ಬೆಂಗಳೂರಿನಲ್ಲಿ ನಾಯಿ ಮತ್ತು ಅದರ ಮಾಲೀಕನ ಮೇಲೆ ಹಲ್ಲೆ; ಮೂವರ ಬಂಧನ

ಬೆಂಗಳೂರು, ಅ. 06: ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ತಮ್ಮ ಸಾಕುನಾಯಿಯೊಂದಿಗೆ ಜಗಳವಾಡಿದ ನಾಯಿಯ ಮೇಲೆ ಮೂವರು ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಬೆಂಗಳೂರು ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಪೂರ್ವದ ಮಂಜುನಾಥ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮೂವರು ಆರೋಪಿಗಳು ಸಾಕು ನಾಯಿ ಮತ್ತು ಅದರ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.

Three men booked for assaulting pet dog and its owner in Bengaluru

ಆರ್‌ಕೆ ಪುರಂನ ಗದ್ದಿಗೆಪ್ಪ ಅವರು ಸೋಮವಾರ ಬೆಳಗ್ಗೆ ತಮ್ಮ ನಾಯಿ ಅಚ್ಚುವನ್ನು ತಮ್ಮ ಮನೆಯ ಹೊರಗೆ ಆಟವಾಡಲು ಬಿಟ್ಟಿದ್ದರು. ಈ ವೇಳೆ ಅದು ನೆರೆಹೊರೆಯ ನಾಗರಾಜ್ ಎಂಬುವರಿಗೆ ಸೇರಿದ ನಾಯಿಯೊಂದಿಗೆ ಜಗಳವಾಡಿತ್ತು.

ಗದ್ದಿಗೆಪ್ಪ ಅಚ್ಚುವನ್ನು ಹಿಂದಕ್ಕೆ ಕರೆದೊಯ್ದರೂ, ಅವರ ನೆರೆಹೊರೆಯವರಾದ ರಂಜಿತ್, ರಾಹುಲ್ ಮತ್ತು ರಜತ್ ಅವರು ಗದ್ದಿಗೆಪ್ಪ ಅವರ ಮನೆಗೆ ರಾತ್ರಿ 10 ಗಂಟೆ ಸುಮಾರಿಗೆ ನುಗ್ಗಿ ಕೋಲಿನಿಂದ ನಾಯಿಯನ್ನು ನಿರ್ದಯವಾಗಿ ಥಳಿಸಿದ್ದಾರೆ. ತನ್ನ ನಾಯಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ನಾಯಿ ಮಾಲೀಕನಿಗೂ ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Three men booked for assaulting pet dog and its owner in Bengaluru

ಇಡೀ ಘಟನೆಯನ್ನು ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು, ನಾಯಿಯ ಮೇಲೆ ಪದೇ ಪದೇ ದಾಳಿ ಮಾಡುವುದನ್ನು ತೋರಿಸುತ್ತದೆ. ಅದು ನೋವಿನಿಂದ ನೆಲದ ಮೇಲೆ ಮಲಗಿದೆ.

ಮೂವರ ಹಲ್ಲೆಗೆ ತತ್ತರಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ನಾಯಿ ಅಚ್ಚುವನ್ನು ಗದ್ದಿಗೆಪ್ಪ ದೊಮ್ಮಲೂರಿನ ಪಶು ಆಸ್ಪತ್ರೆಗೆ ಸಾಗಿಸಿದ್ದಾರೆ. ಒಂದು ಕಾಲದಲ್ಲಿ ಬೀದಿನಾಯಿಯಾಗಿದ್ದ ಅಚ್ಚುವನ್ನು ಗದ್ದಿಗೆಪ್ಪ ದತ್ತು ಪಡೆದು ಸಾಕುತ್ತಿದ್ದರು.

ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ, ಸ್ವಯಂಪ್ರೇರಣೆಯಿಂದ ಪ್ರಾಣಿಗಳನ್ನು ಗಾಯಗೊಳಿಸುವುದು, ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು, ಸುಲಿಗೆ, ಕ್ರಿಮಿನಲ್ ಬೆದರಿಕೆ ಇತ್ಯಾದಿ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+