Darshan: ದರ್ಶನ್‌ ಜೈಲಿನಲ್ಲಿ ಹೇಗಿದ್ದಾರೆ? ಬಿಡುಗಡೆಯಾದ ಜೈಲ್‌ಮೇಟ್‌ ಹೇಳಿದ್ದೇನು?

ಬೆಂಗಳೂರು, ಜುಲೈ 23: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗಿದೆ. ಇದೀಗ ಈ ಕುತೂಹಲಕ್ಕೆ ಅವರೊಂದಿಗೆ ಜೈಲಿನಲ್ಲಿದ್ದು ಬಿಡುಗಡೆಯಾದ ವ್ಯಕ್ತಿಯೊಬ್ಬರು ಉತ್ತರ ನೀಡಿದ್ದಾರೆ.

ತುವನೂರು ಸಿದ್ಧಾರೂಢ ಎನ್ನುವವರು ಇಪ್ಪತ್ತೆರಡು ವರ್ಷಗಳ ಕಾಲ ಜೈಲಿನಲ್ಲಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಸನ್ನಢತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೂ ಮುನ್ನ ಸಿದ್ಧಾರೂಢ ಅವರು ದರ್ಶನ್‌ ಭೇಟಿಯಾಗಿದ್ದಾರೆ ಎನ್ನಲಾಗಿದೆ.

The Released Jailmate Explained How Actor Darshan Is In Parappana Agrahara

ಥರ್ಡ್‌ ಐ ಎನ್ನುವ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಸಿದ್ಧಾರೂಢ, ದರ್ಶನ್‌ ಸರ್‌ ವಿಐಪಿ ಸೆಲ್‌ನಲ್ಲಿ ಇದ್ದಾರೆ. ವಿಐಪಿ ಸೆಲ್‌ ಅಂದರೆ ಬೇರೆಯವರಿಗಿಂತ ಚೆನ್ನಾಗಿ ಇರುತ್ತದೆ. ಅಲ್ಲಿ ಬೆಡ್‌, ಖುರ್ಚಿ, ಇಪ್ಪತ್ತು ಲೀಟರ್‌ ನೀರಿನ ಕ್ಯಾನ್‌, ಒಂದು ಸೊಳ್ಳೆ ಪರದೆ, ಒಂದು ಟಿವಿ ಅಷ್ಟು ಬಿಟ್ಟರೆ ಬೇರೆನೂ ಇರುವುದಿಲ್ಲ. ಅವರ ಸೆಲ್‌ ಮುಂದೆ ಸ್ವಲ್ಪ ಜಾಸ್ತಿ ಸ್ಥಳ ಇರುತ್ತದೆ. ಸೆಲ್‌ನಿಂದ ಹೊರಗೆ ಬಂದರೆ ಅವರು ಒಬ್ಬರೆ ಓಡಾಡಬೇಕು. ಬೇರೆ ಯಾರಿಗೂ ಅವಕಾಶ ಇಲ್ಲ.

ದರ್ಶನ್‌ ಇತರ ಕೈದಿಗಳನ್ನು ಭೇಟಿ ಮಾಡಲು ಆಗುವುದಿಲ್ಲ. ಅವರನ್ನು ಮನೆಯಿಂದ ಭೇಟಿ ಮಾಡಲು ಯಾರಾದರೂ ಬಂದಾಗ ಅವರು ಹೋಗಿ ಬರುವುದನ್ನು ಇತರ ಕೈದಿಗಳು ನಿಂತು ನೋಡುತ್ತಾರೆ. ಇತರ ಆರೋಪಿಗಳು ಯಾರೂ ದರ್ಶನ್‌ ಜೊತೆ ಇಲ್ಲ. ಅವರ ಬಗ್ಗೆ ನನಗೆ ಗೊತ್ತಿಲ್ಲ. ಅವರು ಒಬ್ಬರೇ ಇದ್ದಾರೆ. ಅವರ ಜೊತೆಗೆ ಬೇರೆ ಯಾರೂ ಇಲ್ಲ.

