ಉದ್ಯೋಗ ನೀಡುತ್ತೇನೆ ಎಂದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಬೆಂಗಳೂರಿನಲ್ಲಿ ಟೆಕ್ಕಿ ಬಂಧನ
ಬೆಂಗಳೂರು, ಫೆಬ್ರವರಿ. 03: ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಟೆಕ್ಕಿಯನ್ನು ಆಗ್ನೇಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 36 ವರ್ಷದ ದಿಲೀಪ್ ಪ್ರಸಾದ್ ಎಂದು ಗುರುತಿಸಲಾಗಿದೆ. ಮಹಿಳೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡುತ್ತಿದ್ದರು ಎಂದು ವರದಿಯಾಗಿದೆ.
A techie Dilleep Prasad has been arrested by #Bengaluru police for molesting women in the garb of offering them jobs. He used to pose as a women on insta gram offering jobs,and would lure them to Oyo rooms. More than 10-12 women have been exploited informs police. #Karnataka pic.twitter.com/9dkqHYiXQA
— Imran Khan (@KeypadGuerilla) February 3, 2023
ಆರೋಪಿಯು ದಿಲೀಪ್ ಮೋನಿಕಾ ಮತ್ತು ಮ್ಯಾನೇಜರ್ ಹೆಸರಿನಲ್ಲಿ ಎರಡು ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆರೆದಿದ್ದರು. ಈ ಖಾತೆಗಳ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಅವರನ್ನು ಓಯೋ ಕೊಠಡಿಗಳಿಗೆ, ಯಾವುದಾದರೂ ಸ್ಥಳಕ್ಕೆ ಬರುವಂತೆ ಆಹ್ವಾನಿಸಿ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ವಿಡಿಯೋಗಳನ್ನು ಬಳಸಿಕೊಂಡು ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲಸದ ಆಸೆಯಿಂದ ಬಂದ 10 ರಿಂದ 12ಕ್ಕೂ ಹೆಚ್ಚು ಮಹಿಳೆಯರು ಈ ಆರೋಪಿ ದಿಲೀಪ್ ಪ್ರಸಾದ್‌ರಿಂದ ಶೋಷಣೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉದ್ಯೋಗವನ್ನು ಹುಡುಕುತ್ತಿರುವ ವಿವಾಹಿತ ಮಹಿಳೆಯರನ್ನು ಗುರುತಿಸಿ ಅವರನ್ನು ಪರಿಚಯ ಮಾಡಿಕೊಂಡು ಪ್ರಮುಖ ಕಂಪನಿಗಳ ಹೆಸರುಗಳನ್ನು ಹೇಳಿ, ಉತ್ತಮ ಸಂಬಳ ಸಿಗುವ ಕೆಲಸ ಕೊಡಿಸುವ ಭರವಸೆ ನೀಡುತ್ತಿದ್ದರು. ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಮಹಿಳೆಯರ ಚಿತ್ರಗಳನ್ನು ಹಾಕಿ ತಾನು ಮಹಿಳೆ ಎಂದು ನಂಬಿಕೆ ಬರುವಂತೆ ನಟಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಆರೋಪಿ ದಿಲೀಪ್ ಪ್ರಸಾದ್ ಹಲವು ಮಹಿಳೆಯರಿಗೆ ವಂಚನೆ ಮಾಡಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಇದಲ್ಲದೆ ಆತನ ಮೊಬೈಲ್ ಫೋನ್‌ನಲ್ಲಿ ಹಲವು ಮಹಿಳೆಯರ ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications