ರಾಯಲ್ ಎನ್‌ಫೀಲ್ಡ್, ಕೆಟಿಎಂ ಟೆಸ್ಟ್‌ ರೈಡ್‌ ಹೋದ ಟೆಕ್ಕಿ ಪರಾರಿ

ಬೆಂಗಳೂರು, ಸೆಪ್ಟೆಂಬರ್ 18 : ಟೆಕ್ಕಿ ಎಂದು ಹೇಳಿಕೊಂಡ ಬಂದ ವ್ಯಕ್ತಿ ಕೆಟಿಎಂ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಸ್ಟ್‌ ರೈಡ್ ಹೋಗಿ ಬರುವುದಾಗಿ ವ್ಯಕ್ತಿ ಬೈಕ್ ತೆಗೆದುಕೊಂಡು ಹೋಗಿದ್ದ.

ಅಮಿತ್ ಕುಮಾರ್ ಶರ್ಮಾ ಎಂಬ ವ್ಯಕ್ತಿ ಸುಮಾರು 3 ಲಕ್ಷ ಮೌಲ್ಯದ ಕೆಟಿಎಂ 390 ಡ್ಯೂಕ್, 1.8 ಲಕ್ಷ ರೂ. ಮೌಲ್ಯದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಜೊತೆ ಪರಾರಿಯಾಗಿದ್ದಾನೆ. ತಿಲಕ್ ನಗರ ಮತ್ತು ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ನಗರದ 2 ಶೋ ರೂಂಗಳಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ನೀಡಿ, ಅಮಿತ್ ಕುಮಾರ್ ಶರ್ಮಾ ಕಳೆದ ವಾರ ಬೈಕ್ ಕಳುವು ಮಾಡಿದ್ದಾರೆ. ಬ್ರಾಂಡೆಡ್ ಬಟ್ಟೆಗಳನ್ನು ಹಾಕಿಕೊಂಡು ಬಂದಿದ್ದ ಅಮಿತ್ ಕುಮಾರ್ ಶರ್ಮಾ ಚೆನ್ನಾಗಿ ಇಂಗ್ಲಿಶ್ ಮತ್ತು ಹಿಂದಿ ಮಾತನಾಡುತ್ತಿದ್ದ.

Techie escapes with KTM and Royal Enfield bike

ತನ್ನನ್ನು ಟೆಕ್ಕಿ ಎಂದು ಪರಿಚಯ ಮಾಡಿಕೊಂಡಿದ್ದ ಆತ, ತಿಂಗಳಿಗೆ 3.5 ಲಕ್ಷ ಸಂಬಳವಿದೆ ಎಂದು ಬೈಕ್ ತೆಗೆದುಕೊಳ್ಳಲು ಇದ್ದ ಲೋನ್ ಬಗ್ಗೆ ವಿಚಾರಿಸಿದ್ದ. ಬಳಿಕ ಟೆಸ್ಟ್ ರೈಡ್ ಹೋಗಿ ಬರುವುದಾಗಿ ಹೇಳಿ ಬೈಕ್ ತೆಗೆದುಕೊಂಡು ಹೋದವನು ನಾಪತ್ತೆಯಾಗಿದ್ದಾನೆ.

ಮೊದಲು ಕೆಟಿಎಂ ಬೈಕ್ ಟೆಸ್ಟ್ ರೈಡ್‌ಗೆ ತೆಗೆದುಕೊಂಡು ಹೋಗಿದ್ದ ಅಮಿತ್ ಬೈಕ್ ಜೊತೆ ಪರಾರಿಯಾಗಿದ್ದ. ಎರಡು ದಿನಗಳ ಬಳಿಕ ಜಯಗನರದ ಶೋ ರೂಂನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಟೆಸ್ಟ್‌ ರೈಡ್‌ ತೆಗೆದುಕೊಂಡು ಹೋಗಿದ್ದ. ಆಗಲೂ ದೆಹಲಿ ವಿಳಾಸವಿರುವ ನಕಲಿ ಡ್ರೈವಿಂಗ್ ಲೈಸೆನ್ಸ್ ನೀಡಿದ್ದ.

ಐಪಿಸಿ ಸೆಕ್ಷನ್ 420 ವಂಚನೆ ಪ್ರಕರಣದ ದಾಖಲು ಮಾಡಿಕೊಂಡಿರುವ ಪೊಲೀಸರು ಅಮಿತ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆನ್‌ಲೈನ್ ಬೈಕ್ ಮಾರಾಟದ ವೆಬ್‌ಸೈಟ್‌ಗಳಲ್ಲಿ ಬೈಕ್ ಮಾರಾಟಕ್ಕೆ ಇಡಲಾಗಿದೆಯೇ? ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+