• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲ್ಯಾಕ್ಮೆ ಫ್ಯಾಶನ್ ವೀಕ್‍ಗೆ ಬೆಂಗಳೂರಿನ ಅಕ್ಷತಾ ಬಾಲಕೃಷ್ಣ ಆಯ್ಕೆ

|

ಬೆಂಗಳೂರು, ಜುಲೈ 10: ಹೆಸರಾಂತ ಸೌಂದರ್ಯವರ್ಧಕ ತಯಾರಿಕಾ ಸಂಸ್ಥೆ ಲ್ಯಾಕ್ಮೆ ತನ್ನ ಭಾರತದ ಅತ್ಯಂತ ಜನಪ್ರಿಯ ಲ್ಯಾಕ್ಮೆ ಫ್ಯಾಶನ್ ವೀಕ್‍ನ ವಿಂಟರ್/ಫೆಸ್ಟಿವ್ 2019 ರ ಸರಣಿಗೆ ರೂಪದರ್ಶಿಗಳ ಆಡಿಶನ್ ಅನ್ನು ಇಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆಸಿತು. ಮುಂಬೈನ ಸೇಂಟ್ ರೆಗಿಸ್‍ನಲ್ಲಿ ಆಗಸ್ಟ್ 21 ರಿಂದ 25 ರವರೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ ವಿಂಟರ್/ಫೆಸ್ಟಿವ್ 2019 ನಡೆಯಲಿದೆ.

ಫ್ಯಾಶನ್ ಉದ್ಯಮದಲ್ಲಿನ ಪರಿಣತರನ್ನೊಳಗೊಂಡ ವಿಶೇಷ ತೀರ್ಪುಗಾರರ ಮಂಡಳಿಯು ಉದ್ಯಾನನಗರಿ ಬೆಂಗಳೂರಿನ ಅಕ್ಷತಾ ಬಾಲಕೃಷ್ಣ ಮತ್ತು ಲೂಧಿಯಾನಾದ ಕಿರಣ್‍ದೀಪ್ ಚಾಹಲ್ ಅವರನ್ನು ವಿಜಯಿಗಳನ್ನಾಗಿ ಘೋಷಿಸಿತು. ಈ ವಿಜೇತೆ ಲ್ಯಾಕ್ಮೆ ಫ್ಯಾಶನ್ ವೀಕ್‍ನ ವಿಂಟರ್/ಫೆಸ್ಟಿವ್ 2019 ರ ಸರಣಿಯ ramp ಮೇಲೆ ಮೊದಲ ಬಾರಿಗೆ ಹೆಜ್ಜೆ ಹಾಕಲಿದ್ದಾರೆ.

ಜುಲೈ 14ಕ್ಕೆ ಬೆಂಗಳೂರಿನಲ್ಲಿ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್

ಅಂತಾರಾಷ್ಟ್ರೀಯ ಮಟ್ಟದ ಖ್ಯಾತನಾಮ ಮಾಡೆಲಿಂಗ್ ಏಜೆನ್ಸಿಗಳಲ್ಲಿ ಒಂದಾಗಿರುವ ಐಎಂಜಿ ಮಾಡೆಲ್ಸ್ ಸಂಸ್ಥೆಯು ಈ ಪ್ರತಿಭಾನ್ವಿತ ಮಾಡೆಲ್‍ಗಳ ಅನ್ವೇಷಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿತು. ಈ ಸಂಸ್ಥೆ ದೇಶದ ಪ್ರಮುಖ ಮೂರು ನಗರಗಳಾದ ಬೆಂಗಳೂರು, ಜೈಪುರ ಮತ್ತು ಗುವಾಹತಿಯಲ್ಲಿ ಈ ಆಡಿಶನ್ ಅನ್ನು ನಡೆಸುತ್ತಿದೆ.

