Bengaluru House Rent: 2ಬಿಎಚ್‌ಕೆ ಮನೆಗೆ ₹70,000 ಬಾಡಿಗೆ ಕೇಳಿ ಬೆಚ್ಚಿಬಿದ್ದ ಟೆಕ್ಕಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ದಿನೇ ದಿನೆ ಗಗನಕ್ಕೇರುತ್ತಿವೆ. ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಕೈತುಂಬಾ ಸಂಬಳ ಪಡೆಯುವ ಐಟಿ ಉದ್ಯೋಗಿಗಳಿಗೂ ಸಹ ಇಲ್ಲಿ ಕೈಗೆಟುಕುವ ದರದಲ್ಲಿ ಮನೆ ಸಿಗುವುದು ಸವಾಲಿನ ಕೆಲಸವಾಗಿದೆ. ಇತ್ತೀಚೆಗೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರಿನ ಬಾಡಿಗೆ ದರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ರಾಜ್ವಿ ಎಂಬ 24 ವರ್ಷದ ಯುವ ಟೆಕ್ಕಿ, ಪೂರ್ವ ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಆಗಿರುವ ಕಾಡುಬೀಸನಹಳ್ಳಿಯಲ್ಲಿ (Kadubeesanahalli) ಮನೆ ಹುಡುಕುತ್ತಿದ್ದರು. ಈ ವೇಳೆ 'ಸೆಮಿ-ಫರ್ನಿಷ್ಡ್' 2BHK ಫ್ಲಾಟ್‌ ಒಂದಕ್ಕೆ ಮಾಲೀಕರು ಬರೋಬ್ಬರಿ 70,000 ರೂಪಾಯಿ ಬಾಡಿಗೆ ಹೇಳಿದ್ದಾರೆ. ಇದನ್ನು ಕೇಳಿ ಶಾಕ್ ಆದ ರಾಜ್ವಿ, "ಬೆಂಗಳೂರಿನ ಬಾಡಿಗೆ ದರಗಳು ಹುಚ್ಚು ಹಿಡಿಸುವಂತಿದೆ, ಮುಂಬೈಗಿಂತಲೂ ಭೀಕರ ಸ್ಪರ್ಧೆ ಇಲ್ಲಿದೆ. 2BHKಗೆ 70 ಸಾವಿರ ಬಾಡಿಗೆ ಅಂದ್ರೆ ಏನರ್ಥ?" ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Techie Shocked by 70k Rent for Semi-Furnished 2BHK in Bengaluru

ಈ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗಿದ್ದು, ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ನೈಜ ಸ್ಥಿತಿಯ ಬಗ್ಗೆ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ. ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಪೂರ್ವ ಬೆಂಗಳೂರನ್ನು ಹೊರತುಪಡಿಸಿ ಉಳಿದ ಕಡೆ ಇಷ್ಟೊಂದು ದುಬಾರಿ ಬಾಡಿಗೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ನಗರದ ಇತರೆಡೆ 2BHK ಬಾಡಿಗೆ 25 ರಿಂದ 30 ಸಾವಿರದ ಆಸುಪಾಸಿನಲ್ಲಿದೆ," ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಈ ವಿಚಾರವನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. "70 ಸಾವಿರ ಬಾಡಿಗೆ ಅಂದ್ರೆ, ಅಲ್ಲಿ ಫರ್ನಿಚರ್ ಜೊತೆಗೆ 'ಮಾನಸಿಕ ಆಘಾತ'ವನ್ನೂ (Trauma) ಸೇರಿಸಿ ಕೊಡ್ತಾರಾ?" ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, "ಇದು ಕೇವಲ 70 ಸಾವಿರ ಬಾಡಿಗೆಯಲ್ಲ, 11 ತಿಂಗಳ ಭಾರಿ ಅಡ್ವಾನ್ಸ್ ಕೂಡ ಇರುತ್ತೆ. ಇಷ್ಟೆಲ್ಲಾ ದುಡ್ಡು ಕೊಟ್ಟು ಸೊಸೈಟಿ ಅಂಕಲ್‌ಗಳ ಬುದ್ಧಿಮಾತು ಬೇರೆ ಕೇಳಬೇಕು," ಎಂದು ಕಿಡಿಕಾರಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ, ಅದರಲ್ಲೂ 2024ರ ನಂತರ ಬೆಂಗಳೂರಿನಲ್ಲಿ ಬಾಡಿಗೆ ದರ ತೀವ್ರಗತಿಯಲ್ಲಿ ಏರಿಕೆಯಾಗಿದೆ. "ಕೇವಲ 'ಪ್ರೀಮಿಯಂ' ಎಂಬ ಹಣೆಪಟ್ಟಿ ಕಟ್ಟಿ ಸುಧಾರಿತ ಸೌಲಭ್ಯಗಳಿಲ್ಲದ ಜಾಗಕ್ಕೂ ಇಷ್ಟೊಂದು ಹಣ ಕೇಳುವುದು ದುರಾಸೆಯ ಪರಮಾವಧಿ. ಇದು ಸಿಲಿಕಾನ್ ವ್ಯಾಲಿ ನಿಜ, ಆದರೆ ಎಲ್ಲರಿಗೂ ಸಿಲಿಕಾನ್ ವ್ಯಾಲಿ ಮಟ್ಟದ ಸಂಬಳ ಸಿಗುವುದಿಲ್ಲ ಎಂಬುದನ್ನು ಮಾಲೀಕರು ಮರೆತಿದ್ದಾರೆ," ಎಂದು ಮತ್ತೊಬ್ಬ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಟ್ರಾಫಿಕ್ ಕಿರಿಕಿರಿಯ ನಡುವೆಯೂ ದುಬಾರಿ ಬಾಡಿಗೆ ತೆತ್ತು ಬದುಕುವುದು ಬೆಂಗಳೂರಿಗರಿಗೆ ಅನಿವಾರ್ಯವಾಗಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+