ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್
Recommended Video
ಬೆಂಗಳೂರು, ಆಗಸ್ಟ್ 19: ಹಿಂದಿ ಬ್ಯಾನರ್ ತೆರವುಗೊಳಿಸಿದ ಪ್ರಕರಣದಲ್ಲಿ ಕನ್ನಡಿಗರನ್ನು ರೌಡಿಗಳೆಂದು ಕರೆದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜೈನ ದೇವಸ್ಥಾನವೊಂದರಲ್ಲಿ ಹಾಕಿದ್ದ ಹಿಂದಿ ಬ್ಯಾನರ್ ತೆರವುಗೊಳಿಸಿದ್ದಕ್ಕೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಈ ಬ್ಯಾನರ್ ತೆರವುಗೊಳಿಸಿದವರು ಕೆಲವರು ರೌಡಿಗಳು ಎಂದೂ ಆರೋಪಿಸಿದ್ದರು. ಬೆಂಗಳೂರಿನಲ್ಲಿ ಉರ್ದು ಭಾಷೆಯಲ್ಲಿ ಬಳಕೆ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಹಿಂದಿ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು.
ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರ ಹಾವಳಿ ವಿರುದ್ಧ ಕಳೆದ ತಿಂಗಳು ಸ್ವತಃ ತೇಜಸ್ವಿ ಸೂರ್ಯ ಮಾತನಾಡಿದ್ದರು. ಆದರೆ, ಕನ್ನಡ ಆಡಳಿತ ಭಾಷೆಯಾಗಿರುವ ರಾಜ್ಯದಲ್ಲಿ ಕನ್ನಡದಲ್ಲಿ ವ್ಯವಹರಿಸಲು ಒಪ್ಪದ, ಕನ್ನಡ ಫಲಕಗಳನ್ನು ಹಾಕದ ಪರಭಾಷಿಕರ ವಿರುದ್ಧ ತಮ್ಮದೇ ರಾಜ್ಯದ ಭಾಷಾಭಿಮಾನಿಗಳ ವಿರುದ್ಧ ಅವರು ವಾಗ್ದಾಳಿ ನಡೆಸಿರುವುದು ಅನೇಕರಲ್ಲಿ ಕಿಡಿ ಹಚ್ಚಿಸಿದೆ.

ಕನ್ನಡ ಪ್ರೇಮಿಗಳಿಗೆ ಅಪಚಾರ- ತೇಜಸ್ವಿ
ಬೆಂಗಳೂರಿನ ಕೆಲವು ರೌಡಿಗಳು ದೇವಸ್ಥಾನವೊಂದರಲ್ಲಿ ಹಿಂದಿ ಬ್ಯಾನರ್ ವಿಚಾರದಲ್ಲಿ ನಮ್ಮ ಜೈನ ಸಹೋದರರ ಮೇಲೆ ದಾಳಿ ನಡೆಸಿರುವುದು ತೀವ್ರ ನೋವುಂಟುಮಾಡಿದೆ. ಆದರೆ, ಅವರು ಬೆಂಗಳೂರಿನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸುವುದಿಲ್ಲ. ಕರ್ನಾಟಕಕ್ಕೆ ಕಾಣಿಕೆ ಸಲ್ಲಿಸಿರುವ ಶಾಂತಿಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ಕನ್ನಡದ ನೈಜ ಪ್ರೇಮಿಗಳು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಹೇಳಿದ್ದಾರೆ.

ಯುವ ಜೈನರು ಸಂಸ್ಕೃತಿ ತಿಳಿದುಕೊಳ್ಳಬೇಕು
ಕನ್ನಡ ಸಾಹಿತ್ಯದ ಮೂವರು ರತ್ನಗಳು, ಮಹಾನ್ ಕವಿಗಳಾದ ಪಂಪ, ಪೊನ್ನ ಮತ್ತು ರನ್ನ ಅವರು ರತ್ನತ್ರಯರು ಎಂದೇ ಪ್ರಸಿದ್ಧರಾದವರು. ಕನ್ನಡ ಸಾಹಿತ್ಯದ ಆರಂಭವೇ ಜೈನಯುಗವಾಗಿತ್ತು. ಹೀಗಾಗಿ ರಾಜ್ಯದಲ್ಲಿರುವ ಯುವ ಜೈನರು ಈ ಇತಿಹಾಸವನ್ನು ತಿಳಿದುಕೊಳ್ಳಬೇಕು ಮತ್ತು ತಮ್ಮ ಸಂವಹನಗಳಲ್ಲಿ ಕನ್ನಡ ಬಳಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಕೇಳಿಕೊಂಡಿದ್ದಾರೆ.

