ಬೆಂಗಳೂರು: ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು
ಬೆಂಗಳೂರು, ಡಿಸೆಂಬರ್ 23: ಬೆಂಗಳೂರಿನ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟದ ಮೇಲಿಂದ ಮಹಿಳೆ ಬಿದ್ದು ಸಾವಿಗೀಡಾಗಿರುವ ಘಟನೆ ಜರುಗಿದೆ.
ಸಾವಿಗೀಡಾಗಿರುವವರು ಚಿಕ್ಕತಾಯಮ್ಮ(42) ಎನ್ನಲಾಗಿದ್ದು, ವಾಜರಹಳ್ಳಿ ಶೋಭಾ ಪ್ಯಾರಡೈಸ್ ನ ಬಹುಮಹಡಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲ.[ಮೈಸೂರಿನಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ; ವೃದ್ಧೆ ಸಾವು, ಅರೋಪಿ ಸೆರೆ]

ತಲಘಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕತಾಮಯಮ್ಮ ಸಾವಿನ ಕಾರಣದ ತನಿಖೆಗೆ ಮುಂದಾಗಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿದರು ಚಿಕ್ಕತಾಯಮ್ಮ ಪರಿವಾರ ಶೋಕಸಾಗರದಲ್ಲಿ ಮುಳುಗಿದೆ.












Click it and Unblock the Notifications