Tunnel Project: ಲಾಲ್‌ಬಾಗ್‌ನಲ್ಲಿ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ: ಟನಲ್ ವಿರುದ್ಧ ಹೋರಾಟದ ಎಚ್ಚರಿಕೆ

ಬೆಂಗಳೂರು: ಸದುದ್ದೇಶದ ಕಾರಣಕ್ಕಾಗಿ ನಾವು ನಿಂತಾಗ ನಮ್ಮೊಂದಿಗೆ ನಾಗರಿಕರು ಕೈ ಜೋಡಿಸುತ್ತಾರೆ ಎಂಬುದಕ್ಕೆ ಇಂದಿನ ಪ್ರತಿಭಟನೆಯೇ ಸಾಕ್ಷಿ. ಲಾಲ್ ಬಾಗ್ ಪ್ರತಿಭಟನೆ ಆರಂಭ ಅಷ್ಟೇ. ರಾಜ್ಯ ಸರ್ಕಾರ ಟನಲ್ ರಸ್ತೆ ಯೋಜನೆ, ಉದ್ಯಾನ ಜಾಗ ಕಾನೂನು ವಾಪಾಸ್ ಪಡೆಯುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಬೆಂಗಳೂರು ಟನಲ್ ರಸ್ತೆ ಮತ್ತು ಉದ್ಯಾನದ ಶೇ.5ರಷ್ಟು ಜಾಗ ಬಳಕೆ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಭಾನುವಾರ ಪೂರ್ವ ನಿಗದಿಯಂತೆ ನಾಗರಿಕರ ಸಂಘದಿಂದ ಪ್ರತಿಭಟನೆ ನಡೆಯಿತು. ಅದರಲ್ಲಿ ಪಾಲ್ಗೊಂಡ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿಗಾಗಿ, ಲಾಲ್ ಬಾಗ್ ಉಳಿಸಲು ಸ್ವತಃ ಸಾವಿರಾರು ಜನರು ಇಂದು ಕೈ ಜೋಡಿಸಿದ್ದಾರೆ. ಈ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

Tejasvi Surya

ಇಂದಿನ ಪ್ರತಿಭನಾ ಮೆರವಣಿಗೆಯನ್ನು 91 ವರ್ಷದ ಯಲ್ಲಪ್ಪ ರೆಡ್ಡಿ ಅವರು ಮುನ್ನಡೆಸಿದರು. ವೃದ್ಧರಿಂದ ಹಿಡಿದು ಆರು ತಿಂಗಳ ಶಿಶುಗಳವರೆಗೆ 'ಬೆಂಗಳೂರು ಹಸಿರು ರಕ್ಷಣೆಗೆ' ಒಂದುಗೂಡಿತು. ಅಪಾರ ಸಂಖ್ಯೆಯ ಜನ ಒಂದಾಗಿದ್ದರು. ಬೆಂಗಳೂರು ಸುಂದರ ನಗರ, ಇದನ್ನು ಉಳಿಸಿ ಭವಿಷ್ಯಕ್ಕೆ ನೀಡಬೇಕಿದೆ.

ಪ್ರತಿ ಭಾನುವಾರ ಉದ್ಯಾನದಲ್ಲಿ ಪ್ರತಿಭಟನೆ

ರಾಜ್ಯ ಸರ್ಕಾರ ಇತ್ತೀಚೆಗೆ ಉದ್ಯಾನವನ ಶೇ. 5 ರಷ್ಟು ಜಾಗವನ್ನು ಖಾಸಗಿ ಚುವಟಿಕೆಗಳ ಬಳಕೆ ಕುರಿತು ಕಾನೂನು ತಿದ್ದುಪಡಿ ತಂದಿದೆ. ಈಗಾಗಲೇ ವಿನಾಶಕಾರಿ 17ಕಿಲೋ ಮೀಟರ್ ಸುರಂಗ ರಸ್ತೆ ಯೋಜನೆ ಆರಂಭಿಸಿದೆ. ಈ ಯೋಜನೆ ಹಾಗೂ ಕಾನೂನು ಕೈಬಿಡುವವರೆಗೆ ಪ್ರತಿ ವಾರ ಒಂದೊಂದು ಉದ್ಯಾನಗಳಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಂಸದರು ತಿಳಿಸಿದರು.

