ಬೆಳ್ಳಂದೂರು ಕೆರೆ: ಎನ್ ಜಿ ಟಿಯಿಂದ ಕೈಗಾರಿಕೆಗಳಿಗೆ ಮತ್ತೆ ಮುಖಭಂಗ
ಮೇ 24 ರಂದು ಬೆಳ್ಳಂದೂರು ಕೆರೆಯ ಸುತ್ತಮುತ್ತಲ 76 ಕೈಗಾರಿಕಾ ಘಟಕಗಳನ್ನು ಮುಚ್ಚವಂತೆ ಎನ್ ಜಿಟಿ ಆದೇಶ ನೀಡಿತ್ತು. ಈ 76 ಕೈಗಾರಿಕೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು.
ಬೆಂಗಳೂರು, ಮೇ 31: ಬೆಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆ ಭಾಗದ ಕೈಗಾರಿಕೆಗಳನ್ನು ಮುಚ್ಚುವಂತೆ ತಾನು ನೀಡಿದ್ದ ಆದೇಶವನ್ನು ಹಿಂಪಡೆಯಲು ರಾಷ್ಟ್ರೀಯ ಹಸಿರು ಪ್ರಾಧಿಕಾರ ನಿರಾಕರಿಸಿದೆ.
ಮೇ 24 ರಂದು ಬೆಳ್ಳಂದೂರು ಕೆರೆಯ ಸುತ್ತಮುತ್ತಲ 76 ಕೈಗಾರಿಕಾ ಘಟಕಗಳನ್ನು ಮುಚ್ಚವಂತೆ ಎನ್ ಜಿಟಿ ಆದೇಶ ನೀಡಿತ್ತು. ಈ 76 ಕೈಗಾರಿಕೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು.[ಬೆಳ್ಳಂದೂರು ಪರಿಸರದ ಕಾರ್ಖಾನೆಗಳ ನೀರು, ವಿದ್ಯುತ್ ಕಡಿತಕ್ಕೆ ಆದೇಶ]

ಇದರಿಂದ ಕಂಗಾಲಾಗಿದ್ದ ಕೈಗಾರಿಕೆಗಳು ಎನ್ ಜಿ ಟಿ ಆದೇಶವನ್ನು ಪುನರ್ಪರಿಶೀಲಿಸುವಂತೆ ಕೋರಿದ್ದವು. ಕೆರೆಯಿಂದ 15 ಕಿಮೀ ಗಿಂತ ಹೆಚ್ಚು ದೂರದಲ್ಲಿರುವ ಕೈಗಾರಿಕೆಗಳನ್ನೂ ಮುಚ್ಚುವಂತೆ ಪ್ರಾಧಿಕಾರ ಹೇಳಿರುವುದರ ಬಗ್ಗೆ ಕೈಗಾರಿಕಾ ಘಟಕದ ಮುಖ್ಯಸ್ಥರು ತಕರಾರು ಎತ್ತಿದ್ದವು. ಆದರೆ ಈ ಬಗ್ಗೆ ತನ್ನ ಪಟ್ಟನ್ನು ಬಿಡದ ಎನ್ ಜಿಟಿ ಯಾವುದೇ ಕಾರಣಕ್ಕೂ ತನ್ನ ಆದೇಶದಲ್ಲಿ ಬದಲಾವಣೆಯಾಗುವುದಿಲ್ಲ ಎಂದು ಗಂಭೀರವಾಗಿ ಹೇಳಿದೆ.
ಅಷ್ಟೇ ಅಲ್ಲದೆ, ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಕಾರಣವಾದ ಘಟಕಗಳ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿದ್ದ ಕರ್ನಾಟಕ ಸರ್ಕಾರಕ್ಕೂ ಎನ್ ಜಿಟಿ ಛೀಮಾರಿ ಹಾಕಿದೆ.












Click it and Unblock the Notifications