ಬೆಂಗಳೂರು: ಹಿಟ್ ಅಂಡ್ ರನ್ - ಟೆಕ್ಕಿ ಸಾವು

ಹರ್ಷ ಸೂರ್ಯ ನಾರಾಯಣ(30) ಸಾವನ್ನಪ್ಪಿದ ದುರ್ದೈವಿ. ಆಂಧ್ರಪ್ರದೇಶ ಮೂಲದ ಹರ್ಷ ಅವರು ಪತ್ನಿ ನೇಹಾ ಮತ್ತು ಕುಟುಂಬ ಸದಸ್ಯರೊಂದಿಗೆ ಜಾಲಹಳ್ಳಿಯ ಎಚ್‌ಎಂಟಿ ರಸ್ತೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಒಂದರಲ್ಲಿ ವಾಸವಾಗಿದ್ದರು.
ಹರ್ಷ ಅವರು ಪತ್ನಿಯ ಜೊತೆ ಅಂಗಡಿಯಿಂದ ಹಣ್ಣು ತೆಗೆದುಕೊಂಡು ಅಪಾರ್ಟ್‌ಮೆಂಟ್‌ಗೆ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ.[ಬೆಂಗಳೂರು: ಸುಲಿಗೆಗೆ ಯತ್ನಿಸಿದ ಇಬ್ಬರು ರೌಡಿಗಳ ಕೊಲೆ]
ಹರ್ಷ ದಂಪತಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವೇಗವಾಗಿ ಬಂದ ಕಾರು ಇವರಿಗೆ ಗುದ್ದಿದೆ. ಗಾಯಗೊಂಡ ದಂಪತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ತಲೆಗೆ ತೀವ್ರವಾಗಿ ಗಾಯಗೊಂಡ ಹರ್ಷ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ನೇಹಾ ಅವರ ತಲೆಗೆ ಪೆಟ್ಟಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಾರು ಚಾಲಕ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೇ ಮದ್ರಾಸ್ ರಸ್ತೆಯ ಸಾಫ್ಟ್‌ವೇರ್ ಕಂಪೆನಿಯಲ್ಲಿ ಹರ್ಷ ಅವರು ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.












Click it and Unblock the Notifications