• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು

|
   ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು | Oneindia Kannada

   ಬೆಂಗಳೂರು, ಸೆ.27: ನಮ್ಮ ಮೆಟ್ರೋದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೂ ಬರುವ ಮುನ್ನ ಮಾರ್ಗ ಮಧ್ಯೆ ಪ್ರಯಾಣಿಕರನ್ನು ಇಳಿಸಲಾಯಿತು, ಇದು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

   ಮೆಟ್ರೋದಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ಮೂವರ ಬಂಧನ

   ಮೆಟ್ರೋ ಆರ್ ವಿ ರಸ್ತೆಯಿಂದ ನ್ಯಾಷನಲ್ ಕಾಲೇಜು ಮಾರ್ಗವಾಗಿ ತೆರಳುವ ವೇಳೆ ಏಕಾಏಕಿಯಾಗಿ ತಾಂತ್ರಿಕ ದೋಷ ಕಾಣಿಸಿಕೊಂಡು ಮೆಟ್ರೋ ಸ್ಥಗಿತಗೊಂಡಿದೆ, ಇದಕ್ಕೆ ಪ್ರಯಾಣಿಕರು ಗಾಬರಿಪಡುವಂತಾಯಿತು.

   ಬೆಕ್ಕು ಅಡ್ಡ ಬಂತು, ಮೆಟ್ರೋ ರೈಲೇ ನಿಂತು ಬಿಡ್ತು: ಶಕುನ ಭೀತಿನಾ?

   ವಿದ್ಯುತ್ ಸ್ಥಗಿತಗೊಳಿಸಿ ನಂತರ ಪ್ರಯಾಣಿಕರನ್ನು ರೈಲಿನಿಂದ ಇಳಿಸಿ, ಹಳಿಯ ಮೂಲಕ ನಡೆದುಕೊಂಡು ನ್ಯಾಷನಲ್ ಕಾಲೇಜು ತಲುಪಬೇಕಾಯಿತು ಬಳಿಕ ನಿಧಾನವಾಗಿ ಮೆಟ್ರೋ ನ್ಯಾಷನಲ್ ಕಾಲೇಜು ನಿಲ್ದಾಣವನ್ನು ತಲುಪಿತು.

   ಹಾಗಾಗಿ ನಾಗಸಂಧ್ರದಿಂದ ಯಲಚೇನಹಳ್ಳಿ ಹಾಗೂ ಯಲಚೇನಹಳ್ಳಿಯಿಂದ ನಾಗಸಂಧ್ರ ಕಡೆಗೆ ಹೋಗುವ ಮೆಟ್ರೋ ಸಂಚಾರ ಕೆಲಕಾಲಗಳ ಕಾಲ ಸ್ಥಗಿತಗೊಳಿಸಲಾಯಿತು. ಇದೇನು ಮೊದಲ ಬಾರಿಯಲ್ಲ ಈಗೀಗ ತಿಂಗಳಲ್ಲಿ ಒಂದೆರೆಡು ಬಾರಿಯಾದರೂ ಇಂತಹ ಘಟನೆಗಳು ನಡೆಯುತ್ತಿವೆ, ಆದರೆ ವಿದ್ಯುತ್ ನಿಂದ ಸಂಚರಿಸುವುದರಿಂದ ತಾಂತ್ರಿಕ ದೋಷ ಸಾಮಾನ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ಸಂಚಾರ ಪುನಃ ಆರಂಭಗೊಂಡಿದೆ.

   English summary
   Metro train was stalled at National college station more than 20 minutes due to technical error on Thursday morning.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X