ದರ್ಶನ್‌ ಪ್ರಜ್ವಲ್‌ ರೇವಣ್ಣ ಬೇರೆ ಬೇರೆ ಸೆಲ್‌ನಲ್ಲಿ ಇದ್ದಾರೆ. ಅವರು ಹಾಗೂ ಇವರು ಇರುವ ರೂಮ್‌ಗೆ ಸುಮಾರು ಒಂದು ಕಿಲೋಮೀಟರ್‌ ದೂರವಿದೆ. ಅವರು ಭೇಟಿಯಾಗಲು ಸಾಧ್ಯವೇ ಇಲ್ಲ. ಇನ್ನು ಅವರಿಗೆ ವಿಶೇಷ ಊಟ ಏನು ಕೊಡಲ್ಲ. ಎಲ್ಲರಿಗೂ ಕೊಡುವ ಊಟವನ್ನೇ ಕೊಡುತ್ತಿದ್ದಾರೆ. ದರ್ಶನ್‌ ಸರ್‌ ಸೆಲ್‌ಗೆ ಊಟ ಬರುತ್ತದೆ. ದರ್ಶನ್‌ ಜೈಲೂಟನೇ ಮಾಡುತ್ತಿದ್ದಾರೆ.

The Released Jailmate Explained How Actor Darshan Is In Parappana Agrahara

ನಾನು ನೋಡಿದಾಗ ವಿಗ್‌ ಇತ್ತು. ಅವರು ಕೂಲ್‌ ಆಗಿದ್ದಾರೆ. ನಮ್ಮ ಜೊತೆ ಚೆನ್ನಾಗಿ ಮಾತನಾಡುತ್ತಾರೆ. ಜೈಲಿನಲ್ಲಿ ದರ್ಶನ್‌ ಅವರನ್ನು ಎಲ್ಲರೂ ಭೇಟಿಯಾಗುವುದು ಕಷ್ಟ. ಆದರೆ ನಾನು ಅಧಿಕಾರಿಗಳ ಬಳಿ ಭೇಟಿ ಮಾಡಿದೆ. ದರ್ಶನ್‌ ಸರ್‌ ಅಭಿಮಾನಿ ಭೇಟಿಯಾಗಬೇಕು ಎಂದು ಕೇಳಿದೆ. ಅವರು ಅವಕಾಶ ಕೊಟ್ಟರು. ಅಲ್ಲಿ ನಾನು ಅವರನ್ನು ಭೇಟಿಯಾಗಿ ಒಂದು ಹತ್ತು ನಿಮಿಷ ಧ್ಯಾನ ಮಾಡಿಸಿದೆ.

ನನಗೆ ಬಿಸ್ಕೆಟ್‌ ಕೊಟ್ಟರು. ತುಂಬಾ ಆತ್ಮೀಯವಾಗಿ ಮಾತನಾಡಿದರು. ನನ್ನ ಕೇಸ್‌ ಬಗ್ಗೆ ವಿಚಾರಣೆ ಮಾಡಿದರು. ನಿಮ್ಮ ಬಗ್ಗೆ ಹೇಳಿ ಅಂದರೆ ಟಿವಿ ನೋಡುತ್ತಿದ್ದೀರಲ್ಲಾ ಎಂದರು. ನನ್ನ ಮಾತಿಗೆ ಗೌರವ ಕೊಟ್ಟು ಧ್ಯಾನ ಮಾಡಿದರು. ಅವರಿಗೂ ಒಬ್ಬರೇ ಇದ್ದು ಬೇಜಾರಾಗಿರುತ್ತದೆ. ಯಾಕೆಂದರೆ ಯಾರೂ ಮಾತನಾಡಿಸಲ್ಲ ಅವರನ್ನು. ಹೀಗಾಗಿ ನಾನು ಹೋದಾಗ ಅವರು ತುಂಬಾ ಆತ್ಮೀಯವಾಗಿ ಮಾತನಾಡಿದರು ಎಂದು ಸಿದ್ಧಾರೂಢ ಜೈಲಿನಲ್ಲಿ ದರ್ಶನ್‌ ಜೊತೆಗೆ ಕಳೆದ ಕ್ಷಣವನ್ನು ಮೆಲುಕು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+