ದೇವರ ಆಜ್ಞೆಯಂತೆ ನ್ಯಾಯಮೂರ್ತಿಗೆ ಚಾಕು ಇರಿದನಂತೆ ತೇಜ್‌ರಾಜ್‌

ಬೆಂಗಳೂರು, ಜುಲೈ 13: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿದಿದ್ದ ಆರೋಪಿ ತೇಜರಾಜ್ ಶರ್ಮಾಗೆ ಮಂಪರು ಪರೀಕ್ಷೆ ಮಾಡಲಾಗುತ್ತಿದ್ದು, ಅಲ್ಲಿಯೂ ಆತ ಕೊಲೆ ಪ್ರಯತ್ನಕ್ಕೆ ಚಿತ್ರ ವಿಚಿತ್ರ ಕಾರಣಗಳನ್ನು ನೀಡಿದ್ದಾನೆ.

ಆರೋಪಿ ತೇಜ್‌ರಾಜ್‌ನನ್ನು ಗುಜರಾತ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮಂಪರು ಪರೀಕ್ಷೆ ವೇಳೆ 'ಭಗವಂತ ಹೇಳಿದ್ದರಿಂದ ನಾನು ಕೊಲೆ ಮಾಡಲು ಯತ್ನಿಸಿದೆ' ಎಂದು ಹೇಳಿದ್ದಾನೆ.

'ಭ್ರಷ್ಟರನ್ನು ಕೊಲ್ಲುವಂತೆ ಶ್ರೀಕೃಷ್ಣ ನನಗೆ ಹೇಳಿದ್ದ ಹಾಗಾಗಿ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯನ್ನು ಕೊಲೆ ಮಾಡಲು ಮುಂದಾದೆ ಎಂದು ಹೇಳಿಕೆ ನೀಡಿದ್ದು' ತೇಜರಾಜ್‌ನ ಹೇಳಿಕೆ ವಿಧಿ ವಿಜ್ಞಾನ ಪರಿಣಿತರಿಗೆ ಮಂಪರು ತರಿಸಿದಂತಿದೆ!

Tejraj Sharma who stabbed lokayuktha judge he is under going narco test

ಸಾಕಷ್ಟು ಭಾರಿ ಭ್ರಷ್ಟ ಅಧಿಕಾರಿಗಳ ಬಗ್ಗೆ ವಿಶ್ವನಾಥ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದೆ ಆದರೆ ಅವರು ಏನೂ ಮಾಡಲಿಲ್ಲ, ನಾನು ಕೇಳಿದಾಗಲೆಲ್ಲಾ ನಗುತ್ತಲೇ ಉತ್ತರ ಹೇಳಿ ನನ್ನನ್ನು ಕಳುಹಿಸಿ ಬಿಡುತ್ತಿದ್ದರು ಆದ್ದರಿಂದ ದೇವರ ಆಜ್ಞೆಯಂತೆ ಭ್ರಷ್ಟಾಚಾರಿಯನ್ನು ಕೊಲ್ಲಲು ನಾನು ಹಾಗೆ ಮಾಡಿದೆ ಎಂದಿದ್ದಾನೆ ತೇಜ್‌ರಾಜ್ ಶರ್ಮಾ.

ಆರೋಪಿಯು ಮಾರ್ಚ್‌ 7 ರಂದು ಲೋಕಾಯುಕ್ತ ಕಚೇರಿಯಲ್ಲಿಯೇ ವಿಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿದಿದ್ದ. ಆ ನಂತರ ಆತನನ್ನು ವಶಪಡಿಸಿಕೊಳ್ಳಲಾಗಿತ್ತು. ತೇಜ್‌ರಾಜ್ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದ್ದು, ವಿಶ್ವನಾಥ ಶೆಟ್ಟಿ ಅವರು ಇನ್ನಷ್ಟು ತನಿಖೆಗೆ ಒತ್ತಾಯಿಸಿದ್ದರಿಂದ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+