ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್ ಕುಮಾರ್ ಪರ ಪತ್ನಿ ತೇಜಸ್ವಿನಿ ಪ್ರಚಾರ

|
Google Oneindia Kannada News

ಬೆಂಗಳೂರು, ಮಾ.13 : ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಗುರುವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಪರವಾಗಿ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮತಯಾಚಿಸಿದರು. ಅನಂತ್ ಕುಮಾರ್ ಇಂದು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ.

ಗುರುವಾರ ತೇಜಸ್ವಿನಿ ಅನಂತ್ ಕುಮಾರ್, ಡಿವಿಜಿ ರಸ್ತೆ, ಗಾಂಧಿ ಬಜಾರ್, ಬಸವನಗುಡಿ ಮತ್ತು ಎನ್ಆರ್ ಕಾಲೋನಿಯಲ್ಲಿ ಪಾದಯಾತ್ರೆ ಮೂಲಕ ಪತಿ ಅನಂತ್ ಕುಮಾರ್ ಪರವಾಗಿ ಮತಯಾಚನೆ ಮಾಡಿದರು. ಸ್ಥಳೀಯ ಬಿಬಿಎಂಪಿ ಸದಸ್ಯರಾದ ಸದಾಶಿವ, ನಾಗೇಂದ್ರ, ಇಂದ್ರ ಕುಮಾರ್ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ತೇಜಸ್ವಿನಿ ಅನಂತ್ ಕುಮಾರ್ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಚಿತ್ರಗಳಲ್ಲಿ ನೋಡಿ ತೇಜಸ್ವಿನಿ ಅನಂತ್ ಕುಮಾರ್ ಪ್ರಚಾರ (ಚಿತ್ರಕೃಪೆ : ಅನಂತ್ ಕುಮಾರ್ ಫೇಸ್ ಬುಕ್)

ಪ್ರಚಾರಕ್ಕಿಳಿದ ತೇಜಸ್ವಿನಿ

ಪ್ರಚಾರಕ್ಕಿಳಿದ ತೇಜಸ್ವಿನಿ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಪರವಾಗಿ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ. ಆ ಮೂಲಕ ಅಧಿಕೃತವಾಗಿ ಚುನಾವಣಾ ಕಣಕ್ಕೆ ಧಮುಕಿದ್ದಾರೆ.

ಪಾದಯಾತ್ರೆ ಮೂಲಕ ಮತ ಯಾಚನೆ

ಪಾದಯಾತ್ರೆ ಮೂಲಕ ಮತ ಯಾಚನೆ

ಗುರುವಾರ ತೇಜಸ್ವಿನಿ ಅನಂತ್ ಕುಮಾರ್, ಡಿವಿಜಿ ರಸ್ತೆ, ಗಾಂಧಿ ಬಜಾರ್, ಬಸವನಗುಡಿ ಮತ್ತು ಎನ್ಆರ್ ಕಾಲೋನಿಯಲ್ಲಿ ಪಾದಯಾತ್ರೆ ಮೂಲಕ ಪತಿ ಅನಂತ್ ಕುಮಾರ್ ಪರವಾಗಿ ಮತಯಾಚನೆ ಮಾಡಿದರು.

ಅನಂತ್ ಕುಮಾರ್ ಗೈರು

ಅನಂತ್ ಕುಮಾರ್ ಗೈರು

ಗುರುವಾರ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಅನಂತ್ ಕುಮಾರ್ ತೆರಳಿದ್ದ ಕಾರಣ ಅವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರಲಿಲ್ಲ.

ಬಿಬಿಎಂಪಿ ಸದಸ್ಯರ ಸಾಥ್

ಬಿಬಿಎಂಪಿ ಸದಸ್ಯರ ಸಾಥ್

ಸ್ಥಳೀಯ ಬಿಬಿಎಂಪಿ ಸದಸ್ಯರಾದ ಸದಾಶಿವ, ನಾಗೇಂದ್ರ, ಇಂದ್ರ ಕುಮಾರ್ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ತೇಜಸ್ವಿನಿ ಅನಂತ್ ಕುಮಾರ್ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಂಡು, ಮತಯಾಚನೆ ಮಾಡಿದರು.

ನಂದನ್ ನಿಲೇಕಣಿ, ಅನಂತ್ ಕುಮಾರ್ ಫೈಟ್

ನಂದನ್ ನಿಲೇಕಣಿ, ಅನಂತ್ ಕುಮಾರ್ ಫೈಟ್

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಧಾರ್ ಮುಖ್ಯಸ್ಥ ನಂದನ್ ನಿಲೇಕಣಿ. ಮೊದಲ ಬಾರಿ ಚುನಾವಣೆಗೆ ಎದುರಿಸುತ್ತಿರುವ ನಿಲೇಕಣಿ ಅವರು 5 ಬಾರಿಯ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರಿಗೆ ಪ್ರತಿಸ್ಪರ್ಧೆ ನೀಡುತ್ತಿದ್ದಾರೆ.

English summary
Tejaswini Ananth Kumar election campaign in DVG Road, Gandhi Bazaar, Basavanagudi and N.R.Colony area of Bangalore South constituency on March 13, Thursday along with Corp-orators Sadashiva, Nagendra, InderKumar and other volunteers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X