ವೃತ್ತಿಯ ಗೌರವ, ಘನತೆ ಮಣ್ಣುಪಾಲಾಗುತ್ತಿದೆ : ದೇವಿಪ್ರಸಾದ್ ಶೆಟ್ಟಿ

Recommended Video

      Karnataka Private Doctors Strike on KPME Bill :ಡಾ. ದೇವಿ ಪ್ರಸಾದ್ ಶೆಟ್ಟಿಯವರ ಪ್ರತಿಕ್ರಿಯೆ

      ಬೆಂಗಳೂರು, ನವೆಂಬರ್ 16: 'ಕೆಪಿಎಂಇ' ಕಾಯ್ದೆ ಜಾರಿಗೆ ಸರಕಾರ ಪಟ್ಟಿ ಹಿಡಿದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಖ್ಯಾತ ವೈದ್ಯ, ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ, "ಸರಕಾರ ಈ ರೀತಿ ಬೆದರಿಕೆ ಹಾಕುವುದರಿಂದ ವೈದ್ಯ ವೃತ್ತಿಗೆ ಬರುಲು ಯುವ ಜನಾಂಗ ಹಿಂದೇಟು ಹಾಕ್ತಾರೆ. ನಾವು ವೃತ್ತಿಯ ಗೌರವವನ್ನು ಕಾಪಾಡಬೇಕಾಗುತ್ತದೆ," ಎಂದು ಹೇಳಿದ್ದಾರೆ.

      In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್

      "ಸರಕಾರ ತಿದ್ದುಪಡಿ ತಂದು ಬಡವರಿಗೆ ಏನೋ ಸಹಾಯ ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ನಾವು ಈ ಉದ್ಯಮದಿಂದ ಬಂದವರು. ನಮಗೆ ಇದು ಹೇಗೆ ಕೆಲಸ ಮಾಡುತ್ತಿದೆ ಎಂದು ಗೊತ್ತಿದೆ. ಈ ಕಾರಣಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ," ಎಂದು ದೇವಿಪ್ರಸಾದ್ ಶೆಟ್ಟಿ 'ಒನ್ ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿದ್ದಾರೆ.

      The honor and dignity of the doctor profession is diminishing: Dr. Devi Prasad Shetty

      "ಇಲ್ಲಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ, ಲಾಭ ಕಡಿಮೆಯಾಗುತ್ತದೆ ಎಂಬ ಪ್ರಶ್ನೆ ಇಲ್ಲ. ವೃತ್ತಿಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಈ ಕಾರಣಕ್ಕೆ ವೈದ್ಯರೆಲ್ಲಾ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೀತಿ ಇಡೀ ದೇಶದಲ್ಲೇ ನಡೆದಿರುವ ಉದಾಹರಣೆ ಇಲ್ಲ," ಎಂದು ಅವರು ಹೇಳಿದ್ದಾರೆ.

      ನಮ್ಮನ್ನು ಕಳ್ಳರ ರೀತಿ ಚಿತ್ರಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಮೊದಲಿಗೇ ಹೇಳಿದಂತೆ ವೃತ್ತಿಯ ಗೌರವ, ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

      ರಾಜ್ಯದಾದ್ಯಂತ ತುರ್ತು ಸೇವೆಗಳನ್ನು ನೀಡುತ್ತಿದ್ದೇವೆ. ಜನತೆಗೆ ತೊಂದರೆಯಾಗದಂತೆ ನೋಡುತ್ತಿದ್ದೇವೆ. ಹೀಗಿದ್ದೂ ಜನರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ನಮಗೆ ಬೇಜಾರಿದೆ ಎಂದು ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+