Bengaluru: ₹16,000 ಮೌಲ್ಯದ ದುಬಾರಿ ಶೂ ಕಳೆದುಕೊಂಡ ಟೆಕ್ಕಿ: FIR ದಾಖಲು
ಬೆಂಗಳೂರು, ನವೆಂಬರ್ 17: ಬೆಂಗಳೂರಿನಲ್ಲಿ ಮನೆಗಳ್ಳತನ, ಬೈಕ್ ಕಳ್ಳತನ ಸೇರಿದಂತೆ ಅನೇಕ ಕಳ್ಳತನ ನಡೆಯುತ್ತವೆ. ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗುತ್ತವೆ. ಇದೀಗ ಟೆಕ್ಕಿಯೊಬ್ಬರು ದುಬಾರಿ ಬೆಲೆಯ ಶೂ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಘಟನೆ ಬೆಂಗಳೂರಿನ ಬನಶಂಕರಿ III ಹಂತದಲ್ಲಿ ನಡೆದಿದೆ.
ಟೆಕ್ಕಿಯೊಬ್ಬರು ಬನಶಂಕರಿ ಮೂರನೇ ಹಂತದಲ್ಲಿ ಶ್ರೀ ಗಣೇಶ ದೇವಸ್ಥಾನಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ದಿನನಿತ್ಯ ಹೋಗುವಂತೆ ಹೋಗಿದ್ದರು. ರೂಪಾಯಿ 16,000 ಮೌಲ್ಯದ ಶೂಗಳನ್ನು ಕಳ್ಳತನವಾಗಿದೆ ಎಂದು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರಂಭದಲ್ಲಿ ಪೊಲೀಸರು ಈ ದೂರು ಸ್ವೀಕರಿಸಲು ಒಪ್ಪಲಿಲ್ಲ. ಇದೆಲ್ಲ ದೇವಸ್ಥಾನ ಮುಂದೆ ಸಾಮಾನ್ಯ ಎಂದು ಹೇಳಲಿದ್ದಾರೆ. ಬಳಿಕ ಒತ್ತಾಯದ ಮೇರೆಗೆ FIR ದಾಖಲಾಗಿದೆ.

ದುಬಾರಿ ಬೆಲೆಯ ಶೂ ಕಳೆದುಕೊಂಡ ವ್ಯಕ್ತಿ ಗಿರಿನಗರ ನಿವಾಸಿ. ತಾವು ಆರು ತಿಂಗಳ ಹಿಂದೆ ಖರೀದಿಸಿದ ತನ್ನ ಶೂಗಳನ್ನು ನವೆಂಬರ್ 6ರಂದು ಸಂಜೆ 7.20 ರಿಂದ 7.25 ರ ನಡುವೆ ದೇವಸ್ಥಾನದ ಮುಂದೆ ಕಳ್ಳತನವಾಗಿದೆ. ನಾನು ಬೈಕ್‌ನಲ್ಲಿ ದೇವಸ್ಥಾನಕ್ಕೆ ತೆರಳಿದ್ದೆ. ಆಗ ಆಚೆ ಬಿಟ್ಟಿದ್ದ ಆಸಿಕ್ಸ್ ಬ್ರಾಂಡೆಂಡ್ ಶೂಗಳನ್ನು ಬಿಟ್ಟು ಹೋಗಿದ್ದ ವೇಳೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೇವಸ್ಥಾನದ ಒಳಗೆ ಹೋಗಿ ಹೊರ ಬರುವ ಐದು ನಿಮಿಷಗಳಲ್ಲಿ ನನ್ನ ಶೂ ಕಾಣೆ ಆಗಿವೆ. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರನ್ನು ನಾನು ಸಂಪರ್ಕಿಸಿದೆ. ಪ್ರಯೋಜನವಾಗಲಿಲ್ಲ. "ದೇವಸ್ಥಾನದಲ್ಲಿ ಇದು ಸಾಮಾನ್ಯ ಸಮಸ್ಯೆ ಎಂದರು. ಕಳ್ಳರು ಅರ್ಚಕರನ್ನೂ ಸಹ ಬಿಟ್ಟಿಲ್ಲ. ಅವರ ಚಪ್ಪಲಿಗಳು ಸಹ ಈ ಹಿಂದೆ ಎರಡುಮೂರು ಬಾರಿ ಕಳ್ಳತನವಾಗಿವೆ. ನಾನು ಮಾತ್ರವಲ್ಲದೇ ಅನೇಕ ಭಕ್ತರು ತಮ್ಮ ಪಾದರಕ್ಷೆಗಳನ್ನು ಕಳೆದುಕೊಂಡಿದ್ದಾರೆ.
ದೇವಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿದೆ. ಕಳ್ಳನು ಬರಿಗಾಲಿನಲ್ಲಿ ನಡೆದುಕೊಂಡು ಹೋಗುವುದು, ಭಕ್ತರಂತೆ ನಟಿಸುವುದು ಕಾಣಿಸುತ್ತಿದೆ. ದೂರು ನೀಡಿದ್ದ ದೂರದಾರರ ದುಬಾರಿ ಶೂ ಹಾಕಿಕೊಂಡು ಹೋಗುವುದು ಕಾಣಿಸುತ್ತಿದೆ. ಈ ಹಿಂದೆಯು ಒಂದೆರಡು ಪಾದರಕ್ಷೆ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾರೆ. ದೇವಸ್ಥಾನ ಮುಂದೆ ಕದ್ದ ಚಪ್ಪಲಿಗಳನ್ನು 50-60 ಕಡಿಮೆ ಹಣಕ್ಕೆ ಮಾರುತ್ತಾರೆ ಎಂದು ತಿಳಿಸಿದ್ದಾರೆ.
ಬಿಎನ್‌ಎಸ್ ಸೆಕ್ಷನ್ 303 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ನೋಡಿಕೊಂಡು ಕಳ್ಳನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications