ಒರಾಯನ್ ಮಾಲ್‌ಗೆ ಬನ್ನಿ, ಹೂವಿನ ಜೊತೆ ಸೆಲ್ಫಿ ತೆಗಿಸಿಕೊಳ್ಳಿ

ಬೆಂಗಳೂರು, ಜುಲೈ 15 : ಮೂರು ದಿನಗಳ ಪುಷ್ಪ ಮೇಳಕ್ಕೆ ಒರಾಯನ್ ಮಾಲ್ ಸಿದ್ಧವಾಗಿದೆ. ಶಾಪಿಂಗ್ ಮಾಡುವುದರ ಜೊತೆಗೆ ಹೂಗಳ ಜೊತೆ ನಿಂತು ಸೆಲ್ಫಿ ತೆಗೆಸಿಕೊಳ್ಳಲು ಮತ್ತು ಹೂಗಳ ಮಾಹಿತಿಗಳನ್ನು ಪಡೆಯಲು ಜುಲೈ 17ರಿಂದ 19ರ ತನಕ ರಾಜಾಜಿನಗರದಲ್ಲಿರುವ ಮಾಲ್‌ಗೆ ಭೇಟಿ ನೀಡಬಹುದಾಗಿದೆ.

ಜುಲೈ 17ರ ಶುಕ್ರವಾರದಿಂದ ಒರಾಯನ್ ಮಾಲ್‌ನಲ್ಲಿ ಅಲಂಕಾರಿಕ ಹೂಗಳ ಪ್ರದರ್ಶನ ಆಯೋಜಿಸಲಾಗಿದೆ. ಮಾಲ್‌ನ ಹಲವು ಪ್ರದೇಶಗಳಲ್ಲಿ ಆಕರ್ಷಕ ಹೂವಿನ ಅಲಂಕಾರಗಳು ಜನರನ್ನು ಸ್ವಾಗತಿಸಲಿವೆ. ನೈಜ ಹೂವುಗಳನ್ನು ಉಪಯೋಗಿಸಿಕೊಂಡು ಈ ಅಲಂಕಾರವನ್ನು ಮಾಡಲಾಗಿದೆ. [ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ]

flower

8 ಅಡಿ ಎತ್ತರದ ಫ್ಲಾಮಿಂಗೋ ಮತ್ತು 8 ಅಡಿಯ ಚಿಟ್ಟೆ, ಗ್ಲಾಸ್ ಟ್ರಿಮ್ಮಿಂಗ್ಸ್‌ನೊಂದಿಗಿನ 7 ಅಡಿಯ ಕೈಗಡಿಯಾರ, 8 ಅಡಿಯ ಮ್ಯೂಸಿಕ್ ಟ್ರಿಯೋ ಮುಂತಾದವುಗಳನ್ನು ಮಾಲ್‌ನಲ್ಲಿ ಜೋಡಿಸಲಾಗಿದೆ. ಇವುಗಳ ಜೊತೆ ನಿಂತು ಸೆಲ್ಫಿ ತೆಗೆಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. [ಮಂಗಳೂರಿನಿಂದ ಮಂಗಳನ ಅಂಗಳಕ್ಕೆ ಉಪಗ್ರಹ!]

ಈ ಹೂವುಗಳ ಜೋಡಣೆ ಜೊತೆಗೆ ಮಾಲ್ ವಿಶೇಷ ಮಳಿಗೆಗಳ ವ್ಯವಸ್ಥೆಯನ್ನು ಮಾಡಿದ್ದು, ಅವುಗಳು ಹೂವುಗಳಿಂದ ಮಾಡಿದ ವಿವಿಧ ಸಲಕರಣೆಗಳನ್ನು ಮಾರಾಟ ಮಾಡಲಿವೆ. ಫೋಟೋ ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, ಅವುಗಳಲ್ಲಿ ಹೂವುಗಳ ವಿವರ, ವೈಜ್ಞಾನಿಕ ಹೆಸರು ಸೇರಿದಂತೆ ಹಲವು ಮಾಹಿತಿ ಸಿಗಲಿದೆ.

ಎಲ್ಲಾ ವಯೋಮಾನದವರನ್ನೂ ಸೆಳೆಯುವ ಶಕ್ತಿಯನ್ನು ಹೂಗಳು ಹೊಂದಿವೆ. ಸುಂದರವಾದ ಕಲೆಯ ರೂಪದಲ್ಲಿ ಅವುಗಳನ್ನು ಜೋಡಿಸಲಾಗಿದೆ. ಮಾಲ್‌ಗೆ ಬರುವ ಜನರಿಗೆ ಇದು ಸಂತೋಷ ತರಲಿದೆ ಎಂಬ ನಂಬಿಕೆ ನಮ್ಮದು ಎಂದು ಬ್ರಿಗೇಡ್ ಗ್ರೂಪ್ ಸಿಇಒ (ಕಮರ್ಷಿಯಲ್ ಅಂಡ್ ರಿಟೇಲ್) ವಿಶಾಲ್ ಮಿರ್ಚಂದಾನಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+