ಅವರು ಮಾಡುತ್ತಿರುವುದು ವ್ಯಾಪಾರ, ಸಂಸ್ಕೃತಿಯನ್ನಲ್ಲ
ಮೊದಲು ಕರ್ನಾಟಕದಲ್ಲಿರುವ ಪರಭಾಷಿಕರಿಗೆ ಕನ್ನಡದಲ್ಲಿ ವ್ಯವಹರಿಸಲು ಹೇಳಿ. ಅವರು ಹರಿದಿರುವುದು ಹಿಂದಿಯಲ್ಲಿ ಹಾಕಿರುವ ಬ್ಯಾನರ್‌ಅನ್ನು ಮಾತ್ರ. ಜೈನರ ದೇವಾಲಯಕ್ಕೆ ಅಥವಾ ಅವರ ಧಾರ್ಮಿಕ ನಂಬಿಕೆಗೆ ಹಾನಿ ಮಾಡಿಲ್ಲ. ಕರ್ನಾಟಕದಲ್ಲಿ ಇರುವ ಅವರಿಗೆ ಕನ್ನಡದಲ್ಲಿ ಬ್ಯಾನರ್ ಹಾಕಲು ಏನು ಕಷ್ಟ. ಕನ್ನಡಿಗರು ತಮ್ಮ ನೆಲದಲ್ಲಿ ಬೇರೆ ಭಾಷಿಕರ ಭಾಷಾ ದೌರ್ಜನ್ಯವನ್ನು ಏಕೆ ಸಹಿಸಿಕೊಳ್ಳಬೇಕು. ಇಲ್ಲಿ ಹಿಂದಿ ಫಲಕಗಳನ್ನು ಬಳಸುತ್ತಿರುವವರು ಪಂಪ, ರನ್ನ ಅಥವಾ ಪೊನ್ನರಂತೆ ಕನ್ನಡಿಗರಾಗಿ ಕನ್ನಡಕ್ಕೆ ಕೊಡುಗೆ ನೀಡಿದವರಲ್ಲ. ತಮ್ಮ ವ್ಯಾಪಾರಕ್ಕಾಗಿ ಬೇರೆ ರಾಜ್ಯದಿಂದ ಇಲ್ಲಿಗೆ ವಲಸೆ ಬಂದು ವ್ಯವಹಾರ ನಡೆಸುತ್ತಿರುವವರು. ಅವರು ಇಲ್ಲಿ ನಡೆಸುತ್ತಿರುವುದು ವ್ಯಾಪಾರವನ್ನೇ ಹೊರತು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡುವ ಕೆಲಸವನ್ನಲ್ಲ ಎಂದು ತೇಜಸ್ವಿ ಸೂರ್ಯ ಹಾಗೂ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವವರ ವಿರುದ್ಧ ಟ್ವೀಟ್ ಮಾಡಲಾಗಿದೆ.

