Rain Alert: ಬೆಂಗಳೂರನ್ನು ಒಂದೇ ಮಳೆಯಲ್ಲಿ ಮುಳುಗಿಸಿದ ಕಾಂಗ್ರೆಸ್: ಬಿಜೆಪಿ ಸಂಸದ ಹೇಳಿದ್ದೇನು?
ಬೆಂಗಳೂರು, ಜೂನ್ 03: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಜೋರು ಮುಂಗಾರು ಮಳೆ ಸುರಿದಿದೆ. ಮಳೆಯಿಂದ ಉಂಟಾದ ಅವಾಂತರಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿವೆ. ಜನ ಜೀವನ ಅಸ್ತವೆಸ್ತವಾಗಿದ್ದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ಮೇಲೆ ಕೆಂಡ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ರಾಜ್ಯ ರಾಜಧಾನಿ ಬೆಂಗಳೂರು ಒಂದು ಬಾರಿಯ ಮಳೆಗೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳೇ ಪೂರ್ತಿ ಜಲಾವೃತವಾಗಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವು ಜಲಾವೃತವಾಗಿವೆ. ಮರಗಳು ಧರೆಗುರುಳಿವೆ. ಮರಗಳು ಕಾರುಗಳ ಮೇಲೆ ಬಿದ್ದು ಸಂಚಾಕ್ಕೆ ತೊಂದರೆ ಮಾಡಿದೆ.

ಮರಗಳು ಕಾರುಗಳ ಮೇಲೆ ಮಾತ್ರವಲ್ಲದೇ ಬೆಂಗಳೂರು ನಮ್ಮ ಮೆಟ್ರೋ ಹಳಿಯ ಮೇಲೆ ಅಡ್ಡಲಾಗಿ ಬಿದ್ದು ಸಂಚಾರಕ್ಕ ಅಡ್ಡಿಪಡಿಸಿದೆ ಎಂದು ಅವರು ಮಳೆ ಬಂದಾಗಿ ಬೆಂಗಳೂರಿನಲ್ಲಿ ಉಂಟಾದ ಸ್ಥಿತಿಗತಿ ಬಗ್ಗೆ ವಿವರಿಸಿದರು.
ಬೆಂಗಳೂರು ಕಾಂಗ್ರೆಸ್ ಕೈಯಲ್ಲಿ ನರಳುತ್ತಿದೆ
ಸಿಲಿಕಾನ್ ಬೆಂಗಳೂರು ಅಸಮರ್ಥ ಕಾಂಗ್ರೆಸ್ ಸರ್ಕಾರದ ಕೈಯಲ್ಲಿ ನರಳುತ್ತಿದೆ, ಇದು ಉಚಿತ ಮತ್ತು ರಾಜಕೀಯದ ಮೇಲೆ ಕೇಂದ್ರೀಕರಿಸುತ್ತದೆ, ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಅವರು ಕಿಡಿ ಕಾರಿದರು.
ಕಾಂಗ್ರೆಸ್ ಮಳೆ ಇಲ್ಲ ಕಾಲದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದೆ. ಹೀಗಿದ್ದರೂ, ನೀರು ಸಂಗ್ರಹಣೆ ಮತ್ತು ಮಳೆನೀರು ಚರಂಡಿ ನಿರ್ವಹಣೆಯನ್ನು ನಿಭಾಯಿಸಲು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.
ಬ್ರ್ಯಾಂಡ್ ಬೆಂಗಳೂರು ಬಗ್ಗೆ ಸಂಸದರ ಟೀಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಬ್ರ್ಯಾಂಡ್ ಬೆಂಗಳೂರು' ಅನ್ನು ಕೇವಲ ಉಚಿತ ಯೋಜನೆ, ಸುರಂಗ ರಸ್ತೆಗಳು, ಸ್ಕೈವಾಕ್‌ಗಳು ಅಥವಾ ಬುದ್ದಿಹೀನ ವೈಟ್‌ಟಾಪ್‌ಗಳ ಮೇಲೆ ನಿರ್ಮಿಸಲಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ಬೆಂಗಳೂರು ಬೇಸತ್ತಿದೆ. ನಾವು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂದು ನಗರದ ಸ್ಥಿತಿ ಗತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಳೆ ಸಮಯದಲ್ಲಿ ಸೂಕ್ತ ನಿರ್ವಹಣೆಗೆ ಅವರು ಆಗ್ರಹಿಸಿದ್ದಾರೆ.
ಮುಂಗಾರು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸಕ್ರಿಯವಾಗಿದೆ. ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ಬೆಳಗ್ಗೆವರೆಗೂ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ತೊಂದರೆ ಆಗಿದೆ. ನೂರಕ್ಕೂ ಹೆಚ್ಚು ಮರಗಳು ಬಿದ್ದಿವೆ. ನಗರಾದ್ಯಂತ ಪ್ರವಾಹದಂತಹ ಸಮಸ್ಯೆಗಳು ಉಂಟಾಗಿವೆ. ಇನ್ನೂ ಮೂರರಿಂದ ನಾಲ್ಕು ದಿನಗಳ ಕಾಲ ಮಳೆ ಆಗಲಿದೆ.
ಬಿಬಿಎಂಪಿ ಆಡಳಿತದ ಮೇಲೆ ಅನುಮಾನ
ಒಂದು ಮಳೆಗೆ ಹೀಗೆಲ್ಲ ಸಮಸ್ಯೆಗಳು ಆದರೆ ಇನ್ನೂ ಸುದೀರ್ಘ ನಾಲ್ಕು ತಿಂಗಳ ಕಾಲ ಮಳೆಗಾಲ ಎದುರಿಸಬೇಕಿದೆ. ಇದಕ್ಕೆ ಬಿಬಿಎಂಪಿ ಹೇಗೆ ಸಿದ್ಧವಾಗಿದೆ. ಮಳೆ ಪ್ರವಾಹ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆಯೋ ಇಲ್ಲ, ಬರೀ ಸಂಕಷ್ಟ ಎದುರಾದಾಗ ಪರಿಹಾರ ಕಾರ್ಯ ನಡೆಸಿ ಭರವಸೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆಯೋ ಎಂದು ನಗರವಾಸಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications