Bengaluru Rain: ಮಹಾಮಳೆಗೆ ಕಂಗಾಲಾದ ರಾಜಧಾನಿ, ಜಲಾವೃತವಾದ ರಸ್ತೆಗಳು

ಬೆಂಗಳೂರು, ಮೇ. 31: ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯಿಮದ ಜನರು ಚೇತರಿಸಿಕೊಳ್ಳುವ ಮೊದಲೇ ನಗರದಲ್ಲಿ ಮಂಗಳವಾರ ಗಂಟೆಗಟ್ಟಲೆ ಸುರಿದ ಧಾರಾಕಾರ ಮಳೆಗೆ ಹೊರ ವರ್ತುಲ ರಸ್ತೆ (ಒಆರ್‌ಆರ್) ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆಯು ಹಲವಾರು ಅಂಡರ್‌ಪಾಸ್‌ಗಳನ್ನು ಕೆರೆಗಳನ್ನಾಗಿಸಿತ್ತು.

ಕಳೆದ ವಾರದ ನಡೆದ ಕೆ.ಆರ್.ಸರ್ಕಲ್ ದುರಂತ ಮರುಕಳಿಸದಂತೆ ತಡೆಯಲು ಅಧಿಕಾರಿಗಳು ಅಂಡರ್‌ಪಾಸ್‌ಗಳಲ್ಲಿ ತ್ವರಿತವಾಗಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಇತ್ತಿಚೆಗೆ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ 22 ವರ್ಷದ ಟೆಕ್ಕಿ ಅವರು ಪ್ರಯಾಣಿಸುತ್ತಿದ್ದ ಎಂಯುವಿ ಮುಳುಗಿ ಸಾವನ್ನಪ್ಪಿದ್ದಾರೆ.

Thundershowers with wind lashed several parts of Bengaluru

ಇನ್ನು, ಇಡೀ ರಸ್ತೆಯಲ್ಲಿ ಮೊಣಕಾಲುವರೆಗೆ ನೀರು ತುಂಬಿಕೊಂಡಿದ್ದರಿಂದ ಬೆಳ್ಳಂದೂರು ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರದಾಡಿದ್ದಾರೆ. ಇಕೋಸ್ಪೇಸ್ ಬಳಿಯ ಬೆಳ್ಳಂದೂರು, ಸಾಗರ್ ಆಸ್ಪತ್ರೆ ಜಂಕ್ಷನ್ ಬಳಿಯ ಬನ್ನೇರುಘಟ್ಟ ರಸ್ತೆ, ಲಿಂಗರಾಜಪುರಂ ಅಂಡರ್‌ಪಾಸ್, ಶಿವಾನಂದ ಸರ್ಕಲ್, ಚಿಕ್ಕಪೇಟೆ ಮುಖ್ಯರಸ್ತೆ, ಸ್ಯಾಂಕಿ ರಸ್ತೆ ಮತ್ತು ಕೆಆರ್ ಸರ್ಕಲ್ ಅಂಡರ್‌ಪಾಸ್‌ಗಳು ಮತ್ತು ಆರ್‌ಎಂಝಡ್ ಇನ್ಫಿನಿಟಿ ಬಳಿಯ ಹಳೆಯ ಮದ್ರಾಸ್ ರಸ್ತೆಗಳಲ್ಲಿ ಮಳೆಯ ಅಬ್ಬರ ಮುಂದುವರೆದಿತ್ತು.

ಔಟರ್ ರಿಂಗ್ ರಸ್ತೆಯಲ್ಲಿ ಟೆಕ್ ವಿಲೇಜ್ ಬಳಿ ಟ್ರಾಫಿಕ್ ದಟ್ಟಣೆಯ ಪ್ರಮಾಣವು ಕೆಲವು ಪ್ರಯಾಣಿಕರು ಕಚೇರಿ ಕ್ಯಾಬ್‌ಗಳಿಂದ ಇಳಿದು ಮನೆಗೆ ತೆರಳಿದ್ದಾರೆ. ಇತ್ತ, ಮಳೆನೀರು ಚರಂಡಿಗೆ ಸಂಪರ್ಕ ಕಲ್ಪಿಸುವ ಡ್ರೈನೇಜ್ ಪಾಯಿಂಟ್‌ನಲ್ಲಿ ಪ್ಲಾಸ್ಟಿಕ್ ಮತ್ತು ಕಸವು ತುಂಬಿ ನೀಎಉ ಹರಿಯಲು ಸಾಧ್ಯವಾಗದೇ ಸಮಸ್ಯೆಯಾಗಿತ್ತು ಎಂದು ಬಿಬಿಎಂಪಿಯೊಂದಿಗೆ ಕೆಲಸ ಮಾಡುವ ಸ್ವಯಂಸೇವಕರು ಹೇಳಿದ್ದಾರೆ.

Thundershowers with wind lashed several parts of Bengaluru

ಹಲವು ಪ್ರದೇಶಗಳಲ್ಲಿ ಧರೆಗುರುಳಿದ ಮರಗಳು

ರಸ್ತೆಗಳು ಜಲಾವೃತವಲ್ಲದೆ, ಹಲವಾರು ಪ್ರದೇಶಗಳಲ್ಲಿ ಮರಗಳು ಬಿದ್ದಿವೆ ಎಂದು ವರದಿಯಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆ, ಬಾಬುಸಾಪಾಳ್ಯ, ಬಾಣಸವಾಡಿಯ ಸಿಎಂಆರ್ ರಸ್ತೆ, ಬೆಳತ್ತೂರು, ಮುಂತಾದ ಪ್ರದೇಶಗಳಲ್ಲಿ ಮರ ಬಿದ್ದಿರುವ ದೂರುಗಳು ಬಂದಿವೆ. ಕಲೆದ ಬಾರಿ ಸುರಿದ ಮಹಾ ಮಳೆಗೆ ರಾಜಧಾನಿಯ ಹಲವು ಭಾಗಗಳಲ್ಲಿ ನೂರಾರು ಮರಗಳು ಧರೆಗುರುಳಿದ್ದವು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಳೆ ಸಂಬಂಧಿತ ಹಾನಿಯನ್ನು ಮೌಲ್ಯಮಾಪನ ಮಾಡಲು ಪರಿಶೀಲನೆ ನಡೆಸಿದರು. ಮಳೆ ಮತ್ತು ಪ್ರವಾಹವನ್ನು ಎದುರಿಸಲು ಬಿಬಿಎಂಪಿ ಯಂತ್ರೋಪಕರಣಗಳ ಎಲ್ಲಾ ಹಂತಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.

"ಎಲ್ಲಾ ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಅರಣ್ಯ ವಿಭಾಗದೊಂದಿಗೆ ಕ್ಷೇತ್ರದಲ್ಲಿ ಹೆಚ್ಚಿನ ಜಾಗರೂಕರಾಗಿರಲು ಮತ್ತು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶಿಸಲಾಗಿದೆ. ನಿಯಂತ್ರಣ ಕೊಠಡಿಗಳು ವಲಯದಿಂದ ಉಪವಿಭಾಗದ ಹಂತದವರೆಗೆ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಸಲಕರಣೆಗಳು , ವಾಹನಗಳು ಮತ್ತು ಇತರ ಪರಿಕರಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು" ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಅಧಿಕಾರಿಗಳು ಜನರಿಗೆ ತಕ್ಷಣ ಲಭ್ಯವಿರಬೇಕು ಮತ್ತು ಕಿರಿಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗೆ ಮಾರ್ಗದರ್ಶನ ನೀಡಲು ಹಿರಿಯ ಅಧಿಕಾರಿಗಳು ಮೊದಲ ಮಾಹಿತಿ ಹೊಂದಿರಬೇಕು. ನಿರ್ಲಕ್ಷ್ಯ, ಆಲಸ್ಯ, ಬೇಜವಾಬ್ದಾರಿ ತೋರಿದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಜರುಗಿಸುವುದಾಗಿ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.

ಈ ವರ್ಷವೂ ಮಳೆಗೆ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುವುದನ್ನು ಗಮನಿಸಬಹುದು, ಅಧಿಕಾರಿಗಳು ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸಲ್ಪಟ್ಟ ಕಾರಣದಿಂದ ಈ ಬಾರಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಮ್ಯಾನ್‌ಹೋಲ್‌ಗಳ ಡೆಸಿಲ್ಟಿಂಗ್ ನಿಧಾನವಾಗಿದೆ ಎಂದು BWSSB ಅಧಿಕಾರಿಯೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+