Get Updates
Get notified of breaking news, exclusive insights, and must-see stories!

ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ವರ್ಷಕ್ಕೆ 1,000ಕ್ಕೂ ಹೆಚ್ಚು ಅಪ್ರಾಪ್ತೆಯರ ಗರ್ಭಧಾರಣೆ ಪ್ರಕರಣಗಳು!

ಬಾಲ್ಯವಿವಾಹವು ಕಾನೂನುಬಾಹಿರವಾಗಿದ್ದರೂ ಇಂದಿಗೂ ಪ್ರಚಲಿತವಾಗಿದೆ, ಅದರಲ್ಲೂ ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಲ್ಲಿ ಬಾಲ್ಯ ವಿವಾಹವು ನಡೆಯುತ್ತಲೆ ಇದೆ.

ಬೆಂಗಳೂರು, ಫೆಬ್ರವರಿ. 20: ನಗರದ ಪ್ರಸಿದ್ಧ ಸರ್ಕಾರಿ ಸ್ವಾಮ್ಯದ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವರ್ಷಕ್ಕೆ ಸುಮಾರು ಸಾವಿರಕ್ಕೂ ಹೆಚ್ಚು ಹದಿಹರೆಯದ ಗರ್ಭಿಣಿಯರು ದಾಖಲಾಗುತ್ತಾರೆ ಎಂಬ ವರದಿ ಬಹಿರಂಗವಾಗಿದೆ.

ಇದರಲ್ಲಿ ಸುಮಾರು 30% ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ಪೊಲೀಸರಿಗೆ ವರದಿಯಾಗುತ್ತಿದ್ದು, ಅವುಗಳನ್ನು ಪೋಕ್ಸೋ ಪ್ರಕರಣಗಳಾಗಿ ಪರಿಗಣಿಸಲಾಗಿದೆ ಎಂದು ವರದಿಯ ಅಂಕಿಅಂಶ ತೋರಿಸುತ್ತದೆ.

ಈ ಪೋಕ್ಸೊದ 70% ಪ್ರಕರಣಗಳಲ್ಲಿ, ಮದುವೆಯು ಗರ್ಭಧಾರಣೆಯ ಕಾರಣವಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ನೀಡುತ್ತದೆ. ಕಾಯಿದೆ ಪ್ರಕಾರ ಆರೋಪಿಯನ್ನು ಬಂಧಿಸಿ, ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಕನಿಷ್ಠ ಮೂರು ತಿಂಗಳ ಕಾಲ ಜೈಲಿನಲ್ಲೇ ಇರಬೇಕಾಗುತ್ತದೆ.

ಬಾಲ್ಯವಿವಾಹವು ಕಾನೂನುಬಾಹಿರವಾಗಿದ್ದರೂ ಇಂದಿಗೂ ಪ್ರಚಲಿತವಾಗಿದೆ, ಅದರಲ್ಲೂ ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಲ್ಲಿ ಬಾಲ್ಯ ವಿವಾಹವು ನಡೆಯುತ್ತಲೆ ಇದೆ.

ಗರ್ಭಧಾರಣೆ ಅಪ್ರಾಪ್ತೆಯ ಜೀವಕ್ಕೆ ಹಾನಿ!

ಗರ್ಭಧಾರಣೆ ಅಪ್ರಾಪ್ತೆಯ ಜೀವಕ್ಕೆ ಹಾನಿ!

ಮದುವೆಯ ಪರಿಣಾಮವಾಗಿ ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳಲ್ಲಿ ಪೋಕ್ಸೊ ಕಾಯಿದೆ ಹಾಕುವುದರಿಂದ ಸಂತ್ರಸ್ತೆ ಮತ್ತು ಮದುವೆಯಾದವರು ಇಬ್ಬರು ಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಇಬ್ಬರ ನಡುವೆ ಭಾವನಾತ್ಮಕ, ಆರ್ಥಿಕ, ವೈದ್ಯಕೀಯ ಮತ್ತು ಕಾನೂನು ಪರಿಣಾಮಗಳನ್ನು ಉಂಟುಮಾಡುತ್ತದೆ.

ಈ ಬಗ್ಗೆ ವೈದ್ಯಕೀಯ ಅಧೀಕ್ಷಕಿ ಡಾ.ಸಿ.ಸವಿತಾ ಮಾತನಾಡಿ, ಹದಿಹರೆಯದವರಲ್ಲಿ ಗರ್ಭಧಾರನೆಯಾಗುವುದರಿಂದ ಪ್ರಿಕ್ಲಾಂಪ್ಸಿಯಾ, ಹೆರಿಗೆ ವೈಪರೀತ್ಯಗಳು, ಮಗುವಿನ ಅಪೂರ್ಣ ಬೆಳವಣಿಗೆ, ರಕ್ತಹೀನತೆ ಮತ್ತು ಅಪೌಷ್ಟಿಕತೆಯಂತಹ ತೊಡಕುಗಳ ಹೆಚ್ಚಿನ ಅಪಾಯವಿದೆ. ರಕ್ತಹೀನತೆಯಿಂದ ಹೆರಿಗೆಯ ಸಮಯದಲ್ಲಿ ರಕ್ತಸ್ರಾವವಾಗಿದ್ದರೆ, ಸಾವಿನ ಸಾಧ್ಯತೆ ಹೆಚ್ಚು ಎಂದು ಎಚ್ಚರಿಕೆ ನೀಡುತ್ತಾರೆ.

ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿ ಪ್ರಕರಣ

ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿ ಪ್ರಕರಣ

ಇತರ ರಾಜ್ಯಗಳು ಸೇರಿದಂತೆ ಬೆಂಗಳೂರಿನ 200 ಕಿಮೀ ವ್ಯಾಪ್ತಿಯ ಗ್ರಾಮಗಳು, ಜಿಲ್ಲೆಗಳಿಂದಲೂ ವಾಣಿವಿಲಾಸ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಆದರೆ 75 ರಿಂದ 80% ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿದ್ದು, ಹೆಚ್ಚಿನ ಪ್ರಕರಣಗಳು ಕಡಿಮೆ ಸಾಮಾಜಿಕ, ಆರ್ಥಿಕ ವರ್ಗಗಳಿಂದ ಬಂದಿವೆ ಎಂದು ಸ್ತ್ರೀರೋಗತಜ್ಞ ಡಾ. ರಾಧಿಕಾ ಹೇಳುತ್ತಾರೆ.

ಜೊತೆಗೆ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ, ಆಸ್ಪತ್ರೆಯು ಎಲ್ಲಾ ಪ್ರಕರಣಗಳನ್ನು ಪೊಲೀಸರಿಗೆ ವರದಿ ಮಾಡಲು ಬದ್ಧವಾಗಿದೆ, ಪೊಲೀಸರು ಆರೋಪಿಗಳ ಮೇಲೆ ಪೋಕ್ಸೊ ಪ್ರಕರಣಗಳನ್ನು ದಾಖಲಿಸುತ್ತಾರೆ ಎಮಂದಿದ್ದಾರೆ.

"ಪೊಲೀಸರು ವಿವಾಹಿತ ಬಾಲಕಿಯರ ಪ್ರಕರಣಗಳನ್ನು ಇತರ ಪೋಕ್ಸೊ ಪ್ರಕರಣಗಳಂತೆ ಪರಿಗಣಿಸುತ್ತಾರೆ. ಬಾಲ್ಯವಿವಾಹ ನಿಷೇಧ ಕಾಯಿದೆ, 2006ರ ಅನ್ವಯ ಪತಿಯನ್ನು ಬಂಧಿಸಲಾಗುತ್ತದೆ. ಮದುವೆಯನ್ನು ಬೆಂಬಲಿಸಿದ ಪತಿ ಮತ್ತು ಇತರರಿಗೆ ಕಾಯಿದೆ ಅನ್ವಯಿಸುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪ್ರಾಪ್ತೆಯರಲ್ಲಿ ಹೆಚ್ಚಿನವರು ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾದವರು!

ಅಪ್ರಾಪ್ತೆಯರಲ್ಲಿ ಹೆಚ್ಚಿನವರು ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾದವರು!

ವಾಣಿವಿಲಾಸ್ ಆಸ್ಪತ್ರೆಯ ದಾಖಲಾತಿಗಳು ಮತ್ತು ಆಧಾರ್ ಕಾರ್ಡ್‌ಗಳಿಂದ ಅಪ್ರಾಪ್ತ ಬಾಲಕಿಯರನ್ನು ಗುರುತಿಸಲಾಗುತ್ತದೆ. ನಂತರ ಪೊಲೀಸರು ಡಿಎನ್ಎ ಮತ್ತು ವಯಸ್ಸಿನ ನಿರ್ಣಯ ಪರೀಕ್ಷೆಗಳಂತಹ ವಿವರಗಳನ್ನು ಸಂಗ್ರಹಿಸುತ್ತಾರೆ.