ಮೊದಲು ಕನ್ನಡಿಗರಿಗೆ ಗೌರವ ನೀಡಲಿ
ರಾಜ್ಯದಲ್ಲಿ ಬೇರೆ ಭಾಷೆಯಲ್ಲಿ ವ್ಯವಹರಿಸುವ ಮತ್ತು ಫಲಕಗಳನ್ನು ಹಾಕುವವರ ಮೇಲೆ ದೌರ್ಜನ್ಯ ಎಸಗಿ ಕನ್ನಡದಲ್ಲಿ ವ್ಯವಹರಿಸುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಕನ್ನಡಪರ ಧ್ವನಿ ಎತ್ತುವವರು, ನಮ್ಮ ರಾಜ್ಯದಲ್ಲಿ ವಾಸಿಸುತ್ತಿದ್ದರೂ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡುತ್ತಿಲ್ಲ. ಅದನ್ನು ಪ್ರಶ್ನಿಸಿದರೆ ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸಲು ಬರುತ್ತಾರೆ. ಹೀಗಾಗಿ ಬಲಪ್ರಯೋಗ ಅನಿವಾರ್ಯ ಎನ್ನುತ್ತಿದ್ದಾರೆ. ಅಲ್ಲದೆ, ಹಿಂದಿ ಹೇರಿಕೆಯನ್ನು ತಾವು ವಿರೋಧಿಸುತ್ತಿದ್ದರೆ, ತಮ್ಮನ್ನು ಗೂಂಡಾಗಳೆಂದು ಕರೆಯುವ ಮೂಲಕ ಬೇರೆ ಭಾಷಿಕರ ದಬ್ಬಾಳಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಸಿದ್ದಾರೆ.

ಇಂತಹ ಕಿಡಿಗೇಡಿಗಳನ್ನು ನಂಬಬೇಡಿ
ಕಿಡಿಗೇಡಿಗಳೆಲ್ಲಾ ಸಂಸದರಾದರೆ ಏನಾಗುತ್ತೆ ಎಂಬುದಕ್ಕೆ ತೇಜಸ್ವಿ ಸೂರ್ಯ ಸಾಕ್ಷಿ. ಯಾರೋ ಹಿಂದಿಯಲ್ಲಿ ಬೋರ್ಡು ಹಾಕಿಕೊಂಡಿದ್ದನ್ನು ಇನ್ಯಾರೋ ಹರಿದಂತೆ. ಈ ಮಹಾಶಯ ಇಂತಹ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ರೀತಿ ನೋಡಿ. ಇವರ ಟ್ವೀಟ್ ಎರಡು ಅರ್ಥಗಳನ್ನು ಹೊರಡಿಸುತ್ತದೆ. 1. ಜೈನರೆಲ್ಲಾ ಹಿಂದಿ ಭಾಷಿಕರು ಅಂತ, 2. ಕನ್ನಡಪರ ಹೋರಾಟಗಾರರು ಜೈನ ವಿರೋಧಿಗಳು ಅಂತ. ದಯವಿಟ್ಟು ಇಂತಹ ಕಿಡಿಗೇಡಿಗಳನ್ನು ನಂಬಬೇಡಿ. ಎಲ್ಲದಕ್ಕೂ ಧರ್ಮವನ್ನು ಎಳೆತಂದು ಬೆಂಕಿ ಹಚ್ಚುವುದು, ಗಲಭೆ ಹತ್ತಿಸುವುದು ಇವರುಗಳು ಲಾಗಾಯ್ತಿನಿಂದಲೂ ಮಾಡಿಕೊಂಡು ಬಂದಿರುವ ಚೇಷ್ಟೆಯೇ ಆಗಿದೆ. ಜೈನರೇ ಆಗಿರಲಿ ಇನ್ಯಾವುದೇ ಧರ್ಮದವರೇ ಆಗಿರಲಿ. ಕರ್ನಾಟಕದಲ್ಲಿ ಇದ್ದುಕೊಂಡು ವ್ಯಾಪಾರ/ವ್ಯವಹಾರ ಮಾಡುತ್ತಿದ್ದರೆ ಕನ್ನಡ ಕಲಿಯಲಿ, ಕನ್ನಡಿಗರಿಗೆ ಗೌರವ ಕೊಡಲಿ ಎಂದು ದರ್ಶನ್ ಜೈನ್ ಎಂಬುವವರು ತೇಜಸ್ವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
-
ಸಿನಿಮಾಗಳಲ್ಲಿ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕಿ: ಪ್ರೇಮ್ ವಿವಾದದ ಬೆನ್ನಲ್ಲೇ ಫಿಲ್ಮ್ ಚೇಂಬರ್ಗೆ ಮಹಿಳಾ ಆಯೋಗ ಪತ್ರ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications