ಉದ್ಯಾನ ನಗರಿ ಬೆಂಗಳೂರಲ್ಲಿ ಶನಿವಾರ ಸಂಜೆಯಿಂದ 3 ಕೊಲೆ!
ಬೆಂಗಳೂರು, ಡಿಸೆಂಬರ್. 10 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಶನಿವಾರ ಸಂಜೆಯಿಂದ ಭಾನುವಾರ ಮುಂಜಾನೆ ತನಕ ಮೂರು ಕೊಲೆಗಳು ನಡೆದಿವೆ.
ಕೆ.ಆರ್.ಮಾರುಕಟ್ಟೆ, ಅನ್ನಪೂರ್ಣೇಶ್ವರಿ ನಗರ, ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಗಳು ನಡೆದಿವೆ. ಕೇವಲ 12 ಗಂಟೆಗಳ ಅವಧಿಯಲ್ಲಿ ಜೋಡಿ ಕೊಲೆ ನಡೆದಿದೆ.

ಕೊಲೆ 1 : ಶನಿವಾರ ತಡರಾತ್ರಿ ಕೆ.ಆರ್.ಮಾರುಕಟ್ಟೆ ಬಳಿ ಕೊತ್ತಂಬರಿ ಸೀನ (36) ಎಂಬಾತನನ್ನು ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೆ.ಆರ್.ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಕೊಲೆ 2 : ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ದುಷ್ಕರ್ಮಿಗಳು ಚಂದ್ರ ಎಂಬಾತನನ್ನು ಹತ್ಯೆ ಮಾಡಿದ್ದಾರೆ.
ಕೊಲೆ 3 : ಹೆಗ್ಗನಹಳ್ಳಿಯಲ್ಲಿ ಜೆಡಿಎಸ್ ನಾಯಕ, ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ (59) ಅವರನ್ನು ಶನಿವಾರ ಸಂಜೆ ನಡು ರಸ್ತೆಯಲ್ಲಿಯೇ ಹತ್ಯೆ ಮಾಡಲಾಗಿತ್ತು.
ಗೋವಿಂದೇಗೌಡ ಹತ್ಯೆ ಬಳಿಕ ಹೆಗ್ಗನಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications