ಸಮಯ, ಶಕ್ತಿ & ನೆಮ್ಮದಿ ಬೆಂಗಳೂರಿಗೆ ಕೊಟ್ಟೆ, ಈಗ ಬಿಡುವ ಸಮಯ ಎಂದ ವ್ಯಕ್ತಿ: ಕನ್ನಡಿಗರು ಹೇಳಿದ್ದೇನು ?
ಸಮಯ, ಶಕ್ತಿ ಹಾಗೂ ನೆಮ್ಮದಿಗಾಗಿ ನಾನು ಬೆಂಗಳೂರನ್ನು ಬಿಡುತ್ತಿದ್ದೇನೆ. ಕಳೆದ ಹಲವು ದಿನಗಳಿಂದ ಬೆಂಗಳೂರಿನ ಸಮಸ್ಯೆಯನ್ನು ಪರಿಹರಿಸಲು ನಾನು ಶ್ರಮಿಸಿದೆ ಎಂದು ನಾರ್ಥಿಯೊಬ್ಬರು ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಬೆಂಗಳೂರಿಗರು ಹಾಗೂ ಕನ್ನಡಿಗರು ಹೋಗಿ ಬನ್ನಿ ನಿಮ್ಮ ಬಿಹಾರಕ್ಕೆ ನಿಮ್ಮ ಸೇವೆ ತುಂಬಾ ಅಗತ್ಯವಿದೆ ಅಂತ ಹೇಳಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಕನ್ನಡಿಗರು ಈ ರೀತಿಯ ಮನಸ್ಥಿತಿ ಇರುವವರು ಬೆಂಗಳೂರು ಬಿಟ್ಟು ಹೋಗುವುದೇ ಉತ್ತಮ ಎಂದು ಅಭಿಪ್ರಾಯಪಡುತ್ತಿದ್ದಾರೆ. ಇಷ್ಟಕ್ಕೂ ಆ ವ್ಯಕ್ತಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಏನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿಗೆ ಬಂದು ಎಲ್ಲವನ್ನೂ ಪಡೆದುಕೊಂಡ ಮೇಲೆಯೂ ಕೆಲವು ನಾರ್ಥಿಗಳ ಪೋಸ್ಟ್‌ಗಳು ಕನ್ನಡಿಗರನ್ನು ಪದೇ ಪದೇ ಕೆಣಕುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಇಂದು ಬೆಂಗಳೂರಿನ ಬಗ್ಗೆ ವ್ಯಕ್ತಿಯೊಬ್ಬರು ಮಾಡಿರುವ ಪೋಸ್ಟ್. ನಾನು ಬೆಂಗಳೂರಿನ ಉದ್ಧಾರಕ್ಕಾಗಿ ಸಾಕಷ್ಟು ಪ್ರಯತ್ನಪಟ್ಟೆ ಆದರೆ ಯಾವುದೂ ಆಗಲಿಲ್ಲ ಎಂದು ವ್ಯಕ್ತಿ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಯಾವುದಾದರೂ ನಗರವನ್ನು ನೀವು ಉದ್ಧಾರ ಮಾಡುವುದಾದರೆ ನೀವು ನಿಮ್ಮ ಊರುಗಳನ್ನೇ ಯಾಕೆ ಉದ್ಧಾರ ಮಾಡಿಕೊಳ್ಳಲಿಲ್ಲ. ಬೆಂಗಳೂರೇ ಯಾಕೆ ಬೇಕಾಗಿತ್ತು ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.

Citizens Movement, East Bengaluru ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಒಂದು ಪೋಸ್ಟ್ ಹಂಚಿಕೊಳ್ಳಲಾಗಿದ್ದು. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ಶುರುವಾಗಿದೆ. Time to hang my boots ನನ್ನ ಶೂಗಳನ್ನು ಬಿಡುವ ಅಥವಾ ನನ್ನ ಪಾದರಕ್ಷೆಗಳನ್ನು ಬಿಡುವ ಸಮಯ ಎನ್ನುವ ಸಾಲಿನೊಂದಿಗೆ ಈ ಬರಹ ಶುರುವಾಗಿದೆ.
