ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ಪಕ್ಷಗಳ ಒಗ್ಗಟ್ಟು ಕಾಯ್ದುಕೊಳ್ಳಲಿದ್ದಾರೆ ದೇವೇಗೌಡರು, ಡ್ಯಾನಿಶ್ ಆಲಿ

|
Google Oneindia Kannada News

Recommended Video

ಮೈತ್ರಿ ಪಕ್ಷಗಳ ಒಗ್ಗಟ್ಟು ಕಾಯ್ದುಕೊಳ್ಳಲಿದ್ದಾರೆ ದೇವೇಗೌಡರು | Oneindia Kannada

ಬೆಂಗಳೂರು, ಜನವರಿ 30: ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ವಿರೋಧಿ ಪಕ್ಷಗಳ ಸರಕಾರದ ಒಗ್ಗಟ್ಟನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಕಾಪಾಡಿಕೊಂಡು ಹೋಗುತ್ತಾರೆ. ಕಾಂಗ್ರೆಸ್-ಪ್ರಾದೇಶಿಕ ಪಕ್ಷಗಳು ಕೊಡುವ ಮತ್ತು ಪಡೆಯುವ ವಿಚಾರದಲ್ಲಿ ಉದಾರವಾಗಿರಬೇಕು. ಕರ್ನಾಟಕದಲ್ಲೂ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಯಾವುದೇ ಷರತ್ತಿಲ್ಲ.

-ಹೀಗೆ ಹೇಳಿದ್ದಾರೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ. ಮೋದಿ ನೇತೃತ್ವದ ಸರಕಾರವನ್ನು ಕೆಳಗಿಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಪಕ್ಷಗಳೆಲ್ಲ ಒಂದಾಗಬೇಕಿದೆ ಎಂದು ಮಂಗಳವಾರ ಪಕ್ಷದ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೈತ್ರಿ ಸರ್ಕಾರ ಉಳಿಸಲು ಕೊನೆಯ ವರೆಗೆ ಹೋರಾಡುತ್ತೇನೆ: ದೇವೇಗೌಡಮೈತ್ರಿ ಸರ್ಕಾರ ಉಳಿಸಲು ಕೊನೆಯ ವರೆಗೆ ಹೋರಾಡುತ್ತೇನೆ: ದೇವೇಗೌಡ

ಆಯಾ ರಾಜ್ಯಗಳಲ್ಲಿ ಗಟ್ಟಿ ಇರುವ ಪಕ್ಷಗಳ ಜತೆಗೆ ಬಾಕಿ ರಾಜಕೀಯ ಪಕ್ಷಗಳು ಜತೆಯಾಗಿ ನಿಂತು, ಬಿಜೆಪಿಯನ್ನು ಮಣಿಸಬೇಕು ಎಂದು ಕಾರ್ಯಕಾರಿಣಿಯಲ್ಲಿ ಸಲಹೆಯನ್ನು ನೀಡಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿಲ್ಲ ಎಂದು ಡ್ಯಾನಿಶ್ ಆಲಿ ಆರೋಪ ಮಾಡಿದ್ದರೆ.

HD Deve Gowda

ಇನ್ನು ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದಾಗಿ ಹೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನ ಕೆಲವು ನಾಯಕರು ಮೈತ್ರಿ ಧರ್ಮವನ್ನು ಮೀರಿ ಮಾತನಾಡಿದ್ದಾರೆ. ಅಂಥ ಸನ್ನಿವೇಶದಲ್ಲಿ ಸಿಟ್ಟಾಗುವುದು ಸಹಜ. ಅಂಥದ್ದೇ ಕೋಪದಲ್ಲಿ ಕುಮಾರಸ್ವಾಮಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ ಈಗ ಕಾಂಗ್ರೆಸ್ ಹೈ ಕಮಾಂಡ್ ಮಧ್ಯಪ್ರವೇಶಿಸಿ, ಎಲ್ಲವನ್ನೂ ಸರಿ ಮಾಡಿದೆ ಎಂದಿದ್ದಾರೆ.

English summary
There will be no condition to Congress for seat sharing in LS polls 2019 from JDS, said party national general secretary Danish Ali in Bengaluru on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X