ಮಹಿಳಾ ಇನ್ಸ್‌ಪೆಕ್ಟರ್ ಮನೆಯಲ್ಲಿ ಕಳವು: ನಾಲ್ವರ ಬಂಧನ

ಬೆಂಗಳೂರು, ಜನವರಿ 1: ನಿವೃತ್ತ ಮಹಿಳಾ ಇನ್ಸ್‌ಪೆಕ್ಟರ್ ಮನೆಯಲ್ಲಿ ಕಳ್ಳತನ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರ ಕಾಲೊನಿ ನಿವಾಸಿ ಹಸೀನಾ(39) ಮೆಹಬೂಬ್, ಇಮ್ರಾನ್ ಬಂಧಿತರು.

ನಿವೃತ್ತ ಇನ್ಸ್‌ಪೆಕ್ಟರ್ ಶಾಂತಾ ಅವರು ಚಂದ್ರಾಲೇಔಟ್‌ ಸಮೀಪದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದಾರೆ. ನ.15ರ ಮಧ್ಯಾಹ್ನ 3.30ರ ಸುಮಾರಿಗೆ ಅವರು ಒಬ್ಬರೇ ಮನೆಯಲ್ಲಿ ಇರುವುದನ್ನು ಗಮನಿಸಿ ಖದೀಮರ ಗ್ಯಾಂಗ್, ವಾಷಿಂಗ್ ಮೆಷಿನ್ ರಿಪೇರಿ ಮಾಡಿಕೊಡುವುದಾಗಿ ಹೇಳಿ ಮನೆಯ ಬಾಗಿಲು ಬಡಿದಿದ್ದರು. ಶಾಂತಾ ಅವರು ಅಗತ್ಯವಿಲ್ಲ ಎಂದು ಹೇಳುತ್ತಿರುವಾಗಲೇ ಅವರನ್ನು ತಳ್ಳಿಕೊಂಡು ಮನೆಯೊಳಗೆ ನುಗ್ಗಿದ್ದರು.

Theft in retired inspector house: 4 arrest

ಬಳಿಕ ಅವರ ಬಾಯಿ ಮುಚ್ಚಿ ಬೆದರಿಸಿ ಅವರ ಮೈಮೇಲಿದ್ದ ಸುಮಾರು 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಚಂದ್ರಾ ಲೇಔಟ್‌ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಇದೀಗ ಚಂದ್ರಾಲೇಔಟ್ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+