ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಿನಾದ್ಯಂತ ಭಾನುವಾರ ಸಂಜೆ ಗುಡುಗು ಸಹಿತ ಮಳೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ರಾಜ್ಯ ರಾಜಧಾನಿಯಲ್ಲಿ ಭಾನುವಾರ ಸಂಜೆ 4 ಗಂಟೆ ಜೋರಾಗಿ ಒಂದೇ ಸಮನೆ ಸುರಿಯುತ್ತಿದೆ. ಯಲಹಂಕ ಮತ್ತು ಬೆಂಗಳೂರು ದಕ್ಷಿಣ ವಲಯ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಬ್ಬರ ಮಳೆ ದಾಖಲಾಗಿದೆ.

ಭಾನುವಾರ ಬೆಳಗ್ಗೆಯಿಂದ ಕಂಡು ಬಂದ ತಕ್ಕಮಟ್ಟಿಗಿನ ಬಿಸಿಲಿನ ವಾತಾವರಣ ಮಧ್ಯಾಹ್ನದ ನಂತರ ಮರೆಯಾಗಿ ಸಂಜೆ 4ಗಂಟೆ ನಂತರ ಗುಡುಗು ಸಹಿತ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ವಿಜಯನಗರ, ಹಂಪಿನಗರ, ರಾಜಾಜಿನಗರ, ಮೆಜೆಸ್ಟಿಕ್, ಆರ್‌ಆರ್‌.ನಗರ, ಚಂದ್ರಾಲೇಔಟ್, ಯಲಹಂಕ, ಹೆಬ್ಬಾಳ, ಅಟ್ಟೂರು, ಮಹಾದೇವಪುರ, ಮೈಸೂರು ರಸ್ತೆ, ನಾಯಮಡಹಳ್ಳಿ, ಜ್ಞಾನಭಾರತಿ, ಮಾಗಡಿ ರಸ್ತೆ, ಜಯನಗರ, ವಿದ್ಯಾರಣ್ಯಪುರ, ಮಲ್ಲೇಶ್ವರ ಸೇರಿದಂತೆ ನಗರದ ಬಹುತೇಕ ಎಲ್ಲ ಕಡೆಗಲ್ಲಿ ಧಾರಾಕಾರವಾಗಿ ಮಳೆ ಬೀಳುತ್ತಿದೆ.

ಎಲ್ಲಾ ವರ್ಷದ ದಾಖಲೆಗಳನ್ನು ಮುರಿದ ಬೆಂಗಳೂರು ಮಳೆ! ಎಲ್ಲಾ ವರ್ಷದ ದಾಖಲೆಗಳನ್ನು ಮುರಿದ ಬೆಂಗಳೂರು ಮಳೆ!

ಸಂಜೆ ನಂತರ ಬಂದ ಮಳೆಯು ರಜಾದಿನದ ಮೋಜು ಮಸ್ತಿಯನ್ನು ಕಸಿದಿದೆ. ಸಂಜೆ ವೇಳೆಗೆ ಹೊರಹೋಗುವವರ ಪ್ಲಾನ್‌ಗಳಿಗೆ ಮಳೆ ಅಡ್ಡಿಪಡಿಸಿತು. ರಸ್ತೆ ಬದಿ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತು. ಅನೇಕ ಕಡೆ ಮುಖ್ಯ ರಸ್ತೆಗಳಲ್ಲೆ ಸಂಚಾರ ಅಸ್ತವೆಸ್ತವಾಗಿದೆ.

 Thunderstorm rain record across Bengaluru on Sunday evening

ಶಿವಾನಂದ ವೃತ್ತ, ಮೆಜೆಸ್ಟಿಕ್ ಸುತ್ತಮುತ್ತ, ಓಕಳಿಪುರಂ ರಸ್ತೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಉಕ್ಕಿಹರಿಯಿತು. ಈ ವೇಳೆ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರಿದಾಡಿದರು. ಕೆಲ ಕಾದ ಬಂದ ಮಳೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು, ಸವಾರರು ಅಂಗಡಿ ಮುಂಗಟ್ಟುಗಳ ಮುಂದೆ, ಮೆಟ್ರೋ ಫ್ಲೈಓವರ್‌ ಕೆಳಗೆ ಆಶ್ರಯ ಪಡೆದಿದ್ದು ಕಂಡು ಬಂತು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ಪ್ರಕಾರ, ನಗರದಲ್ಲಿ ರಾತ್ರಿ 9ಗಂಟೆ ವೇಳೆಗೆ ಕೇಂಗೇರಿಯಲ್ಲಿ ಅಧಿಕ ಮಳೆ 26ಮಿ.ಮೀ. ಮಳೆ ಆಗಿದೆ. ಇದೇ ವೇಳೆ ಬೇಗೂರು 19ಮಿ.ಮೀ., ವಿದ್ಯಾರಣ್ಯಪುರದಲ್ಲಿ 18.5ಮಿ.ಮೀ., ಹೆಮ್ಮಿಗೆಪುರ 16.5ಮಿ.ಮೀ., ಕೆಂಗೇರಿ (2) 15ಮಿ.ಮೀ., ಯಲಹಂಕದಲ್ಲಿ 14ಮಿ.ಮೀ., ಸಿಂಗಸಂದ್ರ 12.5ಮಿ.ಮೀ., ದೊಮ್ಮಲೂರು ಮತ್ತು ನಾಯಂಡಹಳ್ಳಿಯಲ್ಲಿ ತಲಾ 12ಮಿ.ಮೀ., ಎಚ್‌.ಗೊಲ್ಲಹಳ್ಳಿ 11.5ಮಿ.ಮೀ., ಕೋನೇನ ಅಗ್ರಹಾರ ಮತ್ತು ವಿದ್ಯಾಪೀಠದಲ್ಲಿ ತಲಾ 10ಮಿ.ಮೀ.ಮಳೆ ದಾಖಲಾಗಿದೆ. ಉಳಿದೆಡೆ ಕೆಲ ಹೊತ್ತು ಸಾಧಾರಣವಾಗಿ ಮಳೆ ಬಿದ್ದಿದೆ.

ಬೆಂಗಳೂರಿಗೆ ಮುಂದಿನ ಎರಡು ದಿನ ಜೋರು ಮಳೆಯ ಮುನ್ಸೂಚನೆ ಇದೆ. ಅದರಲ್ಲಿ ಸೋಮವಾರವು ಸಹ ನಗರದ ಬಹಳಷ್ಟು ಕಡೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳುವ ನಿರೀಕ್ಷೆ ಇದೆ. ಮರು ದಿನದ ಮಳೆ ಪ್ರಮಾಣ ತುಸು ಇಳಿಕೆ ಆಗಲಿದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

English summary
Thunderstorm rain record across Bengaluru city on Sunday evening, Karnataka State Natural Disaster Monitoring Centre (KSNDMC)report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X