• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ

|

ಬೆಂಗಳೂರು, ಡಿಸೆಂಬರ್ 14: ಪತ್ನಿಯ ಕಿರುಕುಳ ಸಹಿಸಲಾರದೆ ಟೆಕ್ಕಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಟೆಕ್ಕಿ ಶ್ರೀನಾದ್ (39) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಆಂಧ್ರ ಪ್ರದೇಶ ಮೂಲದ ಟೆಕ್ಕಿ ಶ್ರೀನಾದ್ 2009ರಲ್ಲಿ ರೇಖಾ ಜೊತೆ ಮದುವೆಯಾಗಿತ್ತು. ದಂಪತಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಯಾಗಿದ್ದರು.

ತಂದೆ-ತಾಯಿಯ ಆಸ್ತಿಯನ್ನು ಪಡೆಯುವಂತೆ ಪತ್ನಿ ಒತ್ತಡ ಹಾಕುತ್ತಿದ್ದರು. ಇಲ್ಲದಿದ್ದರೆ ವಿಚ್ಛೇದನ ನೀಡುತ್ತೇನೆ ಎಂದು ಬೆದರಿಕೆಯನ್ನೂ ಒಡ್ಡಿದ್ದಳು. ಹೀಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು; ಟೆಕ್ಕಿ ಪತ್ನಿ ಆತ್ಮಹತ್ಯೆಗೆ ಶರಣು

ಶ್ರೀನಾದ್ ಕಷ್ಟಪಟ್ಟು ಒಂದು ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿ ಮಾಡಿದ್ದರು. ಪ್ರತಿ ತಿಂಗಳು ಇಎಂಐ ಕಟ್ಟುತ್ತಿದ್ದರು. ಆದರೆ ಪತ್ನಿ ಮಾತ್ರ ದುಂದುವೆಚ್ಚ ಮಾಡುತ್ತಾ ಐಷಾರಾಮಿ ಜೀವನ ಸಾಗಿಸುತ್ತಿದ್ದರು.

ಒಂದು ಲಕ್ಷ ರೂ. ಬಾಡಿಗೆ ಬರುವ ಆಸ್ತಿ ಕೊಡುವಂತೆ ಕೇಳು. ಇಲ್ಲದಿದ್ದರೆ ಡಿವೋರ್ಸ್ ನೀಡುತ್ತೇನೆ ಎಂದು ರೇಖಾ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ.

ಶುಕ್ರವಾರ ಸುಮಾರು 6.40ಕ್ಕೆ ಅಪಾರ್ಟ್ ಮೆಂಟ್‍ನ ವಾಚ್‍ಮ್ಯಾನ್ ಶ್ರೀನಾದ್ ಅವರ ತಂದೆ ನಾಗೇಶ್ವರ ರಾವ್‌ ಕರೆ ಮಾಡಿ ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಬೆಳ್ಳಂದೂರು ಪೊಲೀಸರು ರೇಖಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Techie Shrinad Committed Suicide in Bengaluru For Wife Harassment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X