ಈ ಮೂರು ನಗರಗಳಲ್ಲಿನ ವಿಜೇತರಿಗೆ ಅಂತಾರಾಷ್ಟ್ರೀಯ Ramp ಮೇಲೆ ಹೆಜ್ಜೆ ಹಾಕುವ ಮತ್ತು ಐಎಂಜಿ ಯೂರೋಪ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಇದಲ್ಲದೇ ಒಬ್ಬರು ಅದೃಷ್ಠಶಾಲಿ ವಿಜೇತೆ ಲ್ಯಾಕ್ಮೆಯ ಡಿಜಿಟಲ್ ಕಂಟೆಂಟ್‍ನಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಲಭ್ಯವಾಗಲಿದೆ.

ತೀರ್ಪುಗಾರರಾಗಿದ್ದ ನಟಿ ಐಂದ್ರಿತಾ ರೇ

ತೀರ್ಪುಗಾರರಾಗಿದ್ದ ನಟಿ ಐಂದ್ರಿತಾ ರೇ

ಐಎಂಜಿ ಮಾಡೆಲ್‍ಗಳಾದ ಕ್ಯಾಲಂ ಬುಚನ್ ಮತ್ತು ಲೂಯಿಸ್ ಡೊಮಿಂಗೋ, ದಕ್ಷಿಣ ಭಾರತದ ಹೆಸರಾಂತ ನಟಿ ಐಂದ್ರಿತಾ ರೇ, ಖ್ಯಾತ ಫ್ಯಾಶನ್ ಡಿಸೈನರ್ ನಿಖಿಲ್ ಥಂಪಿ, ಫ್ಯಾಶನ್ ಕೊರಿಯೋಗ್ರಾಫರ್ ಮತ್ತು ಶೋ ಡೈರೆಕ್ಟರ್ ವಹ್ಬಿಝ್ ಮೆಹ್ತಾ, ಲ್ಯಾಕ್ಮೆಯ ಇನ್ನೋವೇಶನ್ಸ್ ಮುಖ್ಯಸ್ಥ ಅಶ್ವಥ್ ಸ್ವಾಮಿನಾಥನ್ ಮತ್ತು ಐಎಂಜಿ ರಿಲಾಯನ್ಸ್‍ನ ಡಿಸೈನರ್ ರಿಲೇಶನ್ಸ್‍ನ ಮುಖ್ಯಸ್ಥೆ ನಿಖಿತಾ ಪೂಂಜಾ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಐಂದ್ರಿತಾ ರೇ ಅವರು ಮಾತನಾಡಿ

ಐಂದ್ರಿತಾ ರೇ ಅವರು ಮಾತನಾಡಿ

ದಕ್ಷಿಣ ಭಾರತದ ಹೆಸರಾಂತ ನಟಿ ಐಂದ್ರಿತಾ ರೇ ಅವರು ಮಾತನಾಡಿ, "ಲ್ಯಾಕ್ಮೆ ಫ್ಯಾಶನ್ ವೀಕ್‍ನ ಬೆಂಗಳೂರು ಮಾಡೆಲ್ ಆಡಿಶನ್‍ಗಳಲ್ಲಿ ತೀರ್ಪುಗಾರರ ಮಂಡಳಿಯಲ್ಲಿನ ನಾನು ಭಾಗಿಯಾಗಿರುವುದಕ್ಕೆ ನನಗೆ ಸಂತೋಷವೆನಿಸಿದೆ. ಇಲ್ಲಿ ಗೆಲುವು ಸಾಧಿಸಿರುವ ಹುಡುಗಿಯರು ತಮ್ಮದೇ ಆದ ಮಾರ್ಗದಲ್ಲಿ ತೀರ್ಪುಗಾರರ ಗಮನವನ್ನು ಸೆಳೆದಿದ್ದಾರೆ. ಗೆಲುವು ಸಾಧಿಸಿರುವ ಮತ್ತು ಇತರೆ ಆಕಾಂಕ್ಷಿ ಮಾಡೆಲ್‍ಗಳಿಗೆ ನಾನು ಶುಭಾಶಯಗಳನ್ನು ಹೇಳುತ್ತಿದ್ದೇನೆ'' ಎಂದರು.