ಈ ವಾರ ಲಾಲ್‌ ಬಾಗ್‌ನಲ್ಲಿ ಪ್ರತಿಭಟನೆ ಆಗಿದೆ. ಉದ್ಯಾನಕ್ಕಾಗಿ, ಬೆಂಗಳೂರಿಗಾಗಿ ಆರಂಭವಾದ ಈ ಚಳವಳಿ ಇವತ್ತಿಗೆ ಮಾತ್ರವಷ್ಟೇ ಸೀಮಿತವಾಗಬಾರದು. ಮುಂದಿನ ಭಾನುವಾರ ನಿಮ್ಮನ್ನು ಭೇಟಿಯಾಗುತ್ತೇವೆ. ಮತ್ತೊಂದು ಉದ್ಯಾನದಲ್ಲಿ ಹೀಗೆ ಪ್ರತಿಭಟನೆ ಮುಂದುವರಿಸೋಣ ಎಂದು ಅವರು ಕರೆ ನೀಡಿದರು. ಇದಕ್ಕೆ ಜಯಘೋಷ, ಚಪ್ಪಾಳೆ ಮೂಲಕ ನಾಗರಿಕರು ಬೆಂಬಲ ನೀಡಿದರು.

ಸರ್ಕಾರದ ತಪ್ಪು ಸರಿಯಾಗಬೇಕು

ನಗರಕ್ಕೆ ಮಾರಕವಾದ ನಿರ್ಧಾರಗಳ ವಿರುದ್ಧ ನಾಗರಿಕರು ಒಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್, ಹಿಂದೂ, ಮುಸ್ಲಿಂ ಜಾತಿ, ಬೇಧ ಬಾವ ಬಿಟ್ಟು ಜನತೆಗೆ ಬೆಂಗಳೂರು ಉಳಿಸಲು ಇಲ್ಲಿಗೆ ಬಂದಿದ್ದಾರೆ. ಇದಿನ್ನು ಟ್ರೈಲರ್ ಅಷ್ಟೇ ರಾಜ್ಯ ಸರ್ಕಾರ ಸಮಸ್ಯೆ ಆಲಿಸುವವರೆಗೆ, ತನ್ನ ತಪ್ಪನ್ನು ಸರಿಪಡಿಸುವವರೆಗೆ ಮತ್ತು ಯೋಜನೆಗಳ ಕೆಲಸ ನಿಲ್ಲಿಸುವವರೆಗೆ ನಮ್ಮ ಹೋರಾಟ ಬೃಹತ್ ಜನಾಂದೋಲನವಾಗಿ ನಿರ್ಮಾಣಗೊಳ್ಳಲಿದೆ. ಬೆಂಗಳೂರಿನ ಉದ್ಯಾನವನಗಳು ಜನರಿಗೆ ಸೇರಿವೆ. ನಾವು ಅವುಗಳನ್ನು ರಕ್ಷಿಸುತ್ತೇವೆ ಎಂದು ಗುಡುಗಿದರು.

ಬಿಜೆಪಿ, ಕಾಂಗ್ರೆಸ್, ಹಿಂದೂ ಮುಸ್ಲಿಂ ಜಾತಿ ಬೇಧ ಬಾವ ಬಿಟ್ಟು ನಾಡಿನ ಜನತೆಗೆ ಬೆಂಗಳೂರು ಉಳಿಸಲು, ಲಾಲ್ ಬಾಗ್ ಉದ್ಯಾನ ಉಳಿಸಲು ಇಲ್ಲಿಗೆ ಬಂದಿದ್ದಾರೆ. ಮುಂದೆನು ನೀವು ಈ ರೀತಿ ಬರಬೇಕು. ಇವತ್ತು ಒಂದು ದಿನಕ್ಕೆ ಪ್ರತಿಭಟನೆ ಸಿಮೀತವಾಗಬಾರದು. ನಗರದ ಪ್ರತಿ ಉದ್ಯಾನದಲ್ಲೂ ಇದೇ ರೀತಿ ಪ್ರತಿಭಟನೆ ನಡೆಬೇಕು.

ಸರ್ಕಾರ ಟನಲ್ ರಸ್ತೆ ಕೈ ಬಿಡೋವರೆಗೆ, ಉದ್ಯಾನ ಶೇ.5ರಷ್ಟು ಬಿಲ್ ಕೈ ಬಿಡುವವರೆಗೂ ನಾವು ಹೋರಾಡೋಣ. ಇದಿನ್ನು ಟ್ರೈಲರ್, ಸಿನಿಮಾ ಬಾಕಿ ಇದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+