Bengaluru Tunnel Project: ಕೆಆರ್.ಪುರಂ-ನಾಯಂಡಹಳ್ಳಿ ರಸ್ತೆ ಯೋಜನೆಗೆ ಟೆಂಡರ್: ಸಂಸದ ವಿರೋಧ

ಬೆಂಗಳೂರು, ಜನವರಿ 27: ಬೆಂಗಳೂರಿನ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಸರ್ಕಾರ ಅನೇಕ ಯೋಜನೆ ಕೈಗೊಂಡಿದೆ. ಇದೀಗ ಹೊಸ ಸುರಂಗ ಮಾರ್ಗ ಯೋಜನೆಗೆ ಕೈ ಹಾಕಿದೆ. KR ಪುರಂ - ನಾಯಂಡಹಳ್ಳಿವರೆಗೆ ಬೃಹತ್ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ ಎಂದು ತಿಳಿದು ಬಂದಿದೆ. ಇದಕ್ಕು ಮೊದಲು ಹೆಬ್ಬಾಳ-ಸಿಲ್ಕ್‌ ಬೋರ್ಡ್ ಜಂಕ್ಷನ್‌ವರೆಗೆ ಸುರಂಗ ಕಾರ್ಯಕ್ಕೆ ಕೈ ಹಾಕಿತ್ತು. ಈ ಯೋಜನೆಗೆ ವ್ಯಾಪಕ ವಿರೋಧ ಕೇಳಿ ಬಂದವು. ಇದೀಗ ಮತ್ತೊಂದು ಸುರಂಗ ಯೋಜನೆಗೆ ಮುಂದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಕೆ.ಆರ್.ಪುರಂ ಮತ್ತು ನಾಯಂಡಹಳ್ಳಿವರೆಗೆ ಸುರಂಗ ರಸ್ತೆ ಮಾರ್ಗ ನಿರ್ಮಿಸಲು ಮುಂದಾಗಿದೆ ಎಂದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಖಂಡಿಸಿದ್ದಾರೆ. ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆಯ ಕಳಪೆ ಡಿಪಿಆರ್ ಮತ್ತು ಕಾರ್ಯಸಾಧ್ಯತಾ ವರದಿಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಹೀಗಿದ್ದರೂ ಸರ್ಕಾರ ವಿಚಲಿತವಾಗದೇ ಇದೀಗ ಕೆಆರ್ ಪುರ - ನಾಯಂಡಹಳ್ಳಿಗೆ ಡಿಪಿಆರ್ ತಯಾರಿಸಲು ಸಲಹೆಗಾರರಿಗೆ ಟೆಂಡರ್ ಕರೆದಿದೆ ಎಂದು ತಿಳಿಸಿದರು.

Tejasvi Surya Opposes New Tunnel Road Project of KR Puram to Nayandahalli Tender for DPR

ಜನರ ತೆರಿಗೆ ಹಣ ವ್ಯರ್ಥಕ್ಕೆ ಮತ್ತೊಂದು ಪ್ರಯತ್ನ: ಸಂಸದ

ನಗರದಲ್ಲಿ ಸುರಂಗ ರಸ್ತೆ ಯೋಜನೆಯು ಒಂದು ಕೆಟ್ಟ ನಿರ್ಧಾರ. ಇದು ವಿನ್ಯಾಸದಲ್ಲಿ ಸರಿಯಾಗಿಲ್ಲ. ಸರಿಯಾಗಿ ಯೋಚಿಸದೇ ಈ ನಿರ್ಧಾರಕ್ಕೆ ಬರಲಾಗಿದೆ. ಬೆಂಗಳೂರಿನ ಸಂಚಾರ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಈ ಯೋಜನೆಗೆ ಕೈ ಹಾಕಿದರೂ ಸಹಿತ ಈ ಕಾರ್ಯಸಾಧುವಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಮೊದಲ DPR, ವ್ಯರ್ಥ ವೆಚ್ಚಗಳಿಂದ ಹಿಡಿದು ಮೂಲಭೂತ ದೋಷಗಳು, ಯೋಜನೆಯಲ್ಲಿನ ತಪ್ಪುಗಳು ಹಾಗೂ ಇನ್ನಿತರ ಕಾರಣಗಳಿಂದ ಯೋಜನೆಯನ್ನು ಒಮ್ಮೆಗೇ ರದ್ದುಗೊಳಿಸುವ ಮಾತುಗಳು ಕೇಳಿ ಬಂದಿವೆ. ಯೋಜನೆಗಳಿಗೆ ಸಾಕಷ್ಟು ಹಣ ಖರ್ಚು ಮಾಡುವ ಸರ್ಕಾರ ಇಂತಹ ನಿರ್ಧಾರಗಳಿಗೆ ಹೇಗೆ ಬರುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಕೆಲವು ಯೋಜನೆಗಳಿಗೆ ಹಣ ಖರ್ಚು ಮಾಡಿ ನಂತರ ದಿಢೀರ್ ರದ್ದುಗೊಳಿಸಿದ್ದನ್ನು ನಾವು ನೋಡಿದ್ದೇವೆ.

Tejasvi Surya Opposes New Tunnel Road Project of KR Puram to Nayandahalli Tender for DPR

ಯೋಜನೆಗಳು ದಿಢೀರ್ ರದ್ದು: ಮೆಟ್ರೋ ಸುರಂಗ ಕಾರ್ಯದಲ್ಲಿ ವಿಫಲ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಫ್ಲೀಟ್ ಅನ್ನು 15,000 ಬಸ್‌ಗಳಿಗೆ ವಿಸ್ತರಣೆ ಮಾಡುವುದು. ನಗರದಲ್ಲಿ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಬೆಂಗಳೂರಿನ ಮಾಸ್ಟರ್ ಪ್ಲಾನ್ 2031ರ ಡಿಪಿಆರ್ ಅನ್ನು ಸರ್ಕಾರ ನಿರ್ಲಕ್ಷಿಸಿತ್ತು.

ಇಂತದ್ದೆ ತಪ್ಪುಗಳು, ನಿರ್ಲಕ್ಷ್ಯಗಳಿಂದಲೇ ನಮ್ಮ ಮೆಟ್ರೋ ಹಂತಗಳು 2ಬಿ ಮತ್ತು 3ಎ ಕಾಮಗಾರಿಯಲ್ಲಿ ನಿರ್ಣಾಯಕವಾಗಿರುವ ಸುರಂಗ ರಸ್ತೆ ಜೋಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಮೆಟ್ರೋ ಸುರಂಗ ಯೋಜನೆಗಳು 61 ತಿಂಗಳ ಗಡುವು ಮೀರಿವೆ. ಕಾಲಮಿತಿಯಲ್ಲಿ ನಿರ್ಮಾಣ ಆಗದ ಹಿನ್ನೆಲೆಯಲ್ಲಿ ಕಾಮಗಾರಿಗೆಂದು ಅಗೆದ ರಸ್ತೆಗಳು ಇಕ್ಕಟ್ಟಾಗಿವೆ. ಸುಗಮ ಸಂಚಾರಕ್ಕೆ ಸಾಕಷ್ಟು ಅಡಚಣೆಗಳು ಆಗುತ್ತಿದೆ ಎಂದು ಸರ್ಕಾರದ ಆಡಳಿತ ವೈಖರಿ ವಿವರಿಸಿದರು.

ಸುರಂಗ ಯೋಜನೆ: 1 ಕಾರಿಡಾರ್‌ಗೆ 15,000 ಕೋಟಿ ರೂ!

ಸುರಂಗ ರಸ್ತೆ ಯೋಜನೆ ಕೇವಲ 1 ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿಯ 15,000 ಕೋಟಿ ರೂಪಾಯಿ ತಗುಲಬಹುದೆಂದು ಅಂದಾಜು ಮಾಡಿದೆ. ಇದರಲ್ಲಿ ಶೇಕಡಾ 25ರಷ್ಟು ವಾಹನಗಳಿಗೆ ಮಾತ್ರವೇ ಆಗುವಂತೆ ಕಾರಿಡಾರ್ ನಿರ್ಮಿಸಲು ಸಜ್ಜಾಗಿದೆ. ಇಲ್ಲಿ ಸಂಚರಿಸುವ ನಾಲ್ಕು ಚಕ್ರದ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವ ಚಿಂತನೆ ಇದೆ.

ಯೋಜನೆಯಲ್ಲಿ ಇಂಟರ್‌ಮೋಡಲ್ ಹಬ್‌ಗಳಲ್ಲಿ ಶಾಪಿಂಗ್ ಮಾಲ್‌, ವ್ಯಾಪಾರಕ್ಕೆ ಅವಕಾಶ ನೀಡುವ ಪ್ರಸ್ತಾವನೆ ಇದೆ. ಹೀಗಾಗಿ ಇದು ಸಂಚಾರ ನಿರ್ವಹಣೆ ಜೊತೆಗೆ ರಿಯಲ್ ಎಸ್ಟೇಟ್ ಗೂ ಉತ್ತೇಜನ ನೀಡಲು ಆಸಕ್ತಿ ಹೊಂದಿದಂತೆ ಕಾಣುತ್ತಿದೆ.

ರಾಜ್ಯ ಸರ್ಕಾರ ಹೊಸ ಸುರಂಗ ರಸ್ತೆ ಯೋಜನೆ ಕಾರ್ಯ ತ್ವರಿತಗೊಳಿಸುತ್ತಿದೆ. ಹೆಬ್ಬಾಳ-ಸಿಲ್ಕ್ ಬೋರ್ಡ್ ಜಂಕ್ಷನ್ ಯೋಜನೆಗೆ ಎರಡನೇ ಡಿಪಿಆರ್‌ಗೆ ಟೆಂಡರ್ ಆಹ್ವಾನಿಸಿದೆ ಎಂದು ಅವರು ವಿವರಿಸಿದರು.

ನಗರದಲ್ಲಿ ಚಾಲ್ತಿಯಲ್ಲಿರುವ ನಮ್ಮ ಮೆಟ್ರೋ ಯೋಜನೆಗಳು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಸರ್ಕಾರದ ಉದ್ದೇಶಿತ ಈ ಸುರಂಗ ರಸ್ತೆಗಳು ವಾಹನ ಸಂಚಾರಕ್ಕೆ ಅಪಾಯ ತಂಡದೊಡ್ಡುವ ಸಾಧ್ಯತೆ ಇದೆ. ದೀರ್ಘಾವಧಿಯಲ್ಲಿ ದಟ್ಟಣೆ ಕಡಿಮೆ ಮಾಡುವುದು ಅನುಮಾನ. ಹೆಬ್ಬಾಳ ಸುರಂಗ ಯೋಜನೆ ಬಗ್ಗೆ IISc ಪ್ರೊಫೆಸರ್ ಆಶಿಶ್ ವರ್ಮಾ ಅವರ ವಿಶ್ಲೇಷಣಾ ವರದಿ ತಿಳಿಸಿದೆ ಎಂದರು.

ಸದ್ಯ ಸರ್ಕಾರ ಹೊಸ ಯೋಜನೆ ಬಗ್ಗೆ ಪ್ರತಿಷ್ಠಿತ IISc ಸಂಸ್ಥೆಗಳಂತಹ ಸಾರಿಗೆ ತಜ್ಞ ಅಧಿಕಾರಿಗಳು, ಇಂಜಿನಿಯರ್ ಜೊತೆಗೆ ಸಮಾಲೋಚಿಸದೇ, ಅಧಿಕಾರಿಗಳು ಇಲ್ಲದೇ ಯೋಜನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಇದು ಯೋಜನೆ ಮತ್ತಷ್ಟು ದುಲರ್ಬವಾಗಲು ಪ್ರಮುಖ ಕಾರಣವಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಬೆಂಗಳೂರಿಗೆ ಸುರಂಗ ರಸ್ತೆ ನಿರ್ಮಿಸುವ ಅವೈಜ್ಞಾನಿಕ ಪ್ರಯತ್ನ ನಿಲ್ಲಿಸಬೇಕು. ಬೆಂಗಳೂರು ಜನತೆಗೆ ಅಗತ್ಯವಾದ ಉಪಕ್ರಮಗಳಿಗೆ ಮಾತ್ರವೇ ಆದ್ಯತೆ ನೀಡಬೇಕು. ಇಂತಹ ಯೋಜನೆಗಳಿಂದ ಸರ್ಕಾರ ಹಿಂದದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+