Technical Problem in Airport: ಟಿಕೆಟ್ ಬುಕ್ಕಿಂಗ್ ಆಗದೆ ವಿಮಾನ ಪ್ರಯಾಣಿಕರ ಪರದಾಟ: ಏನಾಯ್ತು?
ಬೆಂಗಳೂರು ಜುಲೈ 19: ಬೆಂಗಳೂರು ಸೇರಿದಂತೆ ದೆಹಲಿ, ಗೋವಾದಲ್ಲಿ ಟಿಕೆಟ್ ಬುಕ್ಕಿಂಗ್ ಆಗದೆ ವಿಮಾನ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ವಿಮಾನ ಹಾರಾಟಕ್ಕೆ ಕ್ಲೌಡ್ ಸರ್ವಿಸ್ ಅಡ್ಡಿಯಾಗಿದೆ. ಇದರಿಂದಾಗಿ ಏರ್‌ಪೋರ್ಟ್ನಲ್ಲಿ ವಿಮಾನಗಳು ಟೇಕ್ ಆಫ್ ಆಗುತ್ತಿಲ್ಲ. ಜನರಿಗೆ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್ ಬುಕ್ಕಿಂಗ್ ಕೂಡ ಕಷ್ಟವಾಗುತ್ತಿದೆ.
ಹೌದು... ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಟಿಕೆಟ್ ನೀಡಲು ಆಗದೆ ವಿಶ್ವದಾದ್ಯಂತ ಸಮಸ್ಯೆ ಉಂಟಾಗಿದೆ. ದೆಹಲಿಯ ಇಂದಿರಾ ಗಾಂಧಿ ಏರ್‌ಪೋರ್ಟ್, ಗೋವಾ, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಹೀಗೆ ನಾನಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತು ಕಾಯುವಂತ ಸ್ಥಿತಿ ಉಂಟಾಗಿದೆ.

ಬುಕ್ಕಿಂಗ್, ಚೆಕ್ಕಿಂಗ್ ಸೇರಿದಂತೆ ಎಲ್ಲವೂ ಸಮಸ್ಯೆಯಾಗಿದೆ. ಹೀಗಾಗಿ ಎಲ್ಲವೂ ಮ್ಯಾನ್ಯೂವಲ್ ಮಾಡಬೇಕಾಗಿದೆ. ಇದಕ್ಕಾಗಿ ಸಮಯ ತೆಗೆದುಕೊಳ್ಳುತ್ತಿದ್ದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆಯಿಂದ ಈ ಸಮಸ್ಯೆ ಎದುರಾಗಿದ್ದು ಪ್ರಯಾಣಿಕರು ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದಿವೆ.
ಮೈಕ್ರೋಸಾಫ್ಟ್ ಕಂಪನಿಯೂ ಪ್ರಯಾಣಿಕರಿಗೆ ಸಹಕರಿಸುವಂತೆ ಮನವಿ ಮಾಡಿದೆ. ಮೈಕ್ರೋಸಾಫ್ಟ್ 'ಕ್ಲೌಡ' ಸರ್ವಿಸ್ ಸಂಪೂರ್ಣವಾಗಿ ಡೌನ್ ಆಗಿದೆ. ಇದು ಜಗತ್ತಿನ ದೈತ್ಯ ಕಂಪನಿಯಾಗಿದ್ದು, ಪೇರು ಮಾರುಕಟ್ಟೆ, ಬ್ಯಾಕಿಂಗ್ ಸೆಕ್ಟರ್ ಮೇಲೂ ಇದು ಪರಿಣಾಮ ಬೀರಿದೆ.

ಇದರಿಂದಾಗಿ ಬೆಂಗಳೂರು ಮಾತ್ರವಲ್ಲದೆ ವಿಶ್ವದ ವಿಮಾನ ಬಹುತೇಕ ನಿಲ್ದಾಣಗಳಲ್ಲಿ ಸಮಸ್ಯೆ ಉಂಟಾಗಿದೆ. ವಿಮಾನಗಳ ಹಾರಾಟ ತಡವಾಗಿದ್ದು, ಪ್ರಯಾಣಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುತ್ತಿದೆ. ಇದಕ್ಕೆ ಪ್ರಯಾಣಿಕರು ಹಾಗೂ ವಿಮಾನಯಾನ ಸಂಸ್ಥೆಗಳು ಸಹಕರಿಸಬೇಕು ಎಂದು ಮೈಕ್ರೋಸಾಫ್ಟ್ ಕಂಪನಿ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದೆ.












Click it and Unblock the Notifications