ಐಪಿಎಲ್ ಅಭಿಮಾನಿಯ ಹಣವನ್ನು ಎಗರಿಸಿದ ಕಳ್ಳರು

ಬಿಟಿಎಂ ಲೇಔಟ್ ನಿವಾಸಿ ಅಜಯ್‍ಪುಷ್ಪ ಎಂಬವರು ಮ್ಯಾಚ್ ಮುಗಿಸಿ ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಬಿ.ಟಿಎಂ 34 ನೇ ಮೈನ್ ಸೋಮೇಶ್ವರ ಕಾಲೋನಿ ಬಳಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳಲ್ಲಿ ಒಬ್ಬ ಅಜಯ್ ಅವರನ್ನು ತಡೆದು ಅವರಲ್ಲಿರುವ ಎಲ್ಲಾ ವಸ್ತುಗಳನ್ನು ನೀಡುವಂತೆ ಕೇಳಿದ್ದಾನೆ.[ಪ್ರಜ್ಞೆ ತಪ್ಪಿಸಿ ಬೆಂಗಳೂರು ಪ್ರಯಾಣಿಕನ ದೋಚಿದ]
ಈ ವೇಳೆ ಅಜಯ್ ಅವರು ಅವನನ್ನು ತಳ್ಳಿದಾಗ ಬೈಕಿನಲ್ಲಿದ್ದ ಇನ್ನೊಬ್ಬ ಇಳಿದು ಇವರಿಗೆ ಚಾಕುವಿನಿಂದ ತಿವಿದು ತಲೆಗೆ ಕೈನಿಂದ ಗುದ್ದಿ ಆಧಾರ್ ಕಾರ್ಡ್, ವೋಟರ್ ಐಡಿ, ಎಚ್‌ಡಿಎಫ್‌ಸಿ ಎಟಿಎಂ ಕಾರ್ಡ್, ಒಂದು ಮೊಬೈಲ್ ಫೋನ್, 800 ರೂಪಾಯಿ ಹಣವನ್ನು ಕಸಿದು ಹೊಂಡಾ ಆಕ್ಟೀವಾ ದಲ್ಲಿ ಪರಾರಿಯಾಗಿದ್ದಾರೆ.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications