ಬೆಂಗಳೂರು: ಪೊಲೀಸರಿಂದಲೇ ಹಣ ಎಗರಿಸಿದ ಐನಾತಿ ಕಳ್ಳರು
ಬೆಂಗಳೂರು, ಅಕ್ಟೋಬರ್ 15: ನಗರದ ಐನಾತಿ ಕಳ್ಳರು ಕರ್ತವ್ಯದಲ್ಲಿದ್ದ ಪೊಲೀಸ್ ಇಂದಲೇ 48,000 ರೂ ಹಣ ಕಳ್ಳತನ ಮಾಡಿದ್ದಾರೆ.
ನಗರದ ಮಡಿವಾಳ ವೃತ್ತದ ಸಂಚಾರಿ ಪೊಲೀಸ್ ಎಸ್‌ಐ ನಾಗಮಣಿ ಅವರ ಬೈಕ್‌ನಿಂದ 48,000 ರೂ ಹಣವನ್ನು ದೋಚಿದ್ದಾರೆ ಕಳ್ಳರು. ಇದರಲ್ಲಿ ಸರ್ಕಾರಕ್ಕೆ ಕಟ್ಟಬೇಕಿದ್ದ ದಂಡದ ಹಣವೂ ಸೇರಿದೆ.
ಇಲಾಖೆಯ ವತಿಯಿಂದ ಆಯೋಜಿಸಿದ್ದ ಮ್ಯಾರಾಥಾನ್ ಕರ್ತವ್ಯದಲ್ಲಿ ಭಾಗವಹಿಸಲು ನಾಗಮಣಿ ಅವರು ಭಾನುವಾರ ಬಂದಿದ್ದರು. ಗಾಡಿಯನ್ನು ಆರ್.ಆರ್.ಎಂ.ಆರ್ ರಸ್ತೆಯಲ್ಲಿ ನಿಲ್ಲಿಸಿದ್ದರು. ಗಾಡಿಯ ಡಿಕ್ಕಿಯಲ್ಲಿ 48,000 ಸಾವಿರ ಹಣ ಇತ್ತು. ಕರ್ತವ್ಯ ಮುಗಿಸಿ ವಾಪಸ್ ಬರುವ ವೇಳೆಗೆ ಹಣ ಕಳುವಾಗಿದೆ.

ಶನಿವಾರ ಕರ್ತವ್ಯ ಮಾಡಿ ಸಂಗ್ರಹಿಸಿದ್ದ ದಂಡ 23,400 ರೂಪಾಯಿ ಜೊತೆಗೆ ತಮ್ಮ ವೈಯಕ್ತಿಕ ಹಣವನ್ನು ಪರ್ಸ್‌ನಲ್ಲಿ ಇರಿಸಿ ಡಿಕ್ಕಿಯಲ್ಲಿಟ್ಟಿದ್ದರು ಕಳ್ಳರು ಡಿಕ್ಕಿಯಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ.
ನಾಗಮಣಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರಿಂದಲೇ ಹಣ ಕದ್ದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ.











Click it and Unblock the Notifications