದರು.
ಈ ನಡುವೆ ಬೆಂಗಳೂರಿನ ನಾಗರಿಕರು ನಂದನ್ ನಿಲೇಕಣಿಯವರ ಪರವಾಗಿ ಪ್ರಚಾರ ಮಾಡಲು ತಾವಾಗಿಯೇ ಮುಂದೆ ಬಂದು, ‘ಟುಗೆದರ್ ವಿತ್ ನಂದನ್' ಸ್ವಯಂಸೇವಕರ ಗುಂಪಿನೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ಕಾರ್ಪೋರೇಟ್ ವಲಯ, ವಿದ್ಯಾರ್ಥಿಗಳು, ಗೃಹಣಿಯರು, ನಿವೃತ್ತರು, ಹೀಗೆ ವಿವಿಧ ರಂಗಗಳ ಜನರು ಸೇರಿಕೊಂಡು, ಮನೆ ಬಾಗಿಲಿಗೆ ಹೋಗಿ, ಬೆಂಗಳೂರು ದಕ್ಷಿಣದ ಪ್ರಮುಖ ಅಭ್ಯರ್ಥಿ ನಂದನ್ ಬಗ್ಗೆ ಅರಿವು ಮೂಡಿಸ್ತಾ ಇದ್ದಾರೆ. ಸ್ವಯಂಸೇವಕರೊಬ್ಬರು ಹೀಗೆ ಹೇಳ್ತಾರೆ,[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಅಂತೂ ಸಂಸತ್ತಿಗೆ ಒಬ್ಬ ಒಳ್ಳೇ ವ್ಯಕ್ತಿಯನ್ನು ಕಳಿಸುವ ಒಂದು ಸದವಕಾಶ ನಮಗೆ ಸಿಕ್ಕಿದೆ. ಸಮಾಜಕ್ಕೆ ಈ ಮೂಲಕ ನನ್ನ ಕಿರುಕಾಣಿಕೆ ನೀಡಲು ನನಗಿದೊಂದು ಅವಕಾಶ, ಮತ್ತೆ ಇದು ನನ್ನ ಕರ್ತವ್ಯ ಕೂಡ ಎಂದು. ಹೋದೆಡೆಯೆಲ್ಲಲ್ಲ ಸ್ವಯಂಸೇವಕರಿಗೆ ಆಪ್ತ ಸ್ವಾಗತ ಸಿಗುತ್ತಿದೆ. ಎಷ್ಟೋ ಮನೆಯಲ್ಲಿ ಒಳಗೆ ಕರೆದು, ಸಿಹಿ ಕೊಡ್ತಾರೆ, ಪಾನಕ ಕುಡೀತೀರ ಕೇಳ್ತಾರೆ. ನಮ್ಮ ಕೆಲಸದ ಜೊತೆ ಇದನ್ನೂ ಮಾಡ್ತಾ ಇರೋದಕ್ಕೆ ಭಾಳ ಮೆಚ್ಚಿಕೆ ವ್ಯಕ್ತಪಡಿಸ್ತಾರೆ ಎನ್ನುತ್ತಾರೆ ವೈಟ್ ಫೀಲ್ಡಿನಿಂದ ಕೋರಮಂಗಲಕ್ಕೆ ಪ್ರತೀದಿನ ಬರುವ ಇನ್ನೊಬ್ಬ ಸ್ವಯಂಸೇವಕರು. ನಂದನ್ ಚುನಾವಣಾ ಪ್ರಚಾರದ ಇನ್ನಷ್ಟು ಚಿತ್ರಗಳು ಮುಂದಿವೆ ನೋಡಿ...

ವಿವಿಧ ಬಡಾವಣೆಗಳಲ್ಲಿ ರೋಹಿಣಿ ಸಂಚಾರ
ರೋಹಿಣಿ ನಿಲೇಕಣಿಯವರು ಕ್ಷೇತ್ರದ ಎಲ್ಲ ಬಡಾವಣೆಗಳಲ್ಲಿ ಓಡಾಡಿ, ಜನರೊಂದಿಗೆ ಸಂವಾದ ಮಾಡುತ್ತ, ಅವರ ಕಷ್ಟಸುಖ ಕೇಳುತ್ತ ಓಡಾಡುತ್ತ ಇದ್ದಾರೆ. ಬಸವನಗುಡಿ ಮತ್ತು ವಿಜಯನಗರದಲ್ಲಿ ಲಾಫ್ಟರ್ ಕ್ಲಬ್ ಗಳಲ್ಲಿ ಜನರನ್ನು ಭೇಟಿಯಾಗಿ, ನಗುತ್ತಲೇ ಅವರೊಂದಿಗೆ ಪ್ರಚಾರ ಮಾಡಿದರು. ಎಲ್ಲರಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತಿರುವುದು ರೋಹಿಣಿಯವರಿಗೆ ಹುರುಪು ತಂದಿದೆ.