2021ನೇ ಸಾಲಿನಲ್ಲಿ ನಾನೂ ಬೆಂಗಳೂರಿನ ಪೂರ್ವ ವಲಯದಲ್ಲಿ ಸಂಚರಿಸುವಾಗ ಟ್ರ್ಯಾಕ್ಟರ್‌ವೊಂದು ಗುದ್ದಿತ್ತು. ಆಗ ನಾನು ಆ ಟ್ರ್ಯಾಕ್ಟರ್ ಡ್ರೈವರ್‌ನೊಂದಿಗೆ ಜಗಳವಾಡಿದ್ದೆ. ಆದರೆ ನಾನು ತಪ್ಪಾದ ವ್ಯಕ್ತಿಯೊಂದಿಗೆ ಜಗಳವಾಡಿದ್ದೇನೆ ಎನ್ನುವುದು ಬಹಳ ತಡವಾಗಿ ಅರ್ಥವಾಯಿತು. ಬೆಂಗಳೂರಿನ ರಸ್ತೆಗುಂಡಿಯೇ ಇದಕ್ಕೆ ಕಾರಣ ನಾನು ಇದಕ್ಕಾಗಿ ತುಂಬಾ ಹೋರಾಡಿದೆ. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗಿಲ್ಲ ಅಂತ ಆ ವ್ಯಕ್ತಿ ಬರೆದುಕೊಂಡಿದ್ದಾರೆ.
ನಿಜವಾದ ಖಳನಾಯಕ ಚಾಲಕನಲ್ಲ, ಬದಲಾಗಿ ವ್ಯವಸ್ಥೆ. ವರ್ಷಗಳ ನಿರಾಸಕ್ತಿ, ಮುರಿದ ಮೂಲಸೌಕರ್ಯ ಮತ್ತು ಸಂಪೂರ್ಣ ನಿರ್ಲಕ್ಷ್ಯವೇ ನಿಜವಾದ ಕಾರಣ.
ಆ ಕ್ಷಣ ನನ್ನಲ್ಲಿ ಏನೋ ಬದಲಾವಣೆ ತಂದಿತು. ನಾನು ಕೆಲವು ಸಮಾನ ಮನಸ್ಕ ವ್ಯಕ್ತಿಗಳನ್ನು ಸಂಪರ್ಕಿಸಿದೆ, ಮತ್ತು ನಾವು ಒಟ್ಟಾಗಿ ಪೂರ್ವ ಬೆಂಗಳೂರು ಎಂಬ ನಾಗರಿಕ ಚಳವಳಿಯನ್ನು ಪ್ರಾರಂಭಿಸಿದೆವು. ಜನ ಉತ್ಸಾಹದಿಂದ ಸೇರಿದರು. ಆದರೆ ಹೋರಾಟ ಮುಂದುವರಿಯುತ್ತಿದ್ದಂತೆಯೇ ನಮ್ಮಲ್ಲಿ ಬೆರಳೆಣಿಕೆಯಷ್ಟು ಜನರು ಉಳಿದುಕೊಂಡರು, ನಮ್ಮ ಧ್ವನಿಯನ್ನು ಎತ್ತಿದರು, ಅಧಿಕಾರಿಗಳಿಗೆ ಟ್ಯಾಗ್ ಮಾಡಿದರು, ಪತ್ರಗಳನ್ನು ಬರೆದರು ಮತ್ತು ಬಂದರು. ಮುಖ್ಯಮಂತ್ರಿ ಕಚೇರಿ, ಶಾಸಕರು,
@blrcitytraffic ಮತ್ತು @blrcitypolice ಸಲ್ಲಿಸಿದ ದೂರುಗಳಿಗೆ ಸ್ಪಂದನೆಯೂ ಸಿಕ್ಕಿತು. ಆದರೆ ಎಲ್ಲವೂ ಬದಲಾಗಲಿಲ್ಲ. ರಸ್ತೆಗಳಲ್ಲಿ ಗುಂಡಿಗಳು, ಅತಿಕ್ರಮಣ ಹಾಗೂ ರಾಜಕಾಲುವೆ ಸಮಸ್ಯೆಗಳು ಜೀವಂತವಾಗಿವೆ ಎಂದು ಬರೆದುಕೊಂಡಿದ್ದು ಬೆಂಗಳೂರಿಗಾಗಿ ಏನೆಲ್ಲಾ ಮಾಡಿದೆ ಅಂತಲೂ ಬರೆದುಕೊಂಡಿದ್ದಾರೆ.