ಆರೋಪ ಪಟ್ಟಿ ಸಲ್ಲಿಸಿದ ನಂತರ ಮೂರು ತಿಂಗಳ ನಂತರ ಆರೋಪಿಗೆ ಜಾಮೀನು ಸಿಗುತ್ತದೆ. ಕಾಯಿದೆಯ ಪ್ರಕಾರ, ಗಂಡಂದಿರಿಗೆ ಶಿಕ್ಷೆಯಾಗುತ್ತದೆ. ಆದರೆ, ಕೆಲವೊಮ್ಮೆ ನ್ಯಾಯಾಧೀಶರು ಮೃದುತ್ವವನ್ನು ತೋರಿಸುತ್ತಾರೆ. ವಿವಾಹಿತ ಬಾಲಕಿಯರಲ್ಲಿ ಹೆಚ್ಚಿನವರು ಓಡಿಹೋಗಿ ಮಾದುವೆಯಾದವರು ಇರುತ್ತಾರೆ. ಇವರು ಪೋಷಕರ ಬೆಂಬಲವನ್ನು ಹೊಂದಿರುವುದಿಲ್ಲ ಎಂದು ವಾಣಿವಿಲಾಸ್‌ನ ವೈದ್ಯರು ಹೇಳುತ್ತಾರೆ.

"ಈ ಸಂದರ್ಭಗಳಲ್ಲಿ, ಪತಿ ಮಾತ್ರ ಬಾಣಂತಿಯೊಂದಿಗೆ ಆಸ್ಪತ್ರೆಗೆ ಬಂದಿರುತ್ತಾರೆ. ಹಾಗಾಗಿ ಪೋಕ್ಸೋ ಪ್ರಕರಣದಲ್ಲಿ ಪತಿಯನ್ನು ಬಂಧಿಸಿದ ನಂತರ, ಅವರು ಒಬ್ಬಂಟಿಯಾಗಗುತ್ತಾರೆ. ಮಗುವನ್ನು ನೋಡಿಕೊಳ್ಳಲು ಕಷ್ಟಪಡುತ್ತಾರೆ. ಆದ್ದರಿಂದ ನಾವು ತಾಯಿ ಮತ್ತು ಮಗುವನ್ನು ನೋಡಿಕೊಳ್ಳಲಿ ಎಂದು ಕೆಲವು ದಿನಗಳವರೆಗೆ ಉಳಿಸಿಕೊಳ್ಳುತ್ತೇವೆ" ಎಂದಿದ್ದಾರೆ.

ಖಾಸಗಿ ಆಸ್ಪತ್ರೆಗಿಂತ, ವಾಣಿವಿಲಾಸದಲ್ಲಿ ಹೆಚ್ಚು ಪ್ರಕರಣ ವರದಿ

ಖಾಸಗಿ ಆಸ್ಪತ್ರೆಗಿಂತ, ವಾಣಿವಿಲಾಸದಲ್ಲಿ ಹೆಚ್ಚು ಪ್ರಕರಣ ವರದಿ

ಅವಿವಾಹಿತ ಹೆಣ್ಣುಮಕ್ಕಳ ವಿಷಯದಲ್ಲಿಯೂ ಅನೇಕ ಪ್ರಕರಣಗಳು ಒಮ್ಮತದ ಸಂಬಂಧಗಳಾಗಿವೆ. ಆಸ್ಪತ್ರೆಯಲ್ಲಿ ಬಾಲಕಿಯ ಪೋಷಕರು ಮಾತ್ರ ಇರುತ್ತಾರೆ. ನವಜಾತ ಶಿಶುವನ್ನು ನೋಡಿಕೊಳ್ಳಲು ಅವರು ನಿರಾಕರಿಸಿದರೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸುತ್ತದೆ.

ಅನೇಕ ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ವರದಿಯಾಗದೆಯೂ ಹೋಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಬರುವ ಒಟ್ಟು ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳು ಕೇವಲ 2 ರಿಂದ 3% ರಷ್ಟು ಕೊಡುಗೆ ನೀಡಿದರೇ, ವಾಣಿವಿಲಾಸದಿಂದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತವೆ.

ಸರ್ಕಾರ, ಕಾನೂನು ಎಷ್ಟು ಕಠಿಣವಾಗಿದ್ದರೂ, ಜಾಗೃತಿ ಮೂಡಿಸುವ ಕೆಲಸಗಳನ್ನೂ ಮಾಡಿದರೂ ಕೂಡ ಇಂದಿಗೂ ಬಾಲ್ಯ ವಿವಾಹ, ಅಪ್ರಾಪ್ತೆಯರ ಗರ್ಭಧಾರಣೆ ಒಂದು ಪಿಡುಗಾಗಿ ಕಾಡುತ್ತಲೇ ಇದೆ.

(ಮಾಹಿತಿ ಕೃಪೆ- ಡೆಕ್ಕನ್ ಹೆರಾಲ್ಡ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+