ಲ್ಯಾಕ್ಮೆ ಸಂಸ್ಥೆಯ ಅಶ್ವಥ್ ಸ್ವಾಮಿನಾಥನ್

ಲ್ಯಾಕ್ಮೆ ಸಂಸ್ಥೆಯ ಅಶ್ವಥ್ ಸ್ವಾಮಿನಾಥನ್

ಲ್ಯಾಕ್ಮೆಯ ಇನ್ನೋವೇಶನ್ಸ್ ನ ಮುಖ್ಯಸ್ಥರಾದ ಅಶ್ವಥ್ ಸ್ವಾಮಿನಾಥನ್ ಅವರು ಮಾತನಾಡಿ, "ಈ ನಗರಗಳಲ್ಲಿನ ಪ್ರತಿಭಾನ್ವಿತರನ್ನು ನೋಡಲು ನಮಗೆ ಅತೀವ ಸಂತಸವಾಗುತ್ತಿದೆ. ಅವರು ತಮ್ಮ ಮಾಡೆಲಿಂಗ್ ವೃತ್ತಿಯನ್ನು ಅನಾವರಣ ಮಾಡಲು ಲ್ಯಾಕ್ಮೆ ವೇದಿಕೆಯನ್ನು ಒದಗಿಸಿಕೊಟ್ಟಿದೆ. ನಮಗೆ ramp ಮೇಲೆ ಈ ಹೊಸ ಮುಖಗಳು ಹೆಜ್ಜೆ ಹಾಕುವುದನ್ನು ನೋಡಿದಾಗ ಸಂತೋಷವೆನಿಸಿತು. ಇದರಲ್ಲಿ ಒಬ್ಬ ಅದೃಷ್ಟಶಾಲಿಗೆ ಲ್ಯಾಕ್ಮೆ ಡಿಜಿಟಲ್ ಕಂಟೆಂಟ್‍ನಲ್ಲಿ ನಟಿಸಲು ಉತ್ತಮ ಅವಕಾಶ ಲಭಿಸಲಿದೆ'' ಎಂದರು.

ನಿಖಿತಾ ಪೂಂಜಾ ಅವರು ಮಾತನಾಡಿ

ನಿಖಿತಾ ಪೂಂಜಾ ಅವರು ಮಾತನಾಡಿ

ಐಎಂಜಿ ರಿಲಾಯನ್ಸ್ ನ ಡಿಸೈನರ್ ರಿಲೇಶನ್ಸ್ ನ ಮುಖ್ಯಸ್ಥೆ ನಿಖಿತಾ ಪೂಂಜಾ ಅವರು ಮಾತನಾಡಿ, "ನಾವು ಪ್ರತಿ ಸೀಸನ್‍ನಲ್ಲಿ ದೇಶದ ಮೂಲೆ ಮೂಲೆಗಳ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡುವ ದೊಡ್ಡ ಅವಕಾಶಗಳನ್ನು ನೀಡುತ್ತಾ ಬಂದಿರುವುದಕ್ಕೆ ಸಂತಸವೆನಿಸುತ್ತಿದೆ. ಮುಂಬರುವ ಎಲ್‍ಎಫ್‍ಡಬ್ಲ್ಯೂ ಸೀಸನ್‍ನಲ್ಲಿ ಈ ಹೊಸ ಮುಖಗಳ ಪಾದಾರ್ಪಣೆಯನ್ನು ಮತ್ತು ಫ್ಯಾಶನ್ ಉದ್ಯಮದಲ್ಲಿನ ಪಯಣ ಆರಂಭಿಸುವುದನ್ನು ನೋಡಲು ನಾವು ಕಾತುರರಾಗಿದ್ದೇವೆ'' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Lakme Fashion Week (LFW) Winter/Festive 2019 edition is scheduled to take place from August 21 to 25. Akshatha Balakrishna of Bengaluru and Kiran Deep Chahal of Ludiana were declared winners at an event held at ITC gardenia, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more