ಜಯಮಾಲಾ ಮತ್ತು ಭವ್ಯ ಕೂಡ ಪ್ರಚಾರ
ಪ್ರಸಿದ್ಧ ನಟಿಯರಾದ ಜಯಮಾಲಾ ಮತ್ತು ಭವ್ಯ ಕೂಡ ಪ್ರಚಾರಕ್ಕೆ ಇಳಿದಿದ್ದು, ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ, ನಿರ್ದೇಶಕ, ಗಿರೀಶ್ ಕಾರ್ನಾಡ್, ಪ್ರಸಿದ್ಧ ಚಿಂತಕ, ಬರಹಗಾರ ಪ್ರೊ. ಜಿ. ಕೆ. ಗೋವಿಂದರಾವ್, ಕೂಡ ಸೇರಿಕೊಂಡಿದ್ದರು.

ಪ್ರತಿದಿನ ಪ್ರಚಾರಕ್ಕೆ ರಂಗೇರುತ್ತಿದೆ
ಪ್ರಸಿದ್ಧ ನಟಿಯರಾದ ಜಯಮಾಲಾ ಮತ್ತು ಭವ್ಯ ಕೂಡ ಪ್ರಚಾರಕ್ಕೆ ಇಳಿದಿದ್ದು, ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ, ನಿರ್ದೇಶಕ, ಗಿರೀಶ್ ಕಾರ್ನಾಡ್, ಪ್ರಸಿದ್ಧ ಚಿಂತಕ, ಬರಹಗಾರ ಪ್ರೊ. ಜಿ. ಕೆ. ಗೋವಿಂದರಾವ್, ಕೂಡ ಸೇರಿಕೊಂಡಿದ್ದರು.

ಜನರ ಸ್ಪಂದನೆ ಕಂಡು ಬೆರಗಾದ ರೋಹಿಣಿ
ಜನರು ಇಷ್ಟೆಲ್ಲ ಬೆಂಬಲ ತೋರಿಸ್ತಾ ಇರೋದು ನಮಗೆ ನಿಜಕ್ಕೂ ಖುಷಿಯೆನ್ನಿಸಿದೆ, ಅವರ ವಿಶ್ವಾಸಕ್ಕೆ ಹೃದಯತುಂಬಿ ಬರ್ತಾ ಇದೆ. ಜನರು ನಂದನ್ ಅವರಿಗಾಗಿ ಸ್ವಯಂಸೇವಕ ಕೆಲಸ ಮಾಡಲು ಮುಂದೆ ಬರ್ತಿದ್ದಾರೆ. ನಿಜಕ್ಕೂ ಅವರಿಗೆಲ್ಲ ನಾವು ಆಭಾರಿಯಾಗಿದ್ದೇವೆ ಎಂದು ರೋಹಿಣಿ ವಿವರಿಸಿದರು.

ರಾಜೀವ್ ಗೌಡ ಅವರ ಶಿಷ್ಯರು ಪ್ರಚಾರಕ್ಕೆ
ಬೆಂಗಳೂರು ಐಐಎಂ ನ ಪ್ರೊ. ರಾಜೀವ್ ಗೌಡ ಅವರ ರಾಜಕೀಯ ಕ್ರಿಯಾ ಇನರ್ನ್ ಶಿಪ್ ವಿದ್ಯಾರ್ಥಿಗಳು ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದು, ಅಂಗಡಿಯವರು, ಬೀದಿ ಬದಿಯ ವ್ಯಾಪಾರಿಗಳು ಮತ್ತು ಜಯನಗರದ ಆಟೋ ಚಾಲಕರನ್ನು ಭೇಟಿಯಾಗಿ, ಚುನಾವಣೆಗಳ ಬಗ್ಗೆ ಜನಾಭಿಪ್ರಾಯ ಕೇಳುತ್ತಿದ್ದಾರೆ.












Click it and Unblock the Notifications