ಬೆಂಗಳೂರು-ದುಬೈ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶದಿಂದ ತಪ್ಪಿತು ಸಂಭವನೀಯ ಅನಾಹುತ, ಮಾಹಿತಿ
ಬೆಂಗಳೂರು, ಏಪ್ರಿಲ್ 03: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ವಿಮಾನವೊಂದು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಒಟ್ಟು ಸುಮಾರು 200 ಪ್ರಯಾಣಿಕರನ್ನು ಹೊತ್ತು ದುಬೈ ದೇಶ ತಲುಪಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಕುರಿತು ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಪೈಲಟ್‌ನ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ. ಅದರಲ್ಲಿದ್ದ ಅಷ್ಟೂ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ 'ಎತಿಹಾದ್ ಏರ್‌ಲೈನ್ಸ್' ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಭಾನುವಾರ ಏಪ್ರಿಲ್ 2ರಂದು ರಾತ್ರಿ 9.7ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ 'ಎತಿಹಾದ್ ಏರ್‌ಲೈನ್ಸ್' EY 237 ಸಂಖ್ಯೆಯ ವಿಮಾನ ದುಬೈಗೆ ಪ್ರಯಾಣ ಆರಂಭಿಸಿತು.
ಪ್ರಯಾಣ ಆರಂಭವಾಗಿ ಟೇಕ್ ಆಫ್ ಆದ ಕೇವಲ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿದೆ. ಹೀಗಾಗಿ ವಿಮಾನ ನಿಲ್ದಾಣದ ಸಮೀಪವೇ ಇದ್ದ ನಂದಿ ಬೆಟ್ಟದ ಸುತ್ತಲೂ ಒಂದು ಸುತ್ತು ಹಾಕಿದ ವಿಮಾನವು ಮರಳಿ ಬೆಂಗಳೂರು ಏರ್‌ಪೋರ್ಟ್ ರನ್‌ವೇ ಮೂಲಕ ತುರ್ತು ಲ್ಯಾಂಡ್ ಆಗಿದೆ.
200 ಪ್ರಯಾಣಿಕರಲ್ಲಿ ಆತಂಕ
ಬಿಟ್ಟ ಸ್ಥಳಕ್ಕೆ ಮರಳಿ ಬಂದ ವಿಮಾನದಲ್ಲಿದ್ದ ಸುಮಾರು ಮತ್ತು ಅಬುದಾಬಿಗೆ ತೆರಳಬೇಕಿದ್ದ ಸುಮಾರು 200 ಪ್ರಯಾಣಿಕರು ಭಯಭೀತರಾಗಿದ್ದರು. ಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಎಂದಾಕ್ಷಣ ಎಲ್ಲ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೇ ತುರ್ತು ಭೂಸ್ಪರ್ಶ ವಾದ ಬಳಿಕ ಪ್ರಯಾಣಿಕರು ನಿಟ್ಟುಸಿರುವ ಬಿಟ್ಟರು ಎನ್ನಲಾಗಿದೆ.

ತಾಂತ್ರಿಕ ದೋಷ ಸಂಬಂಧ ನಾಗರಿಕ ವಿಮಾನಯಾನ ಸಂಸ್ಥೆ ಸೇರಿದಂತೆ ತಾಂತ್ರಿಕ ವಿಭಾಗದವರಿಗೆ ಸುದ್ದಿ ತಿಳಿದಿದೆ. ಅವರು ಸಹ ಪ್ರಯಾಣಿಕರಿಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ. ನಂತರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಆಗಿದ್ದ ತಾಂತ್ರಿಕ ದೋಷ ಸರಿಪಡಿಸಿಕೊಂಡು ಸುಮಾರು ನಾಲ್ಕು ಗಂಟೆಯ ಬಳಿಕ ಮತ್ತೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಬುದಾಬಿಗೆ ವಿಮಾನವು ಪ್ರಯಾಣ ಬೆಳೆಸಿತು.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಹುಮಾದರಿ ಸಾರಿಗೆ ಸೌಲಭ್ಯ
ವಾರ್ಷಿಕವಾಗಿ ಲಕ್ಷಾಂತರ ಪ್ರಯಾಣಿಕರಿಗೆ ವಿಮಾನಯಾನ ಸೇವೆ ನೀಡುತ್ತಾ ಬಂದಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಭಾರತದಲ್ಲೇ ಬಹುಮಾದರಿಯ ಸಾರಿಗೆ ಸೌಲಭ್ಯ ಹೊಂದಿರುವ ಏಕೈಕ ನಿಲ್ದಾಣವಾಗಿ ಹೊರ ಹೊಮ್ಮಲಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.
ಸದ್ಯ ವಿಮಾನ ನಿಲ್ದಾಣದಲ್ಲಿ ಬಹುಮಾದರಿ ಸಾರಿಗೆ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಆದಷ್ಟು ಶೀಘ್ರವೇ ಅದರ ಕಾಮಗಾರಿ ಪೂರ್ಣಗೊಳ್ಳಲಿದೆ. ಇದೆಲ್ಲವು ಪೂರ್ಣಗೊಂಡ ಬಳಿಕವೇ ಝ್ಯೂರಿಚ್ ಮತ್ತು ಹೀಥ್ರೂ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಭಾರತದ ಏಕೈಕ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
ಬಹುಮಾದರಿ ಸಾರಿಗೆ ಕೇಂದ್ರದ ವ್ಯಾಪ್ತಿಯಲ್ಲಿ ಎರಡು ಮೆಟ್ರೋ ನಿಲ್ದಾಣ, ವಿವಿಧ ನಗರಗಳಿಂದ ಬರುವ ಕೆಎಸ್ಆರ್‌ಟಿಸಿ ಬಸ್ ಹತ್ತಲು ಇಳಿಯಲು ಸೂಕ್ತ ವ್ಯವಸ್ಥೆ, ಮೆಟ್ರೋ ನಿಲ್ದಾಣದಿಂದ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಬರಲು ಪಾದಾಚಾರಿ ವ್ಯವಸ್ಥೆ ಮಾಡಲಾಗುತ್ತಿದೆ. ಖಾಸಗಿ ಮತ್ತು ಸರ್ಕಾರಿ ವಾಹನಗಳು ಸೇರಿದಂತೆ ಕಾರು, ಟ್ಯಾಕ್ಸಿಗಳಿಗೆ ಪಾರ್ಕಿಂಗ್ ಸೌಲಭ್ಯ ಇಲ್ಲಿ ಸಿಗಲಿದೆ.












Click it and Unblock the Notifications