ನನ್ನ ಜೀವಕ್ಕೆ ಅಕ್ಷರಶಃ ಅಪಾಯವಿದೆ, ನಾನು ಕೆಲವೊಮ್ಮೆ ನನ್ನನ್ನು ಕೇಳಿಕೊಳ್ಳುತ್ತಿದ್ದೇನೆ: ಇದೆಲ್ಲವೂ ಯಾವುದಕ್ಕಾಗಿ? ನಾನು ಈ ಗಂಭೀರ ಪ್ರಯತ್ನವನ್ನು ಪ್ರತಿಯಾಗಿ ಏನನ್ನಾದರೂ ಗಳಿಸಲು ತೆಗೆದುಕೊಂಡಿಲ್ಲ. ಖ್ಯಾತಿಗಾಗಿ ಅಲ್ಲ. ಕೆಲವು ಲಾಭದಾಯಕ ವ್ಯವಹಾರಗಳಿಗಾಗಿ ಅಲ್ಲ ಅಥವಾ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಸ್ಥಾನಕ್ಕಾಗಿ ಅಲ್ಲ. ಈ ನಗರ ಮತ್ತು ಈ ದೇಶದ ಬಗ್ಗೆ ಶಾಂತ & ಪ್ರೀತಿಗಾಗಿ ಇದನ್ನು ಮಾಡಿದ್ದೇನೆ.
ಸಣ್ಣದಾಗಿದ್ದರೂ ಸಹ, ಕೆಲವು ಸಕಾರಾತ್ಮಕ ಬದಲಾವಣೆಯನ್ನು ತರುವುದು ಒಂದೇ ಉದ್ದೇಶವಾಗಿತ್ತು. ನನಗೆ ಬಂದಿರುವುದು ಎಲ್ಲಾ ಕಡೆಯಿಂದ ನಿಂದನೆ ಮತ್ತು ಬೆದರಿಕೆಗಳು ಮಾತ್ರ. ಈಗ ಎಲ್ಲವನ್ನೂ ನಿಲ್ಲಿಸುವ ಸಮಯ ಬಂದಿದೆ. ನಾನು ನನ್ನ ಸಮಯ, ಶಕ್ತಿ ಮತ್ತು ಶಾಂತಿಯನ್ನು ಸಾಕಷ್ಟು ನೀಡಿದ್ದೇನೆ. ಹೋರಾಟವನ್ನು ಇತರರು ಮುಂದಕ್ಕೆ ಸಾಗಿಸಲು ನಾನು ಬಿಡುತ್ತೇನೆ ವಿದಾಯ, ಬೆಂಗಳೂರು ಅಂತ ಬರೆದುಕೊಂಡಿದ್ದಾರೆ.
ಕನ್ನಡಿಗರ ಆಕ್ರೋಶ: ಇನ್ನು ಈ ಪೋಸ್ಟ್‌ಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿಗಿಂತ ನಿಮ್ಮ ಸೇವೆ ಬಿಹಾರಕ್ಕೆ ಅವಶ್ಯವಾಗಿದೆ. ಹೀಗಾಗಿ ನೀವು ಬಿಹಾರಕ್ಕೆ ಹೋಗಿ ಅಂತ ಕೆಲವರು